ಮುಂಬಯಿ: ಪೇಟಿಎಂಗೆ ತನ್ನ ಅಧೀನ ಸಂಸ್ಥೆಯ ಮೂಲಕ ನೀಡುತ್ತಿರುವ ಪೇಮೆಂಟ್ ಸೇವೆಗೆ (Paytm payments service) ಯಾವುದೇ ಹೊಸ ಆನ್‌ಲೈನ್ ಮರ್ಚೆಂಟ್‌ಗಳನ್ನು ಸೇರಿಸದಂತೆ ಆರ್‌ಬಿಐ ನಿಷೇಧಿಸಿದೆ.
ಕಂಪನಿಯು ಹೊಸ ಆಫ್‌ಲೈನ್ ಮರ್ಚೆಂಟ್‌ಗಳನ್ನು ತನ್ನ ಸೇವೆಗೆ ಸೇರಿಸಿಕೊಳ್ಳಬಹುದು. ಅವರಿಗೆ ಆಲ್ ಇನ್ ಒನ್ ಕ್ಯೂಆರ್, ಸೌಂಡ್ ಬಾಕ್ಸ್ ಮತ್ತು ಕಾರ್ಡ್ ಮೆಶೀನ್‌ಗಳನ್ನು ವಿತರಿಸಬಹುದು. ಹಾಲಿ ಇರುವ ಆನ್‌ಲೈನ್ ಮರ್ಚೆಂಟ್‌ಗಳಿಗೂ ಸೇವೆಯನ್ನು ಮುಂದುವರಿಸಬಹುದು. ಆದರೆ ಹೊಸತಾಗಿ ಆನ್‌ಲೈನ್ ಮರ್ಚೆಂಟ್‌ಗಳನ್ನು ಸೇರಿಸಿಕೊಳ್ಳುವಂತಿಲ್ಲ. ಆರ್‌ಬಿಐನ ಮುಂದಿನ ಆದೇಶದ ತನಕ ಈ ನಿರ್ಬಂಧ ಜಾರಿಯಲ್ಲಿ ಇರಲಿದೆ.
ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಾವಳಿಗೆ ಅನ್ವಯ, ಈ ಹಿಂದಿನ ವಿದೇಶಿ ಹೂಡಿಕೆಗಳ ವಿವರಗಳನ್ನು ನೀಡುವಂತೆಯೂ ಆರ್‌ಬಿಐ, ಪೇಟಿಎಂಗೆ ಸೂಚಿಸಿದೆ. ಪೇಟಿಎಂ ತನ್ನ ಅಧೀನ ಸಂಸ್ಥೆಯಾದ ಪೇಟಿಎಂ ಪೇಮೆಂಟ್ ಸರ್ವೀಸ್ ಲಿಮಿಟೆಡ್ (PPSL) ಮೂಲಕ ಸೇವೆ ನೀಡುತ್ತಿತ್ತು. ಹಾಗೂ ಇದರ ಪರವಾನಗಿಯ ಸಲುವಾಗಿ ( payment aggregators license) ಅರ್ಜಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಆರ್‌ಬಿಐ, 120 ದಿನಗಳೊಳಗೆ ಹೂಡಿಕೆಯ ವಿವರಗಳನ್ನು ಕೊಟ್ಟು ಅರ್ಜಿ ಸಲ್ಲಿಸಲು ಸೂಚಿಸಿದೆ.