Per capita income : 2030ಕ್ಕೆ ಭಾರತದ ತಲಾ ಆದಾಯ 3.28 ಲಕ್ಷ ರೂ.ಗೆ ಏರಿಕೆ Vistara News

ವಾಣಿಜ್ಯ

Per capita income : 2030ಕ್ಕೆ ಭಾರತದ ತಲಾ ಆದಾಯ 3.28 ಲಕ್ಷ ರೂ.ಗೆ ಏರಿಕೆ

Per capita income ಭಾರತದ ತಲಾ ಆದಾಯ 2030ಕ್ಕೆ 3.28 ಲಕ್ಷ ರೂ.ಗೆ ಏರಲಿದೆ ಎಂದು ವರದಿಯಾಗಿದೆ. ಕಾರಣವೇನು? ಇಲ್ಲಿದೆ ವಿವರ.

VISTARANEWS.COM


on

cash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತದ ತಲಾ ಆದಾಯ 2030ರಲ್ಲಿ 4,000 ಡಾಲರ್‌ಗೆ ( 3.28 ಲಕ್ಷ ರೂ.) ಏರಿಕೆಯಾಗಲಿದೆ ಎಂದು ವರದಿಯಾಗಿದೆ. (Per capita income) ಇನ್ನು 7 ವರ್ಷದಲ್ಲಿ ಭಾರತ 6 ಲಕ್ಷ ಕೋಟಿ ಡಾಲರ್‌ ಗಾತ್ರದ ಜಿಡಿಪಿ ಹೊಂದಲಿದೆ ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ (Standard Chartered Bank) ವರದಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವಾರ ಪ್ರಧಾನಿಯಾಗಿ ಮೂರನೇ ಬಾರಿಗೆ ಆಯ್ಕೆಯಾದ ಬಳಿಕ ಭಾರತ ಜಗತ್ತಿನ ಮೂರನೇ ಪ್ರಮುಖ ಆರ್ಥಿಕತೆಯಾಗಲಿದೆ ಎಂದರು. ಅಂದರೆ ಅಮೆರಿಕ ಮತ್ತು ಚೀನಾದ ಬಳಿಕ ದೊಡ್ಡ ಎಕಾನಮಿಯಾಗಲಿದೆ. ಪ್ರಸ್ತುತ ಜಪಾನ್‌ ಮೂರನೇ ಹಾಗೂ ಜರ್ಮನಿ ನಾಲ್ಕನೇ ಸ್ಥಾನದಲ್ಲಿದೆ.

ಕಾರಣವೇನು? ವರದಿಯ ಪ್ರಕಾರ ವಿದೇಶಾಂಗ ವ್ಯವಹಾರ 2030ರ ವೇಳೆಗೆ ಡಬಲ್‌ ಆಗಲಿದೆ. 2.1 ಲಕ್ಷ ಕೋಟಿ ಡಾಲರ್‌ಗೆ ಏರಲಿದೆ. 2023ರಲ್ಲಿ 1.2 ಲಕ್ಷ ಕೋಟಿ ಡಾಲರ್‌ನಷ್ಟಿದೆ. ಗೃಹ ವಲಯದ ವೆಚ್ಚಗಳೂ ಪಾಲು ನೀಡಲಿದೆ. (household consumption) ಇದು 3.4 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದು ಈಗ ಜಿಡಿಪಿ 57% ರಷ್ಟಿದೆ. 2030ರ ವೇಳೆಗೆ ಭಾರತದಲ್ಲಿ 9 ರಾಜ್ಯಗಳು 4,000 ಡಾಲರ್‌ ತಲಾ ಆದಾಯ ಗಳಿಸಲಿವೆ. ಈಗ ಒಂದು ಮಾತ್ರ ಇದೆ.

