ಮುಂಬಯಿ: ಪೇಟಿಎಂನ (Paytm) ಮಾತೃಸಂಸ್ಥೆ ಒನ್97 ಕಮ್ಯುನಿಕೇಶನ್ಸ್‌ನಿಂದ 200 ದಶಲಕ್ಷ ಡಾಲರ್ (ಅಂದಾಜು 1620 ಕೋಟಿ ರೂ.) ಮೌಲ್ಯದ ಷೇರುಗಳನ್ನು ಮಾರಾಟ ಮಾಡಲು ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ ನಿರ್ಧರಿಸಿದೆ ಎಂದು ವರದಿಯಾಗಿದೆ.
ಬ್ಯಾಂಕ್ ಆಫ್ ಅಮೆರಿಕ ಸೆಕ್ಯುರಿಟೀಸ್ ಈ ಡೀಲ್‌ನ ಬ್ಯಾಂಕರ್ ಆಗಿದೆ. ಪ್ರತಿ ಷೇರಿಗೆ 555-601 ರೂ.ಗಳಂತೆ ಮಾರಾಟವಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್ 30ರ ವೇಳೆಗೆ ಸಾಫ್ಟ್‌ಬ್ಯಾಂಕ್, ಒನ್97ಕಮ್ಯುನಿಕೇಶನ್ಸ್‌ನಲ್ಲಿ 17.45% ಷೇರುಗಳನ್ನು ಹೊಂದಿತ್ತು.
ಪೇಟಿಎಂನಲ್ಲಿ ಸಾಫ್ಟ್ ಬ್ಯಾಂಕ್ ಹೂಡಿಕೆ ನಷ್ಟದಲ್ಲಿದೆ. ಐಪಿಒದಲ್ಲಿ ೨,೧೫೦ ರೂ.ನಷ್ಟಿದ್ದ ಷೇರು ದರ ಈಗ 601 ರೂ.ಗೆ ಕುಸಿದಿದೆ.