Site icon Vistara News

ವಿಸ್ತಾರ Money Guide : ಪ್ಯಾನ್ -ಆಧಾರ್‌ ಲಿಂಕ್‌ ಗಡುವು ಸಮೀಪ, ತಪ್ಪಿದರೆ ಏನು?

PAN -Aadhaar

ನವ ದೆಹಲಿ: ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಲಿಂಕ್‌ ಮಾಡಲು 2023ರ ಜೂನ್‌ 30 ಕೊನೆಯ ದಿನವಾಗಿದೆ. ಬಳಿಕ ಲಿಂಕ್‌ ಮಾಡದಿದ್ದರೆ ಜುಲೈ 1ರಿಂದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಲಿದೆ. ಆದರೆ ಈ ಹಿಂದೆ ಹಲವಾರು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಆದರೆ ಈ ಸಲ ಗಡುವು ವಿಸ್ತರಣೆಯಾಗಲಿದೆಯೇ ಇಲ್ಲವೇ ( PAN-Aadhaar) ಎಂಬ ಸಂದೇಹ ಉಂಟಾಗಿದೆ.

ಈ ಹಿಂದೆ ಪ್ಯಾನ್-‌ ಆಧಾರ್‌ ಲಿಂಕ್‌ ಮಾಡಲು 2022ರ ಮಾರ್ಚ್‌ 31ರ ಗಡುವು ಇತ್ತು. ಬಳಿಕ 500 ರೂ. ಶುಲ್ಕದೊಂದಿಗೆ 2022ರ ಜೂನ್‌ 30ಕ್ಕೆ ಮುಂದೂಡಲಾಯಿತು. ನಂತರ 2023ರ ಮಾರ್ಚ್‌ 31ಕ್ಕೆ 1,000 ರೂ. ದಂಡ ಸಹಿತ ವಿಸ್ತರಿಸಲಾಯಿತು. ಮತ್ತೆ 2023ರ ಜೂನ್‌ 30ಕ್ಕೆ ವಿಸ್ತರಿಸಲಾಯಿತು. ಹೀಗಾಗಿ ಮತ್ತೊಮ್ಮೆ ಮುಂದೂಡಿಕೆಯ ಸಾಧ್ಯತೆ ಕ್ಷೀಣಿಸಿದೆ ಎಂದೂ ತೆರಿಗೆ ತಜ್ಞರು ಹೇಳುತ್ತಾರೆ.

ಟ್ಯಾಕ್ಸ್‌ಬುಡ್ಡಿ ಡಾಟ್‌ಕಾಮ್‌ನ ಸಿಇಒ ಸುಜಿತ್‌ ಬಂಗಾರ್‌ ಅವರ ಪ್ರಕಾರ, ಪ್ಯಾನ್- ಆಧಾರ್‌ ಲಿಂಕಿಂಗ್‌ ಮಹತ್ವಪೂರ್ಣ. ಈ ಸಲ ಆದಾಯ ತೆರಿಗೆ ಇಲಾಖೆ ವ್ಯಾಪಕವಾಗಿ ಜನ ಜಾಗೃತಿ ಮೂಡಿಸಿದೆ. ಹೀಗಾಗಿ ಮತ್ತೊಮ್ಮೆ ವಿಸ್ತರಣೆಯ ನಿರೀಕ್ಷೆ ಕ್ಷೀಣವಾಗಿದೆ ಎನ್ನುತ್ತಾರೆ ಅವರು.‌

ಪ್ಯಾನ್-ಆಧಾರ್‌ ಲಿಂಕ್‌ ಹೇಗೆ?

ಲಿಂಕ್‌ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಆಧಾರ್‌ ಜತೆ ಪ್ಯಾನ್‌ ಕಾರ್ಡ್‌ ಲಿಂಕ್‌ ಆಗಿದೆಯೇ ಎಂದು ಆನ್‌ಲೈನ್‌ ಮೂಲಕ ಪರಿಶೀಲಿಸಬಹುದು. ಅದು ಹೀಗಿದೆ-

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ತೆರಳಿ (www.incometax.gov.in)

ಲಿಂಕ್‌ ಆಧಾರ್‌ ಸ್ಟೇಟಸ್‌ ಆಯ್ಕೆ ಮಾಡಿಕೊಳ್ಳಿ. ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆ ನಮೂದಿಸಿ.

