Passport ranking : 57 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು: ಭಾರತದ ಪಾಸ್‌ಪೋರ್ಟ್‌ ಮತ್ತಷ್ಟು ಪ್ರಬಲ Vistara News

ವಾಣಿಜ್ಯ

Passport ranking : 57 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು: ಭಾರತದ ಪಾಸ್‌ಪೋರ್ಟ್‌ ಮತ್ತಷ್ಟು ಪ್ರಬಲ

Passport ranking ಹೆನ್ಲಿ ಪಾಸ್‌ಪೋರ್ಟ್‌ ಇಂಡೆಕ್ಸ್‌ನಲ್ಲಿ ಭಾರತದ ಪಾಸ್‌ಪೋರ್ಟ್‌ಗೆ 80ನೇ ರ‍್ಯಾಂಕ್‌ ಲಭಿಸಿದೆ. ವಿವರ ಇಲ್ಲಿದೆ.

VISTARANEWS.COM


on

passport
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದ ಪಾಸ್‌ಪೋರ್ಟ್‌ ಮತ್ತಷ್ಟು ಪ್ರಭಾವಶಾಲಿಯಾಗಿದ್ದು, 2023ರ ರ‍್ಯಾಂಕಿಂಗ್‌ನಲ್ಲಿ 87ರಿಂದ 80ಕ್ಕೆ ಸುಧಾರಿಸಿದೆ. (Passport ranking) ಹೀಗಾಗಿ ಈಗ ಭಾರತೀಯರು 57 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದು ವರದಿ ತಿಳಿಸಿದೆ.

ಹೆನ್ಲಿ ಪಾಸ್‌ಪೋರ್ಟ್‌ ಇಂಡೆಕ್ಸ್‌ (Henley Passport Index) ಪ್ರಕಾರ ವಿಶ್ವದ ಅತ್ಯಂತ ಪ್ರಬಲ ಪಾಸ್‌ ಪೋರ್ಟ್‌ ಸಿಂಗಾಪುರದ್ದಾಗಿದೆ. ಜಪಾನ್‌ ಮೂರಕ್ಕೆ ಇಳಿದಿದೆ. ಸಿಂಗಾಪುರ ಪಾಸ್ ಪೋರ್ಟ್‌ ಇದ್ದರೆ 192 ದೇಶಗಳಿಗೆ ವೀಸಾ ಇಲ್ಲದೆಯೇ ನೇರವಾಗಿ ಪ್ರಯಾಣ ಮಾಡಬಹುದು.

ಜರ್ಮನಿ, ಇಟಲಿ ಮತ್ತು ಸ್ಪೇನ್‌ ಎರಡನೇ ಸ್ಥಾನಕ್ಕೆ ಏರಿದೆ. 190 ದೇಶಗಳಿಗೆ ಈ ದೇಶಗಳ ಪಾಸ್‌ ಪೋರ್ಟ್‌ ಮೂಲಕ ವೀಸಾ ಇಲ್ಲದೆ ಹೋಗಬಹುದು. ಆಸ್ಟ್ರಿಯಾ, ಫಿನ್ಲೆಂಡ್‌, ಫ್ರಾನ್ಸ್‌, ಜಪಾನ್‌, ದಕ್ಷಿಣ ಕೊರಿಯಾ, ಸ್ವೀಡನ್ ಮೂರನೇ ಸ್ಥಾನದಲ್ಲಿದೆ.‌ ಡೆನ್ಮಾರ್ಕ್‌, ಐರ್ಲೆಂಡ್‌, ನೆದರ್ಲೆಂಡ್ಸ್‌, ಬ್ರಿಟನ್‌ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ ಎಂಟನೇ ಸ್ಥಾನದಲ್ಲಿದೆ. ಒಂದು ಕಾಲದಲ್ಲಿ ಅಮೆರಿಕ ಪಾಸ್‌ ಪೋರ್ಟ್‌ ಟಾಪ್‌ನಲ್ಲಿ ಇರುತ್ತಿತ್ತು. ಪಾಕಿಸ್ತಾನ 100ನೇ ಸ್ಥಾನದಲ್ಲಿದೆ. ಅಪಘಾನಿಸ್ತಾನ 103ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಹೆನ್ಲಿ ಪಾಸ್‌ಪೋರ್ಟ್‌ ಇಂಡೆಕ್ಸ್‌ ಕಳೆದ 18 ವರ್ಷಗಳಿಂದ ಬಿಡುಗಡೆಯಾಗುತ್ತಿದೆ. ಇಂಟರ್‌ನ್ಯಾಶನಲ್‌ ಏರ್‌ ಟ್ರಾನ್ಸ್‌ಪೋರ್ಟ್‌ ಅಥಾರಿಟಿ ನೀಡುವ ಡೇಟಾ ಆಧರಿಸಿ ಈ ಇಂಡೆಕ್ಸ್‌ ಬಿಡುಗಡೆಯಾಗುತ್ತದೆ. ಯಾವ ದೇಶದ ಪಾಸ್‌ಪೋರ್ಟ್‌ ಇದ್ದರೆ ಎಷ್ಟು ದೇಶಕ್ಕೆ ವೀಸಾ ಇಲ್ಲದೆಯೇ ಪ್ರವೇಶಿಸಬಹುದು ಎಂಬುದನ್ನು ಆಧರಿಸಿ ಪಟ್ಟಿ ತಯಾರಾಗುತ್ತದೆ. 199 ಭಿನ್ನ ಪಾಸ್‌ ಪೋರ್ಟ್‌ಗಳನ್ನು 227 ಟ್ರಾವೆಲ್‌ ಡೆಸ್ಟಿನೇಶನ್‌ಗಳನ್ನು ಅಧ್ಯಯನ ನಡೆಸಿ ಇಂಡೆಕ್ಸ್‌ ರಚನೆಯಾಗುತ್ತದೆ.‌

