Site icon Vistara News

PAN Card Safety: ಪಾನ್ ಕಾರ್ಡ್ ದುರ್ಬಳಕೆಯಿಂದ ಪಾರಾಗುವುದು ಹೇಗೆ?

PAN Card Safety

ಪಾನ್ ಕಾರ್ಡ್‌ಗಳ (PAN Card Safety) ದುರುಪಯೋಗ ಭಾರತದಲ್ಲಿ (india) ಹೆಚ್ಚಾಗುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರು (senior citizens), ರೈತರು (farmers), ವಿದ್ಯಾರ್ಥಿಗಳು (students) ಇದಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಅದರಲ್ಲೂ ಪಾನ್ ಕಾರ್ಡ್ (pan card) ಬಳಕೆ, ಮಾಹಿತಿ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕಿದೆ.

ಪಾನ್ ಕಾರ್ಡ್ ಭಾರತದಲ್ಲಿನ ಹಣಕಾಸಿನ ವಹಿವಾಟುಗಳಿಗೆ ಪ್ರಮುಖ ದಾಖಲೆಯಾಗಿದೆ. ಹೀಗಾಗಿ ಇದನ್ನು ವಿವಿಧ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಹುದಾದ ಸಾಧ್ಯತೆಗಳಿವೆ. ಮುಂಬಯಿಯ ಹಿರಿಯ ನಾಗರಿಕರೊಬ್ಬರ ಪಾನ್ ವಿವರಗಳನ್ನು 1.3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟವನ್ನು ನೋಂದಾಯಿಸಲು ಬಳಸಿದ್ದಾರೆ ಎನ್ನುವುದು ಆದಾಯ ತೆರಿಗೆ ಇಲಾಖೆಯಿಂದ ತನಿಖೆಗೆ ಬಂದ ಬಳಿಕ ಗೊತ್ತಾಗಿದೆ.

ವಂಚಕರು ಸಾಮಾನ್ಯವಾಗಿ ತಂತ್ರಜ್ಞಾನದ ಬಗ್ಗೆ ತಿಳಿದಿರುತ್ತಾರೆ. ಹೀಗಾಗಿ ಅವರು ಹೆಚ್ಚು ಜಾಗರೂಕರಾಗಿರದ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ. ಅವರು ವಿವಿಧ ವಿಧಾನಗಳ ಮೂಲಕ ಪಾನ್ ವಿವರಗಳನ್ನು ಪಡೆದು ಅನಂತರ ಅವುಗಳನ್ನು ಕಾನೂನುಬಾಹಿರವಾಗಿ ಬಳಸುತ್ತಾರೆ.

ವಂಚನೆ ಹೇಗೆ?

ನಕಲಿ ಆಸ್ತಿ ನೋಂದಣಿ

ಮುಂಬಯಿ ಪ್ರಕರಣದಂತೆ ವಂಚಕರು ನಕಲಿ ಆಸ್ತಿ ಮಾರಾಟವನ್ನು ನೋಂದಾಯಿಸಲು ಪಾನ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಸಂತ್ರಸ್ತರಿಗೆ ತೆರಿಗೆ ನೊಟೀಸ್ ಜಾರಿಯಾಗಲು ಕಾರಣವಾಗಬಹುದು.

ಸಾಲ ಪಡೆಯಲು

ಕ್ರಿಮಿನಲ್‌ಗಳು ಫಿನ್‌ಟೆಕ್ ಅಪ್ಲಿಕೇಶನ್‌ಗಳ ಮೂಲಕ ಸಾಲಗಳನ್ನು ಪಡೆಯಲು ಪಾನ್ ವಿವರಗಳನ್ನು ಬಳಸಿಕೊಳ್ಳಬಹುದು. ಇದರಿಂದ ಸಂತ್ರಸ್ತರು ಅನಿರೀಕ್ಷಿತವಾಗಿ ಸಾಲಗಾರರಾಗಬಹುದು.


ಪಾನ್ ರಕ್ಷಿಸುವುದು ಹೇಗೆ?

