Site icon Vistara News

Overnight fund : ಏನಿದು ಓವರ್‌ನೈಟ್‌ ಮ್ಯೂಚುವಲ್‌ ಫಂಡ್‌, ಹೂಡಿಕೆದಾರರಿಗೆ ಲಾಭವೇನು?

cash

ಸೆಬಿಯ ಪ್ರಕಾರ ಓವರ್‌ನೈಟ್‌ ಮ್ಯೂಚುವಲ್‌ ಫಂಡ್‌ (Overnight mutual fund) ಎಂದರೆ ಓಪನ್‌ ಎಂಡೆಡ್‌ ಡೆಟ್‌ ಮ್ಯೂಚುವಲ್‌ ಫಂಡ್‌ ಆಗಿದೆ. ಇದು ಒಂದೇ ದಿನದಲ್ಲಿ ಮೆಚ್ಯೂರಿಟಿ ಆಗುವ ಮನಿ ಮಾರ್ಕೆಟ್‌ ಸಾಧನಗಳಲ್ಲಿ ಹೂಡಿಕೆ ಮಾಡುತ್ತದೆ. ಈ ಓವರ್‌ ನೈಟ್‌ ಮ್ಯೂಚುವಲ್‌ ಫಂಡ್‌ಗಳು ಅತ್ಯಲ್ಪ ರಿಸ್ಕ್‌ ಇನ್ವೆಸ್ಟ್‌ಮೆಂಟ್‌ ಸಾಧನಗಳಾಗಿವೆ. ಏಕೆಂದರೆ ಅತ್ಯಧಿಕ ಲಿಕ್ವಿಡಿಟಿಯನ್ನು ಹೊಂದಿವೆ. ಹೀಗಾಗಿ ಡಿಫಾಲ್ಟ್‌ ಆಗುವ ರಿಸ್ಕ್‌ ಕಡಿಮೆಯಾಗಿರುತ್ತದೆ. ಈ ಸೆಕ್ಯುರಿಟಿಗಳು ಒಂದು ದಿನದಲ್ಲಿ ಮೆಚ್ಯೂರ್‌ ಆಗುವುದರಿಂದ ಫಂಡ್‌ ಮ್ಯಾನೇಜರ್‌ಗಳು ಹೊಸ ಸೆಕ್ಯುರಿಟಿಗಳನ್ನು ಖರೀದಿಸುವ ಪ್ರಕ್ರಿಯೆ ಮಾಡುತ್ತಾರೆ. ಹಾಗೂ ಇದು ನಿರಂತರ ನಡೆಯುತ್ತದೆ. ಈ ಸರ್ಕಲ್‌ ಸದಾ ನಡೆಯುತ್ತಿರುತ್ತದೆ. ಇವುಗಳು ಬಡ್ಡಿ ದರಗಳ ಏರಿಳಿತದ ರಿಸ್ಕ್‌ ಮತ್ತು ಡಿಫಾಲ್ಟ್‌ ಆಗುವ ರಿಸ್ಕ್‌ ವಿರುದ್ಧ ಇಮ್ಯುನಿಟಿಯನ್ನು ಹೊಂದಿರುತ್ತದೆ. ಇದು ಈ ಓವರ್‌ನೈಟ್‌ ಫಂಡ್‌ಗಳ ಅತಿ ದೊಡ್ಡ ವಿಶೇಷತೆ. ಏಕೆಂದರೆ ಸೆಕ್ಯುರಿಟಿಗಳು ಮರು ದಿನವೇ ಮೆಚ್ಯೂರಿಟಿಗೆ ಬರುತ್ತವೆ.

ಓವರ್‌ ನೈಟ್‌ ಫಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಓವರ್‌ ನೈಟ್‌ಮ್ಯೂಚುವಲ್‌ ಫಂಡ್‌ಗಳು ವೈವಿಧ್ಯಮಯವಾದ ಡೆಟ್‌ ಸೆಕ್ಯುರಿಟಿಗಳಲ್ಲಿ (ಸಾಲಪತ್ರ) ಹೂಡಿಕೆ ಮಾಡುತ್ತವೆ. ಪ್ರತಿಯೊಂದು ಸೆಕ್ಯುರಿಟಿಯೂ ಕೇವಲ ಒಂದೇ ದಿನದಲ್ಲಿ ಮೆಚ್ಯೂರಿಟಿ ಆಗುವುದರಿಂದ ದಿನ ನಿತ್ಯ ಬದಲಾವಣೆ ಚಾಲ್ತಿಯಲ್ಲಿರುತ್ತದೆ. ಮೆಚ್ಯೂರಿಟಿ ಅವಧಿಯ ಸೆಕ್ಯುರಿಟಿಗಳಲ್ಲಿ ಒಂದು ದಿನಕ್ಕಿಂತ ಹೆಚ್ಚು ಅವಧಿಗೆ ಹೂಡಿಕೆ ಮಾಡದಂತೆ ಸೆಬಿಯ ನಿರ್ಬಂಧವೂ ಇರುತ್ತದೆ. ಈ ಸೆಕ್ಯುರಿಟಿಗಳಿಂದ ಬಡ್ಡಿ ದರ ಸಿಗುವುದರಿಂದ ಅಸೆಟ್‌ ಅಂಡರ್‌ ಮ್ಯಾನೇಜ್‌ ಮೆಂಟ್‌ (AUM) ಹೆಚ್ಚುತ್ತಾ ಹೋಗುತ್ತದೆ.

