Site icon Vistara News

Palm Oil | ತಾಳೆ ಎಣ್ಣೆ ದರ 1 ವರ್ಷದಲ್ಲೇ ಕನಿಷ್ಠ; ಆದರೂ ಸೋಪ್‌, ಕಾಸ್ಮೆಟಿಕ್ಸ್‌ ದರ ಇಳಿಸದ ಕಂಪನಿಗಳು

palm oil

ನವ ದೆಹಲಿ: ತಾಳೆ ಎಣ್ಣೆಯ ದರ ಕಳೆದ ಒಂದು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ, ಸಂಸ್ಕರಿತ ಪದಾರ್ಥಗಳು, ಕಾಸ್ಮೆಟಿಕ್ಸ್‌, ಸೋಪ್‌ ಮತ್ತಿತರ ಉತ್ಪನ್ನಗಳ ದರವನ್ನು ಇಳಿಸಿ (Palm Oil) ಗ್ರಾಹಕರಿಗೆ ಲಾಭ ವರ್ಗಾಯಿಸಲು ಕಂಪನಿಗಳು ನಿರಾಕರಿಸಿವೆ. ಇದಕ್ಕೆ ಕಾರಣ ಇತರ ಕಚ್ಚಾ ವಸ್ತುಗಳ ದರ ಏರಿಕೆಯಾಗಿರುವುದು.

ಹೀಗಿದ್ದರೂ, ಖಾದ್ಯ ತೈಲ ಉತ್ಪಾದಕರು ಅಂತಾರಾಷ್ಟ್ರೀಯ ದರ ಇಳಿದ ಬೆನ್ನಲ್ಲೇ ಗ್ರಾಹಕರಿಗೆ ಅಡುಗೆ ಎಣ್ಣೆಯ ದರ ಇಳಿಸಿವೆ. ಹಿಂದುಸ್ತಾನ್‌ ಯುನಿಲಿವರ್‌, ನೆಸ್ಲೆ ಸೇರಿದಂತೆ ಹಲವು ಕಂಪನಿಗಳು ತಾಳೆ ಎಣ್ಣೆಯನ್ನು ಕಾಸ್ಮೆಟಿಕ್ಸ್‌, ಸೋಪ್‌ ತಯಾರಿಕೆಯಲ್ಲಿ ಬಳಸುತ್ತವೆ. ಇವೆಲ್ಲವೂ ಸಂಸ್ಕರಿತ ಪದಾರ್ಥಗಳ ವಲಯಕ್ಕೆ ಬರುತ್ತವೆ. ಆದರೆ ಇತರ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದ ಪರಿಣಾಮ ಗ್ರಾಹಕರಿಗೆ ದರ ಇಳಿಕೆ ಮಾಡಲು ಕಂಪನಿಗಳು ನಕಾರ ವ್ಯಕ್ತಪಡಿಸಿವೆ.

ಮಲೇಷ್ಯಾ ತಾಳೆ ಎಣ್ಣೆ ದರ ಇಳಿಕೆ: ಮಲೇಷ್ಯಾ ಮೂಲದ ತಾಳೆ ಎಣ್ಣೆ ದರದಲ್ಲಿ 8% ಇಳಿಕೆಯಾಗಿದೆ. ಇದು ಭಾರತಕ್ಕೆ ಅನುಕೂಲಕರವಾಗಿದೆ. ಭಾರತ ಪ್ರತಿ ವರ್ಷ 1.35 ಕೋಟಿ ಟನ್‌ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ 63% ಖಾದ್ಯ ತೈಲವಾಗಿದೆ.

Exit mobile version