ನವ ದೆಹಲಿ: ಐಪಿಒಗೆ ಸಜ್ಜಾಗುತ್ತಿರುವ ಓಯೋ ಕಂಪನಿಯಲ್ಲಿ 600 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಒಟ್ಟು 3,700 ಸಿಬ್ಬಂದಿಯನ್ನು ಓಯೋ ಒಳಗೊಂಡಿದ್ದು, 10% ತನಕ ಉದ್ಯೋಗ ಕಡಿತ ಮಾಡುವುದಾಗಿ ತಿಳಿಸಿದೆ. ಜತೆಗೆ 250 ಮಂದಿಯನ್ನು ನೇಮಕ ಮಾಡಿಕೊಳ್ಳುವುದಾಗಿಯೂ ತಿಳಿಸಿದೆ.
ತನ್ನ ಪ್ರಾಡಕ್ಟ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಹಾಗೂ ಓಯೊ ವೆಕೇಶನ್ ಹೋಮ್ಸ್ ತಂಡದಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಓಯೋ ತಿಳಿಸಿದೆ.
ರಿಲೇಶನ್‌ಶಿಪ್ ಮ್ಯಾನೇಜ್‌ಮೆಂಟ್ ಟೀಮ್‌ಗಳಲ್ಲಿ 250 ಮಂದಿಯನ್ನು ಓಯೋ ನೇಮಿಸಲಿದೆ ಎಂದು ಕಂಪನಿಯಸ್ಥಾಪಕ ರಿತೇಶ್ ಅಗ್ರವಾಲ್ ತಿಳಿಸಿದ್ದಾರೆ.