Site icon Vistara News

Paytm stocks : ಪೇಟಿಎಂನಲ್ಲಿರುವ ತನ್ನೆಲ್ಲ ಷೇರುಗಳನ್ನು ಮಾರಿದ ಚೀನಾದ ಅಲಿಬಾಬಾ ಗ್ರೂಪ್‌, ಷೇರು ದರ 9% ಕುಸಿತ

alibaba

ನವ ದೆಹಲಿ: ಪೇಟಿಎಂನಲ್ಲಿರುವ ತನ್ನ ಎಲ್ಲ ಷೇರುಗಳನ್ನು (Paytm stocks) ಚೀನಾದ ಅಲಿಬಾಬಾ ಗ್ರೂಪ್‌ ಮಾರಾಟ ಮಾಡಿದೆ. (Alibaba group) ಪೇಟಿಎಂನಲ್ಲಿ ಅಲಿಬಾಬಾ ಗ್ರೂಪ್‌ 3.4% ಷೇರುಗಳನ್ನು, ಅಂದರೆ 2.1 ಕೋಟಿ ಷೇರುಗಳನ್ನು ಮಾರಾಟ ಮಾಡಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲೇ ಪೇಟಿಎಂ ಷೇರು ದರ 646 ರೂ.ಗೆ ಇಳಿಕೆಯಾಯಿತು (9%).

ಅಲಿಬಾಬಾ ಸಮೂಹವು (Alibaba group) ಪೇಟಿಎಂನಲ್ಲಿ ಡಿಸೆಂಬರ್‌ ಅಂತ್ಯಕ್ಕೆ 6.26% ಷೇರುಗಳನ್ನು ಹೊಂದಿತ್ತು. ಜನವರಿಯಲ್ಲಿ 3% ಷೇರುಗಳನ್ನು ಮಾರಾಟ ಮಾಡಿತ್ತು. ಆನ್‌ಲೈನ್‌ ಫುಡ್‌ ಡೆಲಿವರಿ ವಲಯದ ಜೊಮ್ಯಾಟೊದಿಂದಲೂ ೩% ಷೇರುಗಳನ್ನು ಕಳೆದ ನವೆಂಬರ್‌ನಲ್ಲಿ ಮಾರಾಟ ಮಾಡಿತ್ತು.

ಪೇಟಿಎಂ ಕಳೆದ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ 392 ಕೋಟಿ ರೂ, ನಷ್ಟಕ್ಕೀಡಾಗಿತ್ತು. ವರ್ಷದ ಹಿಂದೆ ಇದೇ ಅವಧಿಯಲ್ಲಿ 779 ಕೋಟಿ ರೂ. ನಷ್ಟಕ್ಕೀಡಾಗಿತ್ತು. ಅಂದರೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿತ್ತು. ಪೇಟಿಎಂ ಐಪಿಒ ದರ 2,150 ರೂ.ಗಳಾಗಿದ್ದು, ಬಳಿಕ ಷೇರು ದರದಲ್ಲಿ 70% ಕುಸಿದಿತ್ತು. ಶುಕ್ರವಾರ ಷೇರು ದರ 650 ರೂ.ಗೆ ಇಳಿದಿತ್ತು.

Exit mobile version