ವಿದೇಶಗಳಿಗೆ ಹಾರಬೇಕೆಂದರೆ ಪಾಸ್‌ಪೋರ್ಟ್‌ ಕಡ್ಡಾಯ. ವೀಸಾ ಕೂಡ ಬೇಕಾದರೂ ಕೆಲವು ದೇಶಗಳಿಗೆ ಪಾಸ್‌ಪೋರ್ಟ್‌ ಮಾತ್ರ ಸಾಕಾಗುತ್ತದೆ. ಯಾವ ದೇಶದ ಪಾಸ್‌ಪೋರ್ಟ್‌ ಇದ್ದರೆ ಎಷ್ಟು ದೇಶಗಳಿಗೆ ವೀಸಾ ಇಲ್ಲದೆ ತೆರಳಬಹುದು ಎನ್ನುವುದನ್ನು ಆಧರಿಸಿ ʼಹೆನ್ಲೆ ಪಾಸ್‌ಪೋರ್ಟ್‌ ಇಂಡೆಕ್ಸ್‌ʼ (Henley Passport Index) ಬಿಡುಗಡೆ ಮಾಡಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

ಬೆಂಗಳೂರು ಸೇರಿ ದೇಶದ ಟಾಪ್ 7 ನಗರಗಳಲ್ಲಿ ಕಚೇರಿ ಬಾಡಿಗೆ ಹೆಚ್ಚಳ!

Bengaluru: ಬೆಂಗಳೂರು ಸೇರಿದಂತೆ ದೇಶದ 7 ನಗರಗಳಲ್ಲಿ ಕಚೇರಿ ಜಾಗ ಬಾಡಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಈ ದರ ಅತ್ಯಧಿಕ ಇದೆ ಎಂದು ವರದಿ ತಿಳಿಸಿದೆ.

VISTARANEWS.COM


on

Office Rental Rises in top 7 cities including bengaluru
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲು ಆರು ತಿಂಗಳು ಬೆಂಗಳೂರು (Bengaluru) ಸೇರಿದಂತೆ ದೇಶದ ಟಾಪ್ 7 ನಗರಗಳಲ್ಲಿ (Top 7 Cities) ವಾಣಿಜ್ಯ ಕಚೇರಿ ಸ್ಥಳಾವಕಾಶದ ಚಟುವಟಿಕೆಗಳು ಅಷ್ಟೇನೂ ಪೂರಕವಾಗಿರಲಿಲ್ಲ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಕಷ್ಟು ಚಟುವಟಿಕೆಗಳು ಮಂದಗತಿಯಲ್ಲಿದ್ದವು ಎಂದು ಅನಾರಾಕ್ ತನ್ನ ಹೇಳಿಕೆಯಲ್ಲಿ ಹೇಳಿದೆ. ಈ ಮಧ್ಯೆ, ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ಕಚೇರಿ ಬಾಡಿಗೆಯು ಶೇ.7ರಷ್ಟು ಹೆಚ್ಚಳವಾಗಿದೆ(Office Rental Rises). ಈ ಪೈಕಿ, ಚೆನ್ನೈ ನಗರವು (Chennai City) ಭಾರೀ ಬೆಳವಣಿಗೆ ಕಂಡಿದೆ.

ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯಗಳಲ್ಲಿ ಚೆನ್ನೈ ಅತ್ಯಧಿಕ ಶೇ.10 ರಷ್ಟು ವಾರ್ಷಿಕ ಏರಿಕೆಯನ್ನು ದಾಖಲಿಸಿದೆ. ಪ್ರತಿ ಚದರ ಅಡಿಗೆ 62 ರೂ. ರಿಂದ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚದರ ಅಡಿಗೆ 68 ರೂ. ಇತ್ತು. ವಾರ್ಷಿಕ ಶೇ.8ರ ಬೆಳವಣಿಗೆಯೊಂದಿಗೆ ಹೈದರಾಬಾದ್ ನಂತರದ ಸ್ಥಾನದಲ್ಲಿದೆ. ನಗರದಲ್ಲಿನ ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯವು 61 ರೂ.ನಿಂದ 66 ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ, ಬೆಂಗಳೂರು ಮತ್ತು ಪುಣೆ, ಕೋಲ್ಕೊತಾ ನಗರಗಳಲ್ಲಿ ವಾರ್ಷಿಕ ಶೇ.7 ಬೆಳವಣಿಗೆಯನ್ನು ದಾಖಲಾಗಿದೆ. ಮತ್ತೊಂದೆಡೆ ಮುಂಬೈ ಮತ್ತು ಎನ್‌ಸಿಆರ್‌ನಲ್ಲಿ ಈ ಪ್ರಮಾಣ ಶೇ.5ರಷ್ಟು ಏರಿಕೆಯಾಗಿದೆ.