ಈಗ ತಲಾ ಆದಾಯದಲ್ಲಿ ತೆಲಂಗಾಣ 2,75,44 ರೂ.ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ 2,65,623 ಕೋಟಿ ರೂ.ಗಳ ತಲಾ ಆದಾಯವನ್ನು ಹೊಂದಿದೆ. ತಮಿಳುನಾಡು (2,41,131 ರೂ.), ಕೇರಳ 2,30,601 ಆಂಧ್ರಪ್ರದೇಶ 2,07,771 ರೂ. ತಲಾ ಆದಾಯವನ್ನು ಹೊಂದಿದೆ. ಆದರೆ ಸ್ಟಾನ್‌ ಸಿ ವರದಿ ಪ್ರಕಾರ 2030ರ ವೇಳೆಗೆ ತಲಾ ಆದಾಯದಲ್ಲಿ ಗುಜರಾತ್‌ ಮುಂಚೂಣಿಗೆ ಬರಲಿದೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹರಿಯಾಣ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಅನುಸರಿಸುವ ನಿರೀಕ್ಷೆ ಇದೆ.

ಪ್ರಸ್ತುತ ತೆಲಂಗಾಣ, ದಿಲ್ಲಿ, ಕರ್ನಾಟಕ, ಹರಿಯಾಣ, ಗುಜರಾತ್‌, ಆಂಧ್ರಪ್ರದೇಶ ಈಗ ಒಟ್ಟಾಗಿ ನ್ಯಾಶನಲ್‌ ಜಿಡಿಪಿಯ 20% ಹೊಂದಿವೆ. ಹಾಗೂ 2030ರ ವೇಳೆಗೆ 6,000 ಕೋಟಿ ರೂ. ತಲಾ ಆದಾಯ ಹೊಂದಲಿವೆ.

ಮತ್ತೊಂದು ಕಡೆ ಉತ್ತರಪ್ರದೇಶ, ಬಿಹಾರ ಜನಸಂಖ್ಯೆಯ 25% ಪಾಲನ್ನು ಹೊಂದಲಿವೆ. ಆದರೆ ತಲಾ ಆದಾಯ 2000 ಡಾಲರ್‌ (1.64 ಲಕ್ಷ ರೂ.) ಮಾತ್ರ ಇರಲಿದೆ. ಇದೂ ಕೂಡ 2020ರ ಮಟ್ಟ ಹೋಲಿಸಿದರೆ ಡಬಲ್‌ ಆಗಿರಲಿದೆ. ಇದರಿಂದಾಗಿ ಆರ್ಥಿಕ ಬೆಳವಣಿಯ ಲಾಭವನ್ನು ಬಡವರೂ ಪಡೆಯಲಿದ್ದಾರೆ,

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Adani Stocks: ‘ಗೂಳಿ’ಯಂತೆ ಜಿಗಿದ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ, 20% ಏರಿಕೆಗೆ ಏನು ಕಾರಣ?

Adani Stocks: ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳ ಮೌಲ್ಯವು ದಿಢೀರನೆ ಏರಿಕೆಯಾಗಿದೆ. ಇತ್ತೀಚೆಗೆ ಅದಾನಿ-ಹಿಂಡನ್‌ಬರ್ಗ್‌ ರಿಸರ್ಚ್‌ ಪ್ರಕರಣದ ಕುರಿತು ಸೆಬಿ ತನಿಖೆಯ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪೇ ಇದಕ್ಕೆ ಕಾರಣ ಎನ್ನಲಾಗಿದೆ.