ಓವರ್‌ನೈಟ್‌ ಫಂಡ್‌ನ ಉದ್ದೇಶವೇನು? ಹೂಡಿಕೆದಾರರಿಗೆ ಅವರ ಹೆಚ್ಚುವರಿ ಫಂಡ್‌ ಅನ್ನು ಸುರಕ್ಷಿತ ಸಾಧನದಲ್ಲಿ, ಅಲ್ಪ ಅವಧಿಗೆ ಹೂಡಿಕೆ ಮಾಡುವುದು, ಫಂಡ್‌ ಅನನು ಸಂರಕ್ಷಿಸುವದು ಹಾಗೂ ಸಾಂಪ್ರದಾಯಿಕ ಸೇವಿಂಗ್ಸ್‌ ಅಕೌಂಟ್‌ಗೆ ಹೋಲಿಸಿದರೆ ಹೆಚ್ಚು ರಿಟರ್ನ್‌ ಕೊಡುವುದು ಇದರ ಉದ್ದೇಶವಾಗಿದೆ.

ಓವರ್‌ ನೈಟ್‌ ಫಂಡ್‌ಗಳಲ್ಲಿ ಯಾರು ಹೂಡಿಕೆ ಮಾಡಬಹುದು? ಈ ಕೆಳಕಂಡ ಕೆಟಗರಿಯವರಿಗೆ ಓವರ್‌ ನೈಟ್‌ ಮ್ಯೂಚುವಲ್‌ ಫಂಡ್‌ ಲಾಭದಾಯಕವಾಗಿರುತ್ತದೆ. ಮೊದಲನೆಯದಾಗಿ ಅಲ್ಪ ಅವಧಿಗೆ ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಹೂಡಿಕೆ ಮಾಡಲು ಬಯಸುವವರು ಹೂಡಿಕೆ ಮಾಡಬಹುದು. ತಕ್ಷಣದ ಬಳಕೆಗೆ ಬೇಕಾಗಿಲ್ಲ ಎನ್ನುವವರು ಇಲ್ಲಿ ಇನ್ವೆಸ್ಟ್‌ ಮಾಡಬಹುದು.

ಒಂದು ಕಡೆ ಸುರಕ್ಷತೆ ಹಾಗೂ ಮತ್ತೊಂದು ಕಡೆ ಹೆಚ್ಚಿನ ಲಿಕ್ವಿಡಿಟಿ ಬೇಕು ಎಂದು ಬಯಸುವವರು ಓವರ್‌ ನೈಟ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಸೇಫ್ಟಿ-ಲಿಕ್ವಿಡಿಟಿ ದೃಷ್ಟಿಯಿಂದ ಆದಾಯ ಸ್ವಲ್ಪ ಕಡಿಮೆ ಆದ್ರೂ ಪರ್ವಾಗಿಲ್ಲ ಎನ್ನುವ ಮನಸ್ಥಿತಿಯವರು ಇದರಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: Mutual fund : ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿನ 11 ಕೆಟಗರಿಗಳ ವಿಶೇಷವೇನು?

ತೆರಿಗೆ ಲೆಕ್ಕಾಚಾರ ಹೇಗೆ? ಓವರ್‌ ನೈಟ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆದಾರರಿಗೆ ಸಿಗುವ ಆದಾಯವು ಡೆಟ್‌ ಮ್ಯೂಚುವಲ್‌ ಫಂಡ್‌ ಗಳಿಗೆ ಅನ್ವಯವಾಗುವಂತೆ ತೆರಿಗೆಯ ನಿಯಮಗಳಿಗೆ ಒಳಪಡುತ್ತದೆ. ಖರೀದಿಸಿದ ಮೂರು ವರ್ಷದೊಳಗೆ ರಿಡೀಮ್‌ ಮಾಡಿದರೆ ಶಾರ್ಟ್‌ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ಗೆ ಒಳಪಡುತ್ತವೆ. ಖರೀದಿಸಿದ ಮೂರು ವರ್ಷಗಳ ಬಳಿಕ ರಿಡೀಮ್‌ ಮಾಡಿದರೆ ಲಾಂಗ್‌ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ ಅನ್ವಯಿಸುತ್ತದೆ. ಬಳಿಕ 20% ಫ್ಲಾಟ್‌ ರೇಟ್‌ ಅನ್ವಯವಾಗುತ್ತದೆ.

ಓವರ್‌ ನೈಟ್‌ ಫಂಡ್‌ಗಳ ಅನುಕೂಲಗಳು ಏನು? ಲೋ ರಿಸ್ಕ್‌ , ಲಿಕ್ವಿಡಿಟಿ, ಸಾಂಪ್ರದಾಯಿಕ ಉಳಿತಾಯ ಖಾತೆಗಿಂತ ಹೆಚ್ಚಿನ ಆದಾಯ, ಹೂಡಿಕೆಯಲ್ಲಿ ಫ್ಲೆಕ್ಸಿಬಿಲಿಟಿ ಓವರ್‌ ನೈಟ್‌ ಫಂಡ್‌ಗಳ ಅನುಕೂಲಗಳಾಗಿವೆ. ಬಂಡವಾಳದ ರಕ್ಷಣೆ, ಲಿಕ್ವಿಡಿಟಿ ಮತ್ತು ತಕ್ಕಮಟ್ಟಿಗೆ ಉತ್ತಮ ರಿಟರ್ನ್‌ ಬಯಸುವವರಿಗೆ ಇದು ಉತ್ತಮ ಆಯ್ಕೆ.

Exit mobile version