Site icon Vistara News

Onion price | ಈರುಳ್ಳಿ ದಾಸ್ತಾನು ಸಮೃದ್ಧ, ಮುಂಬರುವ ವಾರಗಳಲ್ಲಿ ದರ ಏರಿಕೆ ಸಾಧ್ಯತೆ ಇಲ್ಲ: ಕೇಂದ್ರ ಭರವಸೆ

onion

ನವ ದೆಹಲಿ: ದೇಶದಲ್ಲಿ ಈರುಳ್ಳಿಯ ಕಾಪು ದಾಸ್ತಾನು ಸಮೃದ್ಧವಾಗಿದ್ದು, ಮುಂಬರುವ ವಾರಗಳಲ್ಲಿ ಈರುಳ್ಳಿ ದರ ಏರಿಕೆ (Onion price) ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಅಕಾಲಿಕ ಮಳೆಯಿಂದ ಮುಂಗಾರು ಅವಧಿಯ ಈರುಳ್ಳಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿರಬಹುದು. ಆದರೆ ಯಾವುದೇ ಕೊರತೆಯನ್ನು ನೀಗಿಸಲು ಕಾಪು ದಾಸ್ತಾನು ಸಶಕ್ತವಾಗಿದೆ ಎಂದು ಸರ್ಕಾರ ತಿಳಿಸಿದೆ.

ಡಿಸೆಂಬರ್‌ ತನಕ ಈರುಳ್ಳಿ ಮತ್ತು ಬೇಳೆ ಕಾಳುಗಳ ದರಗಳಲ್ಲಿ ಏರಿಕೆ ಆಗುವ ಸಾಧ್ಯತೆ ಇಲ್ಲ. ಸಾಕಷ್ಟು ಕಾಪು ದಾಸ್ತಾನು ಇದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ 54,000 ಟನ್‌ ಈರುಳ್ಳಿಯನ್ನು ದಾಸ್ತಾನಿನಿಂದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ.

45% ಈರುಳ್ಳಿ ಉತ್ಪಾದನೆ ಮುಂಗಾರು ಅವಧಿಯಲ್ಲಿ ಆಗುತ್ತದೆ. ಮಿಕ್ಕಿದ್ದು ಚಳಿಗಾಲದ ಅವಧಿಯಲ್ಲಿ ಆಗುತ್ತದೆ. 43.82 ಲಕ್ಷ ಟನ್‌ ಬೇಳೆ ಕಾಳುಗಳ ದಾಸ್ತಾನನ್ನೂ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

Exit mobile version