2023ರ ವಿತ್ತ ವರ್ಷದ ಮೊದಲ ಅರ್ಧ ವರ್ಷಕ್ಕೆ ಹೋಲಿಸಿದರೆ, 2024ರ ವಿತ್ತ ವರ್ಷದ ಮೊದಲ ಆರ್ಥಿಕ ವರ್ಷದಲ್ಲಿ ದೇಶದ 7 ನಗರಗಳಲ್ಲಿ ಹೊಸ ಕಚೇರಿಯ ಬೇಡಿಕೆ ಪೂರೈಕೆಯ ಕೇವಲ ಶೇ.5ರಷ್ಟು ಏರಿಕೆಯಾಗಿದೆ. ಇದೇ ವೇಳೆ, ವಾರ್ಷಿಕ ಬೇಡಿಕೆಯಲ್ಲಿ ಶೇ.1ರಷ್ಟು ಕುಸಿತವಾಗಿದೆ.

ಟಿಎಂಎಫ್ ಜಾಗತಿಕ ಸುಸ್ಥಿರ ನಗರಗಳ ಚಾಲೆಂಜ್; ಬೆಂಗಳೂರು, ವಾರಾಣಸಿ ಶಾರ್ಟ್ ಲಿಸ್ಟ್

ಟೊಯೊಟಾ ಮೊಬಿಲಿಟಿ ಫೌಂಡೇಶನ್ (Toyota Mobility Foundation – TMF) 9 ಮಿಲಿಯನ್ ಡಾಲರ್ ಸುಸ್ಥಿರ ನಗರಗಳ ಚಾಲೆಂಜ್ ನಲ್ಲಿ ಅಗ್ರ 10 ನಗರಗಳಲ್ಲಿ ಬೆಂಗಳೂರು (Bengaluru) ಮತ್ತು ವಾರಣಾಸಿಯನ್ನು (Varanasi) ಶಾರ್ಟ್ ಲಿಸ್ಟ್ (Shortlisted) ಮಾಡಲಾಗಿದೆ ಎಂದು ಘೋಷಿಸಿದೆ. ಟೊಯೊಟಾ ಮೊಬಿಲಿಟಿ ಫೌಂಡೇಶನ್, ಚಾಲೆಂಜ್ ವರ್ಕ್ಸ್ ಮತ್ತು ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್‌ನ ಬೆಂಬಲದೊಂದಿಗೆ ಜೂನ್ 2023 ರಲ್ಲಿ ಈ ಚಾಲೆಂಜ್ ಅನ್ನು ಪ್ರಾರಂಭಿಸಲಾಗಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯದೊಂದಿಗೆ ಚಲನಶೀಲತೆ ಕೇಂದ್ರಿತ ನಾವೀನ್ಯತೆಯನ್ನು ಬೆಂಬಲಿಸುವ ಮೂಲಕ ನಗರಗಳು ಭವಿಷ್ಯಕ್ಕಾಗಿ ಸಿದ್ಧವಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಈ ಪ್ರವೇಶ ಅವಧಿಯಲ್ಲಿ ಜಾಗತಿಕವಾಗಿ 46 ದೇಶಗಳ 150 ಕ್ಕೂ ಹೆಚ್ಚು ನಗರಗಳಿಂದ 200 ಕ್ಕೂ ಹೆಚ್ಚು ನಮೂದುಗಳನ್ನು ಸ್ವೀಕರಿಸಲಾಗಿದೆ. 1) ಚಾಲೆಂಜ್ ಫೋಕಸ್ 2) ನಾವೀನ್ಯತೆ 3) ಪರಿಣಾಮ 4) ಪಾಲುದಾರ ಸಾಮರ್ಥ್ಯದ ನಾಲ್ಕು ಪ್ರಮುಖ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಯಿತು. ಬ್ರೆಜಿಲ್, ಕೊಲಂಬಿಯಾ, ಭಾರತ, ಇಟಲಿ, ಮಲೇಷ್ಯಾ, ಮೆಕ್ಸಿಕೊ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ನಗರಗಳು ಈ ಪಟ್ಟಿಯಲ್ಲಿವೆ.

ಈ ಸುದ್ದಿಯನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆಗಾಗಿ ಇನ್ನು ಮೊಬೈಲ್, ಲ್ಯಾಪ್‌ಟ್ಯಾಪ್‌ ಟ್ರೇನಲ್ಲಿ ಇಡಬೇಕಿಲ್ಲ!

Continue Reading

ಕರ್ನಾಟಕ

2000 Note Exchange : 2000 ರೂ. ನೋಟು ಬದಲಾವಣೆ ದಂಧೆ; ವಿಸ್ತಾರ ನ್ಯೂಸ್‌ನಲ್ಲಿ ಬಯಲು

2000 Note Exchange : 2000 ರೂ. ನೋಟುಗಳನ್ನು ಬದಲಾಯಿಸಲು ಜನ ಸಾಮಾನ್ಯರಿಗೆ ಇನ್ನೂ ಅವಕಾಶವಿದೆ. ಹೀಗಾಗಿ ಜನಸಾಮಾನ್ಯರನ್ನು ಬಳಸಿಕೊಂಡು ವಿನಿಮಯ ಮಾಡುವ ದಂಧೆಯೊಂದು ಹುಟ್ಟಿಕೊಂಡಿದೆ. ಇದನ್ನು ವಿಸ್ತಾರ ನ್ಯೂಸ್‌ ಬಯಲಿಗೆಳೆದಿದೆ.

