ನವ ದೆಹಲಿ: ಭಾರತದ ಪಾಸ್‌ಪೋರ್ಟ್ ಮತ್ತಷ್ಟು ಪ್ರಭಾವಶಾಲಿಯಾಗಿದ್ದು, 2023ರ ರ‍್ಯಾಂಕಿಂಗ್‌ನಲ್ಲಿ 87ರಿಂದ 80ಕ್ಕೆ ಸುಧಾರಿಸಿದೆ. (Passport ranking) ಹೀಗಾಗಿ ಈಗ ಭಾರತೀಯರು 57 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದು ವರದಿ ತಿಳಿಸಿದೆ.
ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ (Henley Passport Index) ಪ್ರಕಾರ ವಿಶ್ವದ ಅತ್ಯಂತ ಪ್ರಬಲ ಪಾಸ್ ಪೋರ್ಟ್ ಸಿಂಗಾಪುರದ್ದಾಗಿದೆ. ಜಪಾನ್ ಮೂರಕ್ಕೆ ಇಳಿದಿದೆ. ಸಿಂಗಾಪುರ ಪಾಸ್ ಪೋರ್ಟ್ ಇದ್ದರೆ 192 ದೇಶಗಳಿಗೆ ವೀಸಾ ಇಲ್ಲದೆಯೇ ನೇರವಾಗಿ ಪ್ರಯಾಣ ಮಾಡಬಹುದು.
ಜರ್ಮನಿ, ಇಟಲಿ ಮತ್ತು ಸ್ಪೇನ್ ಎರಡನೇ ಸ್ಥಾನಕ್ಕೆ ಏರಿದೆ. 190 ದೇಶಗಳಿಗೆ ಈ ದೇಶಗಳ ಪಾಸ್ ಪೋರ್ಟ್ ಮೂಲಕ ವೀಸಾ ಇಲ್ಲದೆ ಹೋಗಬಹುದು. ಆಸ್ಟ್ರಿಯಾ, ಫಿನ್ಲೆಂಡ್, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಸ್ವೀಡನ್ ಮೂರನೇ ಸ್ಥಾನದಲ್ಲಿದೆ. ಡೆನ್ಮಾರ್ಕ್, ಐರ್ಲೆಂಡ್, ನೆದರ್ಲೆಂಡ್ಸ್, ಬ್ರಿಟನ್ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ ಎಂಟನೇ ಸ್ಥಾನದಲ್ಲಿದೆ. ಒಂದು ಕಾಲದಲ್ಲಿ ಅಮೆರಿಕ ಪಾಸ್ ಪೋರ್ಟ್ ಟಾಪ್‌ನಲ್ಲಿ ಇರುತ್ತಿತ್ತು. ಪಾಕಿಸ್ತಾನ 100ನೇ ಸ್ಥಾನದಲ್ಲಿದೆ. ಅಪಘಾನಿಸ್ತಾನ 103ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Mutual fund : ಮ್ಯೂಚುವಲ್ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಕಳೆದ 18 ವರ್ಷಗಳಿಂದ ಬಿಡುಗಡೆಯಾಗುತ್ತಿದೆ. ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಥಾರಿಟಿ ನೀಡುವ ಡೇಟಾ ಆಧರಿಸಿ ಈ ಇಂಡೆಕ್ಸ್ ಬಿಡುಗಡೆಯಾಗುತ್ತದೆ. ಯಾವ ದೇಶದ ಪಾಸ್‌ಪೋರ್ಟ್ ಇದ್ದರೆ ಎಷ್ಟು ದೇಶಕ್ಕೆ ವೀಸಾ ಇಲ್ಲದೆಯೇ ಪ್ರವೇಶಿಸಬಹುದು ಎಂಬುದನ್ನು ಆಧರಿಸಿ ಪಟ್ಟಿ ತಯಾರಾಗುತ್ತದೆ. 199 ಭಿನ್ನ ಪಾಸ್ ಪೋರ್ಟ್‌ಗಳನ್ನು 227 ಟ್ರಾವೆಲ್ ಡೆಸ್ಟಿನೇಶನ್‌ಗಳನ್ನು ಅಧ್ಯಯನ ನಡೆಸಿ ಇಂಡೆಕ್ಸ್ ರಚನೆಯಾಗುತ್ತದೆ.
ವಿದೇಶಗಳಿಗೆ ಹಾರಬೇಕೆಂದರೆ ಪಾಸ್‌ಪೋರ್ಟ್ ಕಡ್ಡಾಯ. ವೀಸಾ ಕೂಡ ಬೇಕಾದರೂ ಕೆಲವು ದೇಶಗಳಿಗೆ ಪಾಸ್‌ಪೋರ್ಟ್ ಮಾತ್ರ ಸಾಕಾಗುತ್ತದೆ. ಯಾವ ದೇಶದ ಪಾಸ್‌ಪೋರ್ಟ್ ಇದ್ದರೆ ಎಷ್ಟು ದೇಶಗಳಿಗೆ ವೀಸಾ ಇಲ್ಲದೆ ತೆರಳಬಹುದು ಎನ್ನುವುದನ್ನು ಆಧರಿಸಿ ʼಹೆನ್ಲೆ ಪಾಸ್‌ಪೋರ್ಟ್ ಇಂಡೆಕ್ಸ್ʼ (Henley Passport Index) ಬಿಡುಗಡೆ ಮಾಡಲಾಗಿದೆ.