ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್‌ನಿಂದ ವಜಾಗೊಂಡಿರುವ ಭಾರತೀಯ ಮೂಲದ ಸಿಇಒ ಪರಾಗ್ ಅಗ್ರವಾಲ್ ( Parag Agrawal) ಅವರಿಗೆ ಕಂಪನಿಯಿಂದ 42 ದಶಲಕ್ಷ ಡಾಲರ್ (344 ಕೋಟಿ ರೂ.) ಪರಿಹಾರ ಪ್ಯಾಕೇಜ್ ಸಿಗುವ ನಿರೀಕ್ಷೆ ಇದೆ.
ಪರಾಗ್ ಅಗ್ರವಾಲ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಟ್ವಿಟರ್‌ನ ನೂತನ ಸಿಇಒ ಆಗಿ ಸೇರ್ಪಡೆಯಾಗಿದ್ದರು. ಈ ವರ್ಷ ಏಪ್ರಿಲ್‌ನಲ್ಲಿ ಟ್ವಿಟರ್ ಅನ್ನು ಉದ್ಯಮಿ ಎಲಾನ್ ಮಸ್ಕ್ ಖರೀದಿಸಲಿದ್ದಾರೆ ಎಂಬ ವದಂತಿ ಹರಡಿದಾಗ, ಪರಾಗ್ ಅಗ್ರವಾಲ್ ಅವರನ್ನು ಸೇವೆಯಿಂದ ವಜಾ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.
ಟ್ವಿಟರ್‌ನ ಈಗಿನ ಮ್ಯಾನೇಜ್‌ಮೆಂಟ್ ಬಗ್ಗೆ ತಮಗೆ ವಿಶ್ವಾಸ ಇಲ್ಲ ಎಂದು ಎಲಾನ್ ಮಸ್ಕ್ ಈ ಹಿಂದೆಯೇ ಹೇಳಿದ್ದರು.
ಇದನ್ನೂ ಓದಿ:Twitter | ಪರಾಗ್, ವಿಜಯಾಗೆ ಎಲಾನ್ ಮಸ್ಕ್ ಗೇಟ್‌ಪಾಸ್, ನೇಟಿಜನ್ಸ್ ಫುಲ್ ಟೈಮ್ ಪಾಸ್!