VISTARANEWS.COM


on

2000 Rupees Note RBI
Koo
VISTARA-EXCLUSIVE

ಬೆಂಗಳೂರು: 2000 ರೂ. ಮುಖಬೆಲೆಯ ನೋಟುಗಳನ್ನು (2000 Rupee Notes) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) ವ್ಯವಹಾರದಿಂದ ಹಿಂದೆ ಪಡೆದಿದೆ. ನೋಟುಗಳ ವಿನಿಮಯಕ್ಕೆ ಆರ್‌ಬಿಐ ವಿಧಿಸಿದ ಗಡುವುಗಳು (RBI Deadlines) ಬಹುತೇಕ ಮುಕ್ತಾಯಗೊಂಡಿವೆ. ಆದರೆ, ಈಗ ಕೊಟ್ಟಿರುವ ಕೆಲವೊಂದು ಆಯ್ಕೆಗಳನ್ನು ಬಳಸಿಕೊಂಡು ಅಡ್ಡ ದಾರಿಯಲ್ಲಿ ಪಿಂಕ್‌ ನೋಟ್‌ಗಳ ವಿನಿಮಯ (2000 Note Exchange) ಭರ್ಜರಿಯಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಂದರೆ, ಕೆಲವೊಂದು ಮಾಫಿಯಾಗಳು ಸಾರ್ವಜನಿಕರಿಗೆ ಇರುವ ವಿನಿಮಯ ಆಯ್ಕೆಯನ್ನು ಬಳಸಿಕೊಂಡು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ವಿಸ್ತಾರ ನ್ಯೂಸ್‌ ಈ ದಂಧೆಯನ್ನು ಬಯಲಿಗೆಳೆದಿದೆ.

2 ಸಾವಿರ ಮುಖಬೆಲೆಯ ನೋಟುಗಳನ್ನು ವ್ಯವಹಾರದಿಂದ ಹಿಂಪಡೆದಿರುವುದಾಗಿ ಮೇ 19ರಂದು ಘೋಷಿಸಿತ್ತು. ಆದರೆ, ಅಕ್ಟೋಬರ್‌ 8ರವರೆಗೆ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಆರ್‌ಬಿಐಗೆ 2 ಸಾವಿರ ಮುಖಬೆಲೆಯ ಶೇ.97.26ರಷ್ಟು ನೋಟ್ ವಾಪಸ್ ಬಂದಿದೆ. ಉಳಿದ 9,760 ಕೋಟಿ ರೂಪಾಯಿ ವಾಪಸ್‌ ಬಂದಿಲ್ಲ.

ಈ ನಡುವೆ, ಆರ್‌ಬಿಐ ಸಾರ್ವಜನಿಕ ವ್ಯಕ್ತಿಗಳು 2000 ರೂ. ನೋಟು ವಿನಿಮಯಕ್ಕೆ ಅವಕಾಶವನ್ನು ಬೆಂಗಳೂರು ಸೇರಿದಂತೆ ದೇಶ 19 ಆರ್‌ಬಿಐ ಕಚೇರಿಗಳಲ್ಲಿ ಮುಂದುವರಿಸಿದೆ. ಅಂದರೆ, ಒಬ್ಬ ವ್ಯಕ್ತಿ ಒಮ್ಮೆಗೆ 10 ನೋಟುಗಳನ್ನು ವಿನಿಮಯ ಮಾಡಬಹುದಾಗಿದೆ. ಆದರೆ, ಈ ರೀತಿ ವಿನಿಮಯಕ್ಕೆ ಅವಕಾಶ ನೀಡಿರುವುದು ದಂಧೆಗೆ ಅವಕಾಶ ನೀಡಿದಂತಾಗಿದೆ ಎಂಬ ಆರೋಪವಿದೆ.

ಈಗ ಯಾರೇ ಆದರೂ ಒಮ್ಮೆಗೆ 10 ನೋಟುಗಳನ್ನು ಅಂದರೆ 20000 ರೂ. ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ನೋಟ್ ಎಕ್ಸ್‌ಚೇಂಜ್‌ಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಿದೆ. ಹೀಗೆ ಜನ ಸಾಮಾನ್ಯರಿಗೆ ಇರುವ ಅವಕಾಶವನ್ನು ಬೆಂಗಳೂರಿನ ಕೆಲವು ಮಾಫಿಯಾಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ.

ಅದೆಷ್ಟೋ ಮಂದಿ ಕಪ್ಪು ಹಣವನ್ನು ತಂದು ಜನಸಾಮಾನ್ಯರ ಮುಖಾಂತರ ಬದಲಾವಣೆ ಮಾಡಿಕೊಳ್ಳುತ್ತಿವೆ. ಈ ದಂಧೆಗೆ 10 ಪರ್ಸೆಂಟ್‌ ಕಮಿಷನ್‌ ನೀಡಲಾಗುತ್ತಿದೆ. ಅಂದರೆ, ಯಾರಾದರೂ ಒಬ್ಬ ವ್ಯಕ್ತಿಯ ಕೈಗೆ 2000 ರೂ.ಗಳ ಹತ್ತು ನೋಟುಗಳನ್ನು ನೋಡಿ ಅವುಗಳನ್ನು ವಿನಿಯಮ ಮಾಡಿಕೊಂಡು ಬರುವಂತೆ ಸೂಚಿಸಲಾಗುತ್ತದೆ. ಅವನು ವಿನಿಮಯ ಮಾಡಿಕೊಂಡು ಬಂದರೆ ಅವನಿಗೆ 2000 ರೂ.ಯನ್ನು ಕಮಿಷನ್‌ ರೂಪದಲ್ಲಿ ನೀಡಲಾಗುತ್ತಿದೆ.

