Site icon Vistara News

Per capita income : 2030ಕ್ಕೆ ಭಾರತದ ತಲಾ ಆದಾಯ 3.28 ಲಕ್ಷ ರೂ.ಗೆ ಏರಿಕೆ

cash

ನವ ದೆಹಲಿ: ಭಾರತದ ತಲಾ ಆದಾಯ 2030ರಲ್ಲಿ 4,000 ಡಾಲರ್‌ಗೆ ( 3.28 ಲಕ್ಷ ರೂ.) ಏರಿಕೆಯಾಗಲಿದೆ ಎಂದು ವರದಿಯಾಗಿದೆ. (Per capita income) ಇನ್ನು 7 ವರ್ಷದಲ್ಲಿ ಭಾರತ 6 ಲಕ್ಷ ಕೋಟಿ ಡಾಲರ್‌ ಗಾತ್ರದ ಜಿಡಿಪಿ ಹೊಂದಲಿದೆ ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ (Standard Chartered Bank) ವರದಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವಾರ ಪ್ರಧಾನಿಯಾಗಿ ಮೂರನೇ ಬಾರಿಗೆ ಆಯ್ಕೆಯಾದ ಬಳಿಕ ಭಾರತ ಜಗತ್ತಿನ ಮೂರನೇ ಪ್ರಮುಖ ಆರ್ಥಿಕತೆಯಾಗಲಿದೆ ಎಂದರು. ಅಂದರೆ ಅಮೆರಿಕ ಮತ್ತು ಚೀನಾದ ಬಳಿಕ ದೊಡ್ಡ ಎಕಾನಮಿಯಾಗಲಿದೆ. ಪ್ರಸ್ತುತ ಜಪಾನ್‌ ಮೂರನೇ ಹಾಗೂ ಜರ್ಮನಿ ನಾಲ್ಕನೇ ಸ್ಥಾನದಲ್ಲಿದೆ.

ಕಾರಣವೇನು? ವರದಿಯ ಪ್ರಕಾರ ವಿದೇಶಾಂಗ ವ್ಯವಹಾರ 2030ರ ವೇಳೆಗೆ ಡಬಲ್‌ ಆಗಲಿದೆ. 2.1 ಲಕ್ಷ ಕೋಟಿ ಡಾಲರ್‌ಗೆ ಏರಲಿದೆ. 2023ರಲ್ಲಿ 1.2 ಲಕ್ಷ ಕೋಟಿ ಡಾಲರ್‌ನಷ್ಟಿದೆ. ಗೃಹ ವಲಯದ ವೆಚ್ಚಗಳೂ ಪಾಲು ನೀಡಲಿದೆ. (household consumption) ಇದು 3.4 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದು ಈಗ ಜಿಡಿಪಿ 57% ರಷ್ಟಿದೆ. 2030ರ ವೇಳೆಗೆ ಭಾರತದಲ್ಲಿ 9 ರಾಜ್ಯಗಳು 4,000 ಡಾಲರ್‌ ತಲಾ ಆದಾಯ ಗಳಿಸಲಿವೆ. ಈಗ ಒಂದು ಮಾತ್ರ ಇದೆ.

ಈಗ ತಲಾ ಆದಾಯದಲ್ಲಿ ತೆಲಂಗಾಣ 2,75,44 ರೂ.ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 2,65,623 ಕೋಟಿ ರೂ.ಗಳ ತಲಾ ಆದಾಯವನ್ನು ಹೊಂದಿದೆ. ತಮಿಳುನಾಡು (2,41,131 ರೂ.), ಕೇರಳ 2,30,601 ಆಂಧ್ರಪ್ರದೇಶ 2,07,771 ರೂ. ತಲಾ ಆದಾಯವನ್ನು ಹೊಂದಿದೆ. ಆದರೆ ಸ್ಟಾನ್‌ ಸಿ ವರದಿ ಪ್ರಕಾರ 2030ರ ವೇಳೆಗೆ ತಲಾ ಆದಾಯದಲ್ಲಿ ಗುಜರಾತ್‌ ಮುಂಚೂಣಿಗೆ ಬರಲಿದೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹರಿಯಾಣ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಅನುಸರಿಸುವ ನಿರೀಕ್ಷೆ ಇದೆ.

ಪ್ರಸ್ತುತ ತೆಲಂಗಾಣ, ದಿಲ್ಲಿ, ಕರ್ನಾಟಕ, ಹರಿಯಾಣ, ಗುಜರಾತ್‌, ಆಂಧ್ರಪ್ರದೇಶ ಈಗ ಒಟ್ಟಾಗಿ ನ್ಯಾಶನಲ್‌ ಜಿಡಿಪಿಯ 20% ಹೊಂದಿವೆ. ಹಾಗೂ 2030ರ ವೇಳೆಗೆ 6,000 ಕೋಟಿ ರೂ. ತಲಾ ಆದಾಯ ಹೊಂದಲಿವೆ.

ಮತ್ತೊಂದು ಕಡೆ ಉತ್ತರಪ್ರದೇಶ, ಬಿಹಾರ ಜನಸಂಖ್ಯೆಯ 25% ಪಾಲನ್ನು ಹೊಂದಲಿವೆ. ಆದರೆ ತಲಾ ಆದಾಯ 2000 ಡಾಲರ್‌ (1.64 ಲಕ್ಷ ರೂ.) ಮಾತ್ರ ಇರಲಿದೆ. ಇದೂ ಕೂಡ 2020ರ ಮಟ್ಟ ಹೋಲಿಸಿದರೆ ಡಬಲ್‌ ಆಗಿರಲಿದೆ. ಇದರಿಂದಾಗಿ ಆರ್ಥಿಕ ಬೆಳವಣಿಯ ಲಾಭವನ್ನು ಬಡವರೂ ಪಡೆಯಲಿದ್ದಾರೆ,

Exit mobile version