ನವ ದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ ಗಳು ಸುಮಾರು 300 ಹೊಸ ಶಾಖೆಗಳನ್ನು ೨೦೨೨ರ ಡಿಸೆಂಬರ್ ಒಳಗಾಗಿ ಆರಂಭಿಸಲಿವೆ. 3,000ಕ್ಕೂ ಹೆಚ್ಚು ನಿವಾಸಿಗಳು ಇರುವ, ಆದರೆ ಬ್ಯಾಂಕ್ ಸೌಲಭ್ಯ ಇರದ (PSU Banks) ಗ್ರಾಮಗಳಲ್ಲಿ ಈ ಬ್ಯಾಂಕ್ ಶಾಖೆಗಳು ಅಸ್ತಿತ್ವಕ್ಕೆ ಬರಲಿವೆ.
ರಾಜಸ್ಥಾನದಲ್ಲಿ 95, ಮಧ್ಯಪ್ರದೇಶದಲ್ಲಿ 54, ಗುಜರಾತ್‌ನಲ್ಲಿ 38, ಮಹಾರಾಷ್ಟ್ರದಲ್ಲಿ 32, ಉತ್ತರಪ್ರದೇಶದಲ್ಲಿ 31 ಶಾಖೆಗಳು ಅಸ್ತಿತ್ವಕ್ಕೆ ಬರಲಿದೆ.
ಇತ್ತೀಚೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಖ್ಯಸ್ಥರ ಜತೆಗೆ ನಡೆದ ಸಭೆಯಲ್ಲಿ ಹೊಸ ಶಾಖೆಗಳನ್ನು ತೆರೆಯುವುದರ ಬಗ್ಗೆ ಚರ್ಚಿಸಲಾಯಿತು. ಬ್ಯಾಂಕ್ ಆಫ್ ಬರೋಡಾ 76 ಶಾಖೆಗಳನ್ನು ತೆರೆಯಲಿದೆ. ಗ್ರಾಮೀಣ ಪ್ರದೇಶದ ಬಡವರಿಗೆ, ಜನ ಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆ ಒದಗಿಸಲು ಇದರಿಂದ ಸಾಧ್ಯವಾಗಲಿದೆ.