ಬ್ಯಾಂಕ್‌ ಮುಂದೆ ಸಾಲು ಸಾಲು ಜನ

ಈ ರೀತಿಯ ದಂಧೆ ಶುರುವಾದ ಹಿನ್ನೆಲೆಯಲ್ಲಿ ಆರ್‌ಬಿಐ ಕಚೇರಿಯ ಮುಂದೆ ಜನರ ಸಾಲೇ ಕಂಡುಬರುತ್ತಿದೆ. ನಿಜವೆಂದರೆ, ಹಿಂದೆ ಆರ್‌ಬಿಐ ನೀಡಿದ್ದ ಗಡುವಿನಲ್ಲಿ ಇಲ್ಲದಷ್ಟು ಜನಸಂದಣಿ ಈಗ ಕಂಡುಬರುತ್ತಿದೆ. ಅಂದು ಕೂಡಾ ಜನಸಾಮಾನ್ಯರಿಗೆ ನೋಟು ವಿನಿಮಯಕ್ಕೆ ಅವಕಾಶವಿತ್ತು. ಆಗ ಬಾರದೆ ಜನರೆಲ್ಲ ಈಗ ಬರುತ್ತಿದ್ದಾರೆ, ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದರೆ ಇದರ ಹಿಂದೆ ಕರಾಮತ್ತು ಇರುವುದು ಸ್ಪಷ್ಟ ಎಂದು ತಿಳಿದ ವಿಸ್ತಾರ ನ್ಯೂಸ್‌ ಸ್ಟಿಂಗ್‌ ಆಪರೇಷನ್‌ ನಡೆಸಿತ್ತು. ಈ ಸಂದರ್ಭದಲ್ಲಿ ದಂಧೆಯ ಬೇರೆ ಬೇರೆ ಮುಖಗಳು ಕಂಡುಬಂದಿವೆ.

ಹೇಗೆ ನಡೆಯುತ್ತಿದೆ ವಿನಿಮಯ ಕಾರ್ಯಾಚರಣೆ?

ಬೆಂಗಳೂರಿನ ಕೆಲವೊಂದು ಮಾಫಿಯಾಗಳು ಹಣ ವಿನಿಮಯ ದಂಧೆಯಲ್ಲಿ ತೊಡಗಿದಂತೆ ಕಾಣುತ್ತಿದೆ. ಅದು ಸಾರ್ವಜನಿಕರನ್ನು ಬಳಸಿಕೊಂಡು ಹಣ ವಿನಿಮಯಕ್ಕೆ ವ್ಯವಸ್ಥೆ ಮಾಡಿದೆ. ಅಂದರೆ ಯಾರೋ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಅವರ ಕೈಯಲ್ಲಿ 2000 ರೂ.ಗಳ 10 ನೋಟುಗಳನ್ನು ಕೊಟ್ಟು ಅವುಗಳನ್ನು ವಿನಿಮಯ ಮಾಡಿಸಲಾಗುತ್ತದೆ. ಬಳಿಕ ಅವರು ಹೊರಬರುತ್ತಿದ್ದಂತೆಯೇ ಅವರ ಕೈಯಿಂದ ವಿನಿಮಯ ಮಾಡಿದ ಹಣವನ್ನು ಪಡೆದು ಅವರಿಗೆ 2000 ರೂ.ಗಳನ್ನು ನೀಡಲಾಗುತ್ತದೆ.

ಇಲ್ಲಿ ಅತ್ಯಂತ ಬಡವರು, ಕೂಲಿ ಕೆಲಸದವರು ಬಂದು ಹಣ ಎಕ್ಸ್‌ ಚೇಂಜ್‌ ಮಾಡಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಹಣ ನೀಡುವುದು ಮತ್ತು ಮರಳಿ ಪಡೆಯುವ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದೆ. ಆದರೆ, ಯಾರೂ ಇದನ್ನು ಪ್ರಶ್ನಿಸುತ್ತಿಲ್ಲ!

Continue Reading

ಮನಿ-ಗೈಡ್

Money Guide: ಡಿಮ್ಯಾಟ್ ಖಾತೆದಾರರ ಗಮನಕ್ಕೆ; ವರ್ಷಾಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಅಕೌಂಟ್‌ ಸ್ಥಗಿತ!

