ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪೈನ್‌ಲ್ಯಾಬ್ಸ್, ರೇಜರ್‌ಪೇ, ರಿಲಯನ್ಸ್, ಗೂಗಲ್, ಜೊಮ್ಯಾಟೊ, ವರ್ಲ್ಡ್‌ಲೈನ್ ಸೇರಿ 32 ಕಂಪನಿಗಳಿಗೆ ಪೇಮೆಂಟ್ ಅಗ್ರಿಗೇಟರ್ ಲೈಸೆನ್ಸ್ (payment aggregator) ಅನ್ನು ವಿತರಿಸಲು ತಾತ್ವಿಕ ಒಪ್ಪಿಗೆ ನೀಡಿದೆ. ಫ್ರೀಚಾರ್ಜ್, ಪೇಟಿಎಂ, ಪೇಯು, ಟಾಪ್ಟಿಸ್ ಟೆಕ್ನಾಲಜೀಸ್‌ನ ಪಿಎ ಲೈಸೆನ್ಸ್ ಅರ್ಜಿಗಖನ್ನು ತಿರಸ್ಕರಿಸಲಾಗಿದೆ. ಒಟ್ಟು 185 ಫಿನ್‌ಟೆಕ್ ಕಂಪನಿಗಳು ಅರ್ಜಿ ಸಲ್ಲಿಸಿತ್ತು.
ಆರ್‌ಬಿಐ ಮಾನದಂಡದ ಪ್ರಕಾರ ಪೇಮೆಂಟ್ ಅಗ್ರಿಗೇಟರ್‌ಗಳು 15 ಕೋಟಿ ರೂ. ನಿವ್ವಳ ಆಸ್ತಿಯನ್ನು ಹೊಂದಿರಬೇಕು. ಆರ್‌ಬಿಐನಿಂದ ಲೈಸೆನ್ಸ್ ಪಡೆದ ಕಂಪನಿಗಳು ಮಾತ್ರ ವ್ಯಾಪಾರಿಗಳಿಗೆ ಪೇಮೆಂಟ್ ಸೇವೆಗಳನ್ನು ನೀಡಬಹುದು. ಹಾಗೂ ಆರ್‌ಬಿಐ ನೇರ ನಿಗಾ ವಹಿಸಿದೆ.
ಆರ್‌ಬಿಐ ಫೆಬ್ರವರಿ 14ರಂದು ಪೇಮೆಂಟ್ ಅಗ್ರಿಗೇಟರ್‌ಗಳಿಗೆ ಸಾಲದ ಮರು ಪಾವತಿಗೆ ಕೂಡ ಬಳಸಲು ಅನುಮತಿ ನೀಡಿತ್ತು.