ವ್ಯೂ ಲಿಂಕ್‌ ಆಧಾರ್‌ ಸ್ಟೇಟಸ್‌ ಕ್ಲಿಕ್ಕಿಸಿ. (view link aadhaar status)

ಆಧಾರ್-ಪ್ಯಾನ್‌ ಸ್ಟೇಟಸ್‌ ಪೇಜ್‌ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಆಧಾರ್-ಪ್ಯಾನ್‌ ಲಿಂಕ್‌ ಆಗಿದ್ದರೆ Your PAN is linked to Aadhaar number. ಎಂಬ ಸಂದೇಶ ಕಾಣಿಸುತ್ತದೆ.

ಆನ್‌ಲೈನ್‌ ಮೂಲಕ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಆಧಾರ್-ಪ್ಯಾನ್‌ ಕಾರ್ಡ್ ಲಿಂಕ್‌ ಮಾಡಲು ಸಾಧ್ಯ ಇರುವುದರಿಂದ ದಂಡ ಪಾವತಿಸಿ ಲಿಂಕ್‌ ಮಾಡಿಸಿಕೊಳ್ಳುವುದು ಸೂಕ್ತ.‌ ಪ್ಯಾನ್‌ ಕಾರ್ಡ್‌ ಹಲವು ಸಂದರ್ಭಗಳಲ್ಲಿ ಅಗತ್ಯವಾಗಿರುವುದರಿಂದ, ಆಧಾರ್-ಪ್ಯಾನ್‌ ಲಿಂಕ್‌ ಮಾಡಲು ಕಡೆಗಣಿಸದಿರುವುದು ಉತ್ತಮ.

ಪ್ಯಾನ್ – ಆಧಾರ್‌ ಲಿಂಕ್‌ ಅನ್ನು 2023ರ ಜೂನ್‌ 30 ರೊಳಗೆ ಮಾಡದಿದ್ದರೆ, ಬಳಿಕ 1,000 ರೂ. ದಂಡ ಕಟ್ಟಬೇಕಾಗುತ್ತದೆ. ಪ್ಯಾನ್‌ ನಿಷ್ಕ್ರಿಯವಾದರೆ ಯಾವುದೇ ಆದಾಯ ತೆರಿಗೆಯ ರಿಫಂಡ್‌ ಸಿಗುವುದಿಲ್ಲ. ಟಿಡಿಎಸ್‌ ಮತ್ತು ಟಿಸಿಎಸ್‌ ದರ ಹೆಚ್ಚುತ್ತದೆ. ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಬಹುದು. ಸಬ್ಸಿಡಿ, ಪಾಸ್‌ ಪೋರ್ಟ್‌, ಬ್ಯಾಂಕ್‌ ಖಾತೆ ತೆರೆಯುವಲ್ಲಿ ಅಡಚಣೆ ಆದೀತು.

ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದು ಹೀದರೆ ಅಥವಾ ಡ್ಯಾಮೇಜ್‌ ಆಗಿದ್ದರೆ ಹೊಸ ಪ್ಯಾನ್‌ ಕಾರ್ಡಿಗೆ ಅರ್ಜಿ ಹಾಕುತ್ತೀರಿ ಅಲ್ಲವೇ. ಆಗ ಪ್ಯಾನ್‌ – ಆಧಾರ್‌ ಲಿಂಕ್‌ ಆಗಿರದಿದ್ದರೆ ಸವಾಲಾಗಿ ಪರಿಣಮಿಸಬಹುದು. ಏಕೆಂದರೆ ಸರ್ಕಾರ ಹೊಸ ಪ್ಯಾನ್‌ ಕಾರ್ಡಿಗೆ ಅರ್ಜಿ ಹಾಕುವಾಗ ಆಧಾರ್-ಪ್ಯಾನ್‌ ಲಿಂಕ್‌ ಆಗಿರಬೇಕು.

ಇದನ್ನೂ ಓದಿ: Aadhaar-PAN: ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆಗೆ ಇನ್ಮುಂದೆ ಆಧಾರ್​-ಪ್ಯಾನ್​ ಕಡ್ಡಾಯ; ಏನಿದೆ ಹೊಸ ನಿಯಮದಲ್ಲಿ?

Exit mobile version