VISTARANEWS.COM


on

Adani Stocks Rise
Koo

ಮುಂಬೈ: ಗೌತಮ್‌ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್‌ ಷೇರುಗಳ (Adani Stocks) ಮೌಲ್ಯವು ಮಂಗಳವಾರ (ನವೆಂಬರ್‌ 18) ದಿಢೀರನೇ ಏರಿಕೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ವಹಿವಾಟು (Share Market) ಆರಂಭವಾಗುತ್ತಲೇ ಅದಾನಿ ಗ್ರೂಪ್‌ ಷೇರುಗಳ ಮೌಲ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದಾನಿ ಗ್ರೂಪ್‌ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಗ್ಗೆ ಟ್ರೇಡಿಂಗ್‌ ಆರಂಭವಾಗುತ್ತಲೇ ಅದಾನಿ ಟೋಟಲ್‌ ಗ್ಯಾಸ್‌ನ ಷೇರುಗಳ ಮೌಲ್ಯವು ಶೇ.20ರಷ್ಟು ಏರಿಕೆಯಾಯಿತು. ಹಾಗೆಯೇ, ಅದಾನಿ ಎನರ್ಜಿ ಸೊಲ್ಯೂಷನ್ಸ್‌ ಷೇರುಗಳ ಬೆಲೆ ಶೇ.13ರಷ್ಟು ಏರಿಕೆ ಕಂಡಿತು. ನಿಫ್ಟಿ ಸ್ಟಾಕ್ಸ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್‌ ಸೇರಿ ಹಲವು ಅಂಗಸಂಸ್ಥೆಗಳ ಷೇರುಗಳ ಮೌಲ್ಯವು ಶೇ.3-4ರಷ್ಟು ಏರಿಕೆಯಾಗಿದೆ. ಅಲ್ಲದೆ ಅದಾನಿ ಗ್ರೂಪ್‌ ವ್ಯಾಪ್ತಿಗೆ ಬರುವ ಎನ್‌ಡಿಟಿವಿ, ಎಸಿಸಿ, ಅಂಬುಜಾ ಸಿಮೆಂಟ್‌ ಕಂಪನಿಗಳ ಮೌಲ್ಯವೂ ಏರಿಕೆಯಾಗಿದೆ. ಎನ್‌ಡಿಟಿವಿ ಷೇರುಗಳ ಮೌಲ್ಯ ಶೇ.7.78ರಷ್ಟು, ಅಂಬುಜಾ ಸಿಮೆಂಟ್‌ ಶೇ.3.73ರಷ್ಟು ಹಾಗೂ ಎಸಿಸಿಯು ಶೇ.3.02ರಷ್ಟು ಏರಿಕೆ ಕಂಡಿದೆ.

ದಿಢೀರ್‌ ಏರಿಕೆಗೆ ಕಾರಣ ಏನು?

ಗೌತಮ್‌ ಅದಾನಿ ಅವರ ಅದಾನಿ ಗ್ರೂಪ್‌ ವಿರುದ್ಧ ಹಿಂಡನ್‌ಬರ್ಗ್‌ ವರದಿಯಲ್ಲಿ ಮಾಡಲಾದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಮಾರುಕಟ್ಟೆ ನಿಯಂತ್ರಕ ಸೆಬಿಯನ್ನು (SEBI) ಅನುಮಾನಿಸಲು ಸಾಧ್ಯವಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಹೇಳಿರುವುದೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ ದಿಢೀರನೆ ಏರಿಕೆಯಾಗಲು ಕಾರಣ ಎಂದು ತಿಳಿದುಬಂದಿದೆ. “ತನಿಖೆ ನಡೆಸುತ್ತಿರುವ ಸೆಬಿಯು ಎಲ್ಲ ರೀತಿಯ ತನಿಖೆ ಮುಗಿಸಲಿ. ಅಲ್ಲದೆ, ಸೆಬಿಯನ್ನು ಅನುಮಾನಿಸಲು ಆಗುವುದಿಲ್ಲ ಹಾಗೂ ಹಿಂಡನ್‌ಬರ್ಗ್‌ ವರದಿಯ ಎಲ್ಲ ಆರೋಪಗಳನ್ನು ನಿಜ ಎಂದು ಭಾವಿಸಬೇಕಿಲ್ಲ. ತನಿಖೆಗೆ ಎಸ್‌ಐಟಿ ರಚಿಸುವ ಅವಶ್ಯಕತೆ ಇಲ್ಲ” ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಇದನ್ನೂ ಓದಿ: Sri Lanka Port: ಶ್ರೀಲಂಕಾದಲ್ಲಿ ಭಾರತದ ಇನ್ನಷ್ಟು ಪ್ರಭಾವ; ಅದಾನಿ ಟರ್ಮಿನಲ್‌ನಲ್ಲಿ ಅಮೆರಿಕ ಭಾರಿ ಹೂಡಿಕೆ