Money Guide: ವೈಯಕ್ತಿಕ ಡಿಮ್ಯಾಟ್ ಖಾತೆದಾರರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರು ಈ ವರ್ಷಾಂತ್ಯದ ಒಳಗೆ ಮಾಡಿ ಮುಗಿಸಲೇ ಬೇಕಾದ ಬಹು ಮುಖ್ಯ ಕೆಲಸವೊಂದಿದೆ. ಅದೇನು? ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

demat account
Koo

ಬೆಂಗಳೂರು: ವೈಯಕ್ತಿಕ ಡಿಮ್ಯಾಟ್ ಖಾತೆದಾರರು (Demat account holders) ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರ (Mutual fund investors) ಗಮನಕ್ಕೆ… ಡಿಸೆಂಬರ್ 31ರೊಳಗೆ ಘೋಷಣೆ ಫಾರ್ಮ್ ಸಲ್ಲಿಸುವ ಮೂಲಕ ನಾಮನಿರ್ದೇಶಿತ(Nominate a beneficiary-ನಾಮಿನಿ)ರ ಹೆಸರನ್ನು ಘೋಷಿಸಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡಲು ಸರ್ಕಾರ ತಿಳಿಸಿದೆ. ಒಂದು ವೇಳೆ ಸರ್ಕಾರ ವಿಧಿಸಿದ ಗಡುವಿನೊಳಗೆ ಈ ಪ್ರಕ್ರಿಯೆ ನಡೆಸದಿದ್ದರೆ ಏನಾಗುತ್ತದೆ ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ.

ವರ್ಷಾಂತ್ಯದ ವೇಳೆಗೆ ಡಿಮ್ಯಾಟ್ ಖಾತೆದಾರರು ನಾಮನಿರ್ದೇಶನ ಆಯ್ಕೆ ಮಾಡಲು ಅಥವಾ ನಾಮನಿರ್ದೇಶನ ಆಯ್ಕೆಯನ್ನು ಕೈಬಿಡದಿದ್ದರೆ ಅಂತಹವರ ಡಿಮ್ಯಾಟ್ ಖಾತೆ ಮತ್ತು ಫೋಲಿಯೊ ಸ್ಥಗಿತಗೊಳಿಸಲಾಗುತ್ತದೆ. ಇದರಿಂದಾಗಿ ಅವರು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಎಚ್ಚರಿಸಿದೆ. ಈ ಆದೇಶವು ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಅನ್ವಯವಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಟ್ರೇಡಿಂಗ್‌ ಮತ್ತು ಡಿಮ್ಯಾಟ್‌ ಖಾತೆಗೆ ನಾಮಿನೇಶನ್‌ ಮಾಡುವಾಗ ಸಾಕ್ಷಿಯ ಅಗತ್ಯ ಇರುವುದಿಲ್ಲ. ಇ-ಸೈನ್‌ ಬಳಸಿ ನಾಮಿನೇಶನ್‌ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ಮಾಡಬಹುದು. ಆಫ್‌ಲೈನ್‌ನಲ್ಲೂ ಮಾಡಬಹುದಾದ ಆಯ್ಕೆ ಇದೆ. ನಿಮ್ಮ ಡಿಮ್ಯಾಟ್‌ ಖಾತೆಯ ಪೂರೈಕೆದಾರ DP ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನಾಮಿನೇಶನ್‌ ಮಾಡಬಹುದು. NSDL DP ವೆಬ್‌ಸೈಟ್‌ ಮೂಲಕವೂ ಬದಲಿಸಬಹುದು. ನಿಮ್ಮ ಡಿಮ್ಯಾಟ್‌ ಖಾತೆಗೆ ಮೂರು ನಾಮಿನಿಗಳನ್ನು ಹೆಸರಿಸಬಹುದು. ನಿಮ್ಮ ತಂದೆ, ತಾಯಿ, ಸಂಗಾತಿ, ಮಕ್ಕಳು ಅಥವಾ ಬೇರೆ ಯಾರಾದರೂ ನಾಮಿನಿ ಆಗಬಹುದು. ಈ ಕ್ರಮವು ಹೂಡಿಕೆದಾರರಿಗೆ ತಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಈ ಹಿಂದೆ ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್‌ ಮತ್ತು ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಆಯ್ಕೆಯನ್ನು ಒದಗಿಸುವಂತೆ ಜುಲೈ 2021ರಲ್ಲಿಯೇ ಸೆಬಿ ಹೇಳಿತ್ತು. ಮಾರ್ಚ್ 31, 2022ರ ಗಡುವು ನೀಡಿತ್ತು. ನಂತರ ಅದನ್ನು ಇನ್ನೂ ಒಂದು ವರ್ಷ ಅಂದರೆ ಮಾರ್ಚ್ 31, 2023ರವರೆಗೆ ನಂತರ ಮತ್ತೆ ಸೆಪ್ಟೆಂಬರ್ 30, 2023ರವರೆಗೆ ಬಳಿಕ ಡಿಸೆಂಬರ್‌ 31, 2023ರವರೆಗೆ ವಿಸ್ತರಿಸಿತ್ತು. ಇನ್ನು ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

ಯಾಕಾಗಿ ಈ ಕ್ರಮ?

