Site icon Vistara News

Oil price down | ಚೀನಾದಲ್ಲಿ ಸರ್ಕಾರದ ವಿರುದ್ಧ ರಸ್ತೆಗಿಳಿದ ಜನತೆ, ಕಚ್ಚಾ ತೈಲ ದರ 81.20 ಡಾಲರ್‌ಗೆ ಇಳಿಕೆ

crude oil

ನವ ದೆಹಲಿ: ಚೀನಾದಲ್ಲಿ ಬಿಗಿಯಾದ ಕೋವಿಡ್‌ ನಿಯಂತ್ರಕ ಕ್ರಮಗಳನ್ನು ಕೈಗೊಂಡಿರುವ ಸರ್ಕಾರದ ವಿರುದ್ಧ ನಾನಾ ನಗರಗಳಲ್ಲಿ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, (Oil price down ) ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರದಲ್ಲಿ ಇಳಿಕೆಯಾಗಿದೆ.

ಚೀನಾದ ಹಲವಾರು ನಗರಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಆ ದೇಶದ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿ, ಕಚ್ಚಾ ತೈಲ ಆಮದು ಕೂಡ ಇಳಿಕೆಯಾಗುವ ಸಾಧ್ಯತೆ ಕಂಡು ಬಂದಿದೆ. ಈ ನಡುವೆ ಬ್ರೆಂಟ್‌ ಕಚ್ಚಾ ತೈಲ ದರದಲ್ಲಿ 2.9% ಅಥವಾ 2.43 ಡಾಲರ್‌ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 81.20 ಡಾಲರ್‌ಗೆ ತಗ್ಗಿದೆ.

ಕಳೆದ ಜನವರಿ 4ರಿಂದ ಕನಿಷ್ಠ ಮಟ್ಟಕ್ಕೆ ಕಚ್ಚಾ ತೈಲ ದರ ಇಳಿಕೆಯಾಗಿದೆ. ಯುಎಸ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್‌ ಮೀಡಿಯೇಟ್‌ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 74 ಡಾಲರ್‌ಗೆ ತಗ್ಗಿದೆ.

Exit mobile version