ಅದಾನಿ ಗ್ರೂಪ್‌ಗೆ ಭಾರಿ ಲಾಭ

ಕಳೆದ ವರ್ಷಕ್ಕೆ (2022) ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (2023) ಅದಾನಿ ಪವರ್ ಕಂಪನಿಯ ಏಕೀಕೃತ ಲಾಭವು ಒಂಬತ್ತು ಪಟ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ. 2023- 2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ತೆರಿಗೆ ನಂತರದ ಏಕೀಕೃತ ಲಾಭವು ಶೇಕಡಾ 848ರಷ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ ಎಂದು ಕಂಪನಿಯು ತಿಳಿಸಿದೆ. ಹಿಂಡನ್‌ಬರ್ಗ್‌ ವರದಿ ಬಳಿಕ ಅದಾನಿ ಗ್ರೂಪ್‌ ಷೇರುಗಳ ಮೌಲ್ಯ ಕುಸಿದಿತ್ತು. ಇದರಿಂದ ಹೂಡಿಕೆದಾರರಿಗೆ ನಷ್ಟವುಂಟಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Vidyarthi Bhavan : ಹೊಸ ಲುಕ್‌ನಲ್ಲಿ ಮಿಂಚುತ್ತಿದೆ ವಿದ್ಯಾರ್ಥಿ ಭವನ; ಏನೇನು ಬದಲಾಗಿದೆ ನೋಡಿ!

Vidyarthi Bhavan: ಬೆಂಗಳೂರಿನ ಜನಪ್ರಿಯ ವಿದ್ಯಾರ್ಥಿ ಭವನ ಈಗ ಹೊಸ ಲುಕ್‌ನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತಿದೆ. ಹಾಗಿದ್ದರೆ ಏನಾಗಿದೆ ಬದಲಾವಣೆ.

VISTARANEWS.COM


on

Vidyarthi Bhavana
Koo

ಬೆಂಗಳೂರು: ಬೆಂಗಳೂರಿನ ಐಡೆಂಟಿಟಿ ಎಂಬಂತೆ ಗುರುತಿಸಿಕೊಂಡಿರುವ ಜನಪ್ರಿಯ ಫುಡ್‌ ಜಾಯಿಂಟ್‌ ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನ (Vidyarthi Bhavan). ರಾಜಧಾನಿಗೆ ಬಂದವರು ಒಮ್ಮೆಯಾದರೂ ವಿದ್ಯಾರ್ಥಿ ಭವನಕ್ಕೆ ಹೋಗದೆ ಇರುವುದಿಲ್ಲ. ಇಂಥ ಆಕರ್ಷಕ ಹೋಟೆಲ್‌ ಈಗ ಹೊಸ ರೂಪ ಪಡೆದುಕೊಂಡಿದೆ. ತನ್ನ ಪಾರಂಪರಿಕ ಶೈಲಿಯೊಂದಿಗೆ ಗಮನ ಸೆಳೆಯುತ್ತಿರುವ ಈ ರೆಸ್ಟೋರೆಂಟ್‌ ಈಗ ಹೊಸ ವಿನ್ಯಾಸಗಳೊಂದಿಗೆ ಗಮನ ಸೆಳೆಯುತ್ತಿದೆ.

ವಿದ್ಯಾರ್ಥಿ ಭವನಕ್ಕೆ ದೊಡ್ಡ ಇತಿಹಾಸವೇ ಇದೆ. 1943ರಲ್ಲಿ ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ (Gandhi Bazar in Basavanagudi) ಆರಂಭಗೊಂಡ ಈ ಹೋಟೆಲ್‌ 80 ವರ್ಷಗಳ ಬಳಿಕವೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಕಾರಣ ಅಲ್ಲಿನ ರುಚಿಕರ ಮಸಾಲೆ ದೋಸೆ (Vidyarthi Bhavan Masala dosa) ಮತ್ತು ಘಮಘಮಿಸುವ ಫಿಲ್ಟರ್‌ ಕಾಫಿ (Vidyarthi Bhavan).