ಮುಖ್ಯವಾಗಿ ಎರಡು ಕಾರಣಕ್ಕಾಗಿ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಮೊದಲನೆಯದ್ದು ಈ ಹಿಂದೆ ಹೇಳಿದಂತೆ ಹೂಡಿಕೆದಾರರ ಸ್ವತ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು. ಇನ್ನು ಎರಡನೇ ಕಾರಣ ಎಂದರೆ, ಈ ಹಿಂದೆ ಅನೇಕ ಖಾತೆದಾರರು ತಮಗೆ ಏನಾದರೂ ಸಂಭವಿಸಿದರೆ ಆಸ್ತಿಗಳನ್ನು ಯಾರಿಗೆ ವರ್ಗಾಯಿಸಬೇಕು ಎಂಬುದನ್ನು ನಾಮನಿರ್ದೇಶನ ಮಾಡದೆ ಅನೇಕ ಹೂಡಿಕೆ ಖಾತೆಗಳನ್ನು ತೆರೆದಿದ್ದರು. ಇದರಿಂದಾಗಿ ನಿಜವಾದ ವಾರಸುದಾರರನ್ನು ಕಂಡುಕೊಳ್ಳಲು ಬಹಳ ಶ್ರಮ ಪಡಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. ಅಲ್ಲದೆ ಕೆಲವೊಮ್ಮೆ ಬೇರೆ ಯಾರಿಗೋ ಅನುಕೂಲ ಲಭಿಸಿ ನಿಜವಾದ ವಾರಸುದಾರರಿಗೆ ಅನ್ಯಾಯವಾದ ಘಟನೆಯೂ ನಡೆದಿತ್ತು. ಈ ಎಲ್ಲ ಕಾರಣಗಳಿಂದ ನಾಮಿನಿ ಹೆಸರನ್ನು ಸೂಚಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರ್ಥಿಕ ತಜ್ಞರು ವಿವರಿಸುತ್ತಾರೆ.

ಇನ್ನಷ್ಟು ಮನಿಗೈಡ್‌ ಓದಲು ಇಲ್ಲಿ ಕ್ಲಿಕ್‌ ಮಾಡಿ

Continue Reading

ದೇಶ

ನಿರ್ಮಲಾ ಸೀತಾರಾಮನ್ ಜಗತ್ತಿನ ಪ್ರಭಾವಶಾಲಿ ಮಹಿಳೆ, ಇನ್ನೂ ಮೂವರಿದ್ದಾರೆ!

Forbes Most powerful women list: ಜಗತ್ತಿನ ಪ್ರಭಾವಶಾಲಿ ಮಹಿಳೆಯರ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೆ, ಇನ್ನೂ ಮೂವರು ಭಾರತೀಯ ಮಹಿಳೆಯರಿದ್ದಾರೆ.

VISTARANEWS.COM


on

Forbes Most powerful women list, nirmala sitharaman in 32 place
Koo

ನವದೆಹಲಿ: ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಫೋರ್ಬ್ಸ್ ರಿಲೀಸ್ ಮಾಡಿದ್ದು(Forbes Most powerful women list), ಈ ಲಿಸ್ಟ್‌ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು 32ನೇ ಸ್ಥಾನದಲ್ಲಿದ್ದಾರೆ. ನಿರ್ಮಲಾ ಸೀತಾರಾಮನ್ ಜತೆಗೇ ಭಾರತೀಯ ಮಹಿಳೆಯರಾದ ಎಚ್‌ಸಿಎಲ್ ಕಾರ್ಪೊರೇಷನ್ ಸಿಇಒ ರೋಶ್ನಿ ನಾದರ್ ಮಲ್ಹೋತ್ರಾ(Roshni Nadar Malhotra) ಅವರು 60, ಸ್ಟಿಲ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷೆ ಸೋಮಾ ಮೊಂಡಲ್(Soma Mondal) 70, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ (Kiran Mazumdar-Shaw) ಅವರು 76ನೇ ಸ್ಥಾನದಲ್ಲಿದ್ದಾರೆ.

ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಕ್ರಿಸ್ಟಿನ್ ಲಗಾರ್ಡೆ ಎರಡು ಮತ್ತು ಅಮೆರಿಕ ಉಪಾಧ್ಯಕ್ಷ ಕಮಲ್ ಹ್ಯಾರಿಸ್ ಮೂರನೇ ಸ್ಥಾನದಲ್ಲಿದ್ದಾರೆ.

2019ರಿಂದ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣ ಪ್ರಮಾಣದ ಮಹಿಳಾ ವಿತ್ತ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ನೇತೃತ್ವವನ್ನು ಕೂಡ ಹೊಂದಿದ್ದಾರೆ. ರಾಜಕೀಯವನ್ನು ಸೇರುವ ಮುಂಚೆ ಇಂಗ್ಲೆಂಡ್‌ನ ಅಗ್ರಿಕಲ್ಚರ್ ಎಂಜಿನಿಯರ್ ಅಸೋಶಿಯೇಷನ್ ಮತ್ತು ಬಿಬಿಸಿ ವರ್ಲ್ಡ್ ಸರ್ವೀಸ್‌ನಲ್ಲಿ ಕೆಲಸ ಮಾಡಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ. ಸಚಿವೆಯಾಗುವ ಮುಂಚೆ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಕೂಡ ಆಗಿದ್ದರು.

ರೋಶ್ನಿ ನಾಡರ್

ರೋಶ್ನಿ ನಾಡರ್ ಮಲ್ಹೋತ್ರಾ ಅವರು ಎಚ್‌ಸಿಎಲ್ ಸಂಸ್ಥಾಪಕ ಮತ್ತು ಕೈಗಾರಿಕೋದ್ಯಮಿ ಶಿವ ನಾಡರ್ ಅವರ ಪುತ್ರಿಯಾಗಿದ್ದಾರೆ. ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿ, ಕಂಪನಿಯ ಎಲ್ಲಾ ಕಾರ್ಯತಂತ್ರದ ನಿರ್ಧಾರಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ ಎಂದು ಫೋರ್ಬ್ಸ್ ಹೇಳಿದೆ. ಜುಲೈ 2020 ರಲ್ಲಿ ಅವರು ಈ ಜವಾಬ್ದಾರಿಯನ್ನು ತಮ್ಮ ತಂದೆಯಿಂದ ಪಡೆದುಕೊಂಡರು.