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಪಾನ್ ಮಾಹಿತಿಯನ್ನು ಹಂಚಿಕೊಳ್ಳುವಾಗ ತೀವ್ರ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಪಾನ್ ವಿವರಗಳನ್ನು ಸರ್ಕಾರದಿಂದ ಅಧಿಕೃತವಾಗಿರುವ ಘಟಕಗಳೊಂದಿಗೆ ಮಾತ್ರ ಹಂಚಿಕೊಳ್ಳಿ. ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದರಿಂದ ದುರುಪಯೋಗದ ವಿರುದ್ಧ ಸ್ವಲ್ಪ ರಕ್ಷಣೆ ಪಡೆಯಬಹುದು.

ಪ್ಯಾನ್ ಕಾರ್ಡ್ ದುರುಪಯೋಗವನ್ನು ಪರಿಶೀಲಿಸುವುದು ಹೇಗೆ?

ಪಾನ್ ಕಾರ್ಡ್ ಹಗರಣವನ್ನು ಗುರುತಿಸಲು ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳಿವೆ.
ವಾರ್ಷಿಕ ಮಾಹಿತಿ ಪರಿಶೀಲಿಸಿ (AIS)

ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಈ ಡಾಕ್ಯುಮೆಂಟ್, ಬ್ಯಾಂಕ್‌ಗಳು ಮತ್ತು ಇತರ ಸಂಸ್ಥೆಗಳು ವರದಿ ಮಾಡಿರುವ ನಿಮ್ಮ ಹಣಕಾಸಿನ ವಹಿವಾಟಿನ ವಿವರವಾದ ದಾಖಲೆಯನ್ನು ಒದಗಿಸುತ್ತದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಾಗಿ ನಿಮ್ಮ ವಾರ್ಷಿಕ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸಿ.

ಕ್ರೆಡಿಟ್ ಸ್ಕೋರ್ ಮೇಲ್ವಿಚಾರಣೆ ಮಾಡಿ

CIBIL, Equifax, Experian ಅಥವಾ CRIF ಹೈ ಮಾರ್ಕ್ ನಂತಹ ಏಜೆನ್ಸಿಗಳ ಮೂಲಕ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಿ. ನಿಮಗೆ ತಿಳಿಯದೆ ನಿಮ್ಮ ಹೆಸರಿನಲ್ಲಿ ತೆಗೆದುಕೊಂಡ ಯಾವುದೇ ಸಾಲಗಳನ್ನು ಗುರುತಿಸಿ.

ಇದನ್ನೂ ಓದಿ: Elon Musk: ಟೆಸ್ಲಾದಲ್ಲಿ ಎಲಾನ್ ಮಸ್ಕ್ ಒಬ್ಬರ ಸಂಬಳ ಟಾಟಾ ಮೋಟಾರ್ಸ್‌ ಒಟ್ಟು ಆದಾಯಕ್ಕಿಂತ ಹೆಚ್ಚು!

ಹಣಕಾಸು ವರದಿಗಳನ್ನು ಪರೀಕ್ಷಿಸಿ

ಪೇಟಿಎಂ ಅಥವಾ ಬ್ಯಾಂಕ್ ಬಜಾರ್‌ನಂತಹ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಹಣಕಾಸು ವರದಿಗಳನ್ನು ಪಡೆಯಲು ಅನುಮತಿಸುತ್ತವೆ. ಈ ವರದಿಗಳನ್ನು ನಿಯಮಿತವಾಗಿ ಪರಿಶೀಲಿಸುವುದರಿಂದ ಯಾವುದೇ ಅನಧಿಕೃತ ವಹಿವಾಟುಗಳನ್ನು ಪತ್ತೆಹಚ್ಚಲು ಸಹಾಯವಾಗುವುದು.

ಜಾಗರೂಕರಾಗಿರಿ ಮತ್ತು ಕ್ರಮ ಕೈಗೊಳ್ಳಿ

ಪಾನ್ ಕಾರ್ಡ್ ಹಂಚಿಕೆ ವಿಚಾರದಲ್ಲಿ ಜಾಗರೂಕರಾಗಿರಿ. ಅನುಮಾನಾಸ್ಪದವಾಗಿ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಿ. ಇದರಿಂದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪಾನ್ ಕಾರ್ಡ್ ವಂಚನೆಗೆ ಬಲಿಯಾದರೆ ತಕ್ಷಣ ಪೊಲೀಸ್ ಇಲಾಖೆಗೆ ದೂರು ನೀಡಿ. ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪಾನ್ ವಿವರಗಳನ್ನು ರಕ್ಷಿಸುವುದು ಬಹಳ ಮುಖ್ಯ.

Exit mobile version