ಉಡುಪಿಯ ವೆಂಕಟರಮಣ ಉರಾಳರು ಸ್ಥಾಪಿಸಿದ ಈ ಹೋಟೆಲ್‌ಗೆ ವಿದ್ಯಾರ್ಥಿ ಭವನ ಎಂಬ ಹೆಸರು ಬರುವುದಕ್ಕೂ ಒಂದು ಒಂದು ಕಥೆ ಇದೆ. ಮೊದಲು ಈ ಹೋಟೆಲ್‌ಗೆ ಹೆಸರು ಇರಲಿಲ್ಲ. ಈ ಭಾಗದಲ್ಲಿ ಶಾಲೆ ಮತ್ತು ಕಾಲೇಜುಗಳು ಇದ್ದಿದ್ದರಿಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್‌ ಮಾಡಿ ಈ ಹೋಟೆಲ್‌ ಆರಂಭಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿ ಭವನ ಎಂಬ ಹೆಸರು ಇಡಲಾಯಿತು. ಅಲ್ಪ ಕಾಲದಲ್ಲೇ ಜನಪ್ರಿಯತೆಯನ್ನು ಗಳಿಸಿದ ವಿದ್ಯಾರ್ಥಿ ಭವನವನ್ನು ಮುಂದೆ ವೆಂಕಟರಮಣ ಉರಾಳರ ತಮ್ಮ ಪರಮೇಶ್ವರ ಉರಾಳ ಅವರು ಮುಂದುವರಿಸಿದರು.

ಮುಚ್ಚುವ ಹೋಟೆಲ್‌ಗೆ ಜೀವದಾನ ನೀಡಿದ್ದು ನಾರಾಯಣಮೂರ್ತಿ!

ನಿಜವೆಂದರೆ, ಈ ಹೋಟೆಲ್‌ ಇವತ್ತು ಕೂಡಾ ಉಳಿದಿದೆ ಎಂದರೆ ಅದಕ್ಕೆ ಕಾರಣ ಇನ್ಫೋಸಿಸ್‌ ಸ್ಥಾಪಕರಾದ ನಾರಾಯಣ ಮೂರ್ತಿ ಅವರು ಎಂದು ಹೇಳಲಾಗುತ್ತಿದೆ. ಪರಮೇಶ್ವರ ಉರಾಳರು 1970ರಲ್ಲಿ ಈ ಹೋಟೆಲನ್ನು ಕುಂದಾಪುರದ ರಾಮಕೃಷ್ಣ ಅಡಿಗರಿಗೆ ಮಾರಾಟ ಮಾಡಿದ್ದರು. ಮುಂದೆ ಹಲವು ವರ್ಷ ಇದು ಚೆನ್ನಾಗಿಯೇ ನಡೆಯಿತು. ಆದರೆ, ರಾಮಕೃಷ್ಣ ಅಡಿಗರಿಗೆ ವಯಸ್ಸಾದಾಗ ಅದನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಅವರ ಮಕ್ಕಳು ಒಳ್ಳೆಯ ಉದ್ಯೋಗದಲ್ಲಿದ್ದರು. ಹೀಗಾಗಿ ಈ ಹೋಟೆಲ್‌ನ್ನು ಪಡೆದು ಒಂದು ಕಮರ್ಷಿಯಲ್‌ ಕಾಂಪ್ಲೆಕ್ಸ್‌ ಕಟ್ಟಿಸುವುದು ಉತ್ತಮ ಎಂಬ ಅಭಿಪ್ರಾಯ ಬಂತು. ಆಗ ಅದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅವರ ಕಿವಿಗೆ ಬಿತ್ತು. ನಾರಾಯಣ ಮೂರ್ತಿ ಅವರು ರಾಮಕೃಷ್ಣ ಅಡಿಗರ ಮಗ ಅರುಣ್‌ ಅಡಿಗರ ಜತೆ ಮಾತನಾಡಿ ಹೋಟೆಲ್‌ ಉದ್ಯಮ ಮುಂದುವರಿಸುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಅದರಂತೆ ಅರುಣ್‌ ಅವರು ತಮ್ಮ ಉದ್ಯೋಗ ಬಿಟ್ಟು ವಿದ್ಯಾರ್ಥಿ ಭವನವನ್ನು ನೋಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ಅನ್ವೇಷಣೆಗಳ ಮೂಲಕ ಜನಮನ ಗೆಲ್ಲುತ್ತಿದ್ದಾರೆ.