ಕಿರಣ್ ಮಜುಂದಾರ್ ಶಾ

ಕಿರಣ್ ಮಜುಂದಾರ್ ಶಾ ಭಾರತದ ಸೆಲ್ಫ್ ಮೇಡ್ ಮಹಿಳಾ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ಬಣ್ಣಿಸಿದೆ. 1978ರಲ್ಲಿ ಅವರು ಬಯೋಫಾರ್ಮಾಸ್ಯುಟಿಕಲ್ ಸಂಸ್ಥೆ ಬಯೋಕಾನ್ ಸ್ಥಾಪಿಸಿದರು. ಈ ಕಂಪನಿಯು ಇದು ಮಲೇಷ್ಯಾದ ಜೋಹೋರ್ ಪ್ರದೇಶದಲ್ಲಿ ಏಷ್ಯಾದ ಅತಿದೊಡ್ಡ ಇನ್ಸುಲಿನ್ ಕಾರ್ಖಾನೆಯನ್ನು ಹೊಂದಿದೆ.

ಸೋಮಾ ಮೊಂಡಲ್

ಸೋಮಾ ಮಂಡಲ್ ಅವರು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. ಎನ್ಐಟಿ ರೂರ್ಕೆರಾದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 60 ವರ್ಷ ಮೊಂಡಲ್ ಅವರು ಲೋಹ ಉದ್ಯಮದಲ್ಲಿ ಅಪಾರ ಅನುಭವ ಪಡೆದುಕೊಂಡಿದ್ದಾರೆ. ನಾಲ್ಕೋದಲ್ಲಿ ಟ್ರೈನಿ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದ ಸೋಮಾ ಅವರು ಸೈಲ್‌ಗೆ 2017ರಲ್ಲಿ ಸೇರಿದರು. ಈಗ ಅದೇ ಸಂಸ್ಥೆಯ ಚೇರ್ಮನ್ನರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Sanatana Dharma Row: ಇಂಡಿಯಾ ಬ್ಲಾಕ್‌ ಹಿಂದೂವಿರೋಧಿ: ನಿರ್ಮಲಾ ಸೀತಾರಾಮನ್ ತೀಕ್ಷ್ಣ ವಾಗ್ದಾಳಿ

Continue Reading
Advertisement
Wedding Fashion
ಫ್ಯಾಷನ್6 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್15 mins ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ16 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

job opportunity
ದೇಶ29 mins ago

Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

Office Rental Rises in top 7 cities including bengaluru
ದೇಶ31 mins ago

ಬೆಂಗಳೂರು ಸೇರಿ ದೇಶದ ಟಾಪ್ 7 ನಗರಗಳಲ್ಲಿ ಕಚೇರಿ ಬಾಡಿಗೆ ಹೆಚ್ಚಳ!

BMTC Bus hits bike
ಕರ್ನಾಟಕ44 mins ago

BMTC Accident : ಕಿಲ್ಲರ್‌ ಬಿಎಂಟಿಸಿ ಬಸ್‌ಗೆ 120 ಮಂದಿ ಬಲಿ!

Kapil Sharma and Sunil Grover
ಬಾಲಿವುಡ್46 mins ago

The Kapil Sharma Show: 6 ವರ್ಷದ ಮುನಿಸು ಮರೆತು ಒಟ್ಟಿಗೆ ಪಾರ್ಟಿ ಮಾಡಿದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್!

Virat Kohli
ಕ್ರಿಕೆಟ್52 mins ago

ಕಿಂಗ್​ ಕೊಹ್ಲಿ ಕೈಬಿಟ್ಟ ಬಿಸಿಸಿಐ; ಟಿ20 ವಿಶ್ವಕಪ್​ಗೆ ನೂತನ ಆಟಗಾರನ ಆಯ್ಕೆ!

No rain alert dry weather in karnataka
ಕರ್ನಾಟಕ1 hour ago

Karnataka Weather : ಮುಕ್ಕಾಲು ಕರ್ನಾಟಕದಲ್ಲಿ ಶುಷ್ಕ ವಾತಾವರಣ! ಇಲ್ಲೆಲ್ಲ ಸಣ್ಣ ಮಳೆ!

Winter Black Fashion
ಫ್ಯಾಷನ್1 hour ago

Winter Black Fashion: ವಿಂಟರ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಬ್ಲ್ಯಾಕ್‌ ಡಿಸೈನರ್‌ವೇರ್ಸ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

CM-Siddaramaiah
ಕರ್ನಾಟಕ6 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ13 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ21 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

CM Siddaramaiah and Black magic
ಕರ್ನಾಟಕ2 days ago

Belagavi Winter Session: ಸಿದ್ದರಾಮಯ್ಯಗೆ ಮಾಟ – ಮಂತ್ರ; ಗಾಳಿ ಬಿಡಿಸಲು ರೇವಣ್ಣಗೆ ಅಶೋಕ್‌ ಮನವಿ!

ಟ್ರೆಂಡಿಂಗ್‌