Site icon Vistara News

PAN-Aadhaar linking : 1,000 ರೂ. ಶುಲ್ಕ ಕಟ್ಟಿಯೂ ಆಧಾರ್-ಪ್ಯಾನ್‌ ಲಿಂಕ್‌ ಆಗದಿದ್ದರೆ ಮುಂದೇನು: ಸಿಬಿಡಿಟಿ ಸ್ಪಷ್ಟನೆ

PAN Card and Aadhaar

#image_title

ನವ ದೆಹಲಿ: ಆದಾಯ ತೆರಿಗೆ ಇಲಾಖೆಯು ತನ್ನ ಟ್ವಿಟರ್‌ ಖಾತೆಯಲ್ಲಿ ಶುಕ್ರವಾರ ರಾತ್ರಿ ಪೋಸ್ಟ್‌ ಮಾಡಿರುವ ಸ್ಪಷ್ಟನೆಯೊಂದರಲ್ಲಿ, ಪ್ಯಾನ್ – ಆಧಾರ್‌ ಲಿಂಕ್‌ ಮಾಡುವಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ವಿವರಿಸಿದೆ. ಪ್ಯಾನ್‌ ಕಾರ್ಡ್‌-ಆಧಾರ್‌ ಲಿಂಕ್‌ ಮಾಡಲು ಗಡುವು ಮುಕ್ತಾಯವಾಗಲು ಕೆಲ ಗಂಟೆಗಳಿರುವಾಗ ಈ ಸ್ಪಷ್ಟನೆ ನೀಡಿದೆ.

ಪ್ಯಾನ್‌ ಖಾತೆದಾರರ ಗಮನಕ್ಕೆ, ಪ್ಯಾನ್‌ ಕಾರ್ಡ್‌ದಾರರು ಆಧಾರ್-‌ ಪ್ಯಾನ್‌ ಲಿಂಕ್‌ ಮಾಡುವ ಸಲುವಾಗಿ ವಿಳಂಬ ಶುಲ್ಕ 1000 ರೂ. ಪಾವತಿಸಿದ ಬಳಿಕ ಚಲನ್‌ ಅನ್ನು ಡೌನ್‌ ಲೋಡ್‌ ಮಾಡುವಲ್ಲಿ ಕಷ್ಟ ಎದುರಿಸಿದ್ದಾರೆ. ಆದ್ದರಿಂದ ಚಲನ್‌ ಪೇಮೆಂಟ್‌ನ ಸ್ಥಿತಿಗತಿಯನ್ನು ವೆಬ್‌ ಪೋರ್ಟಲ್‌ನ ಇ-ಪೇ ಟ್ಯಾಕ್ಸ್‌ ಟ್ಯಾಬ್‌ನಲ್ಲಿ ಲಾಗಿನ್‌ ಗಿ ಪರಿಶೀಲಿಸಬಹುದು. ಪೇಮೆಂಟ್‌ ಯಶಸ್ವಿಯಾಗಿದ್ದರೆ ಪ್ಯಾನ್‌ ಕಾರ್ಡ್‌ದಾರರು ಪ್ಯಾನ್ – ಆಧಾರ್‌ ಲಿಂಕ್‌ ಮುಂದುವರಿಸಬಹುದು.

ಇದನ್ನೂ ಓದಿ: PAN -Aadhaar linking : ಪ್ಯಾನ್-ಆಧಾರ್‌ ಲಿಂಕ್‌ ಮಾಡಲು ಮೂರೇ ದಿನ ಬಾಕಿ

ಪ್ಯಾನ್‌ ಅನ್ನು ಆಧಾರ್‌ ಜತೆಗೆ ಲಿಂಕ್‌ ಮಾಡಲು ಚಲನ್‌ ರಿಸಿಪ್ಟ್‌ ಅನ್ನು ಡೌನ್‌ಲೋಡ್‌ ಮಾಡಬೇಕಾದ ಅಗತ್ಯ ಇಲ್ಲ. ಶುಲ್ಕ ಪಾವತಿಸಿಯೂ 2023ರ ಜೂನ್‌ 30ರಂದು ಪ್ಯಾನ್-‌ ಆಧಾರ್‌ ಲಿಂಕ್‌ ಆಗದಿದ್ದರೆ ತೆರಿಗೆ ಇಲಾಖೆ ಅಂಥ ಕೇಸ್‌ ಗಳನ್ನು ಪರಿಶೀಲಿಸಲಿದೆ ಎಂದು ಇಲಾಖೆ ಟ್ವೀಟ್‌ ಮೂಲಕ ತಿಳಿಸಿದೆ. ಹೀಗಾಗಿ 1000 ರೂ. ವಿಳಂಬ ಶುಲ್ಕ ಪಾವತಿಸಿದ್ದರೂ, ಪ್ಯಾನ್-‌ ಆಧಾರ್‌ ಲಿಂಕ್‌ ಆಗದಿದ್ದರೆ ಆತಂಕಪಡಬೇಕಿಲ್ಲ. ಇಲಾಖೆ ಅಂಥ ಪ್ರಕರಣಗಳನ್ನು ಪರಿಶೀಲಿಸಿ ಸಹಕರಿಸಲಿದೆ. ತಾಂತ್ರಿಕ ಅಡಚಣೆ ಪರಿಣಾಮ ಕೆಲ ಪ್ಯಾನ್‌ ಕಾರ್ಡ್‌ದಾರರು ಶುಕ್ರವಾರ ಪರದಾಡಿದ್ದರು.

Exit mobile version