ವಿದ್ಯಾರ್ಥಿ ಭವನದಲ್ಲಿ ಕ್ಯೂನಲ್ಲಿ ನಿಲ್ಲುವುದೇ ಖುಷಿ!

ನಿಜವೆಂದರೆ ವಿದ್ಯಾರ್ಥಿ ಭವನ ಒಂದು ಸಣ್ಣ ಹೋಟೆಲ್‌. ನೀವು ಅಲ್ಲಿ ಒಂದು ದೋಸೆ ತಿನ್ನಬೇಕು ಎಂದರೆ ಅರ್ಧ ಗಂಟೆಯಾದರೂ ಕಾಯಬೇಕು. ಆದರೆ, ಜನರು ಕಾಯುವಿಕೆಯಲ್ಲೇ ಖುಷಿಪಡುತ್ತಾರೆ. ಅದೆಷ್ಟೋ ಸಾಹಿತಿಗಳು, ಸಿನಿಮಾ ನಟ-ನಟಿಯರು, ರಾಜಕಾರಣಿಗಳಿಗೆ ಇದೊಂದು ಫೇವರಿಟ್‌ ತಾಣವಾಗಿ ಮಾರ್ಪಟ್ಟಿದೆ. ಕೆಲವರಿಗೆ ಅಲ್ಲಿಗೆ ಹೋಗಿ ಒಂದು ಫೋಟೊ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಹಾಕುವುದೇ ಘನತೆಯ ಸಂಕೇತ.

ಇಲ್ಲಿ ತುಪ್ಪ, ದೋಸೆ, ಮಸಾಲೆ ದೋಸೆಯಲ್ಲದೆ, ಇಡ್ಲಿ, ಖಾರಾಬಾತ್‌, ಪೂರಿ ಸಾಗು, ರವೆ ವಡೆ, ಕೇಸರಿ ಬಾತ್‌ ಕೂಡಾ ಭಾರಿ ಫೇಮಸ್‌. ಇಲ್ಲಿನ ಫುಡ್‌ಗೆ ಯಾವುದೇ ಕೃತಕ ವಸ್ತುಗಳನ್ನು ಬೆರೆಸುವುದಿಲ್ಲ. ಬೆಣ್ಣೆಯೂ ಶುದ್ಧ, ತುಪ್ಪವೂ ಶುದ್ಧ. ಬೆಣ್ಣೆಯನ್ನು ಹಳ್ಳಿಯ ಭಾಗದಿಂದಲೇ ತರಿಸಲಾಗುತ್ತದೆ. ಹೀಗಾಗಿ ನೀವು ಇಲ್ಲಿ ದೋಸೆ ತಿಂದರೆ ಕೈ ತೊಳೆದರೂ ಪರಿಮಳ ಹಾಗೇ ಇರುತ್ತದೆ.

ಈ ಹೋಟೆಲ್‌ನಲ್ಲಿ ಸರ್ವ್‌ ಮಾಡುವವರು ಒಮ್ಮೆಗೇ 14 ತಟ್ಟೆಗಳನ್ನು ಹಿಡಿದುಕೊಂಡು ಬಂದು ಸರ್ವ್‌ ಮಾಡುವುದು ವಿಶೇಷ. ಅದರ ವಿಡಿಯೋಗಳು ಗಮನ ಸೆಳೆದಿವೆ. ಈ ವಿಡಿಯೊವನ್ನು ಸ್ವತಃ ಉದ್ಯಮಿ ಆನಂದ ಮಹೀಂದ್ರಾ ಅವರೇ ಹಂಚಿಕೊಂಡಿದ್ದರಿಂದ ವಿದ್ಯಾರ್ಥಿ ಭವನ ದೇಶಾದ್ಯಂತ ಮಿರಮಿರ ಮಿಂಚಿತ್ತು.

ಈಗ ನಡೆದಿರುವ ಬದಲಾವಣೆ ಏನು?

ಮೊದಲು ಇಲ್ಲಿ ಅಲ್ಲೇ ತಿನ್ನುವವರಿಗೆ ಮತ್ತು ಪಾರ್ಸೆಲ್‌ಗೆ ಒಂದೇ ಕೌಂಟರ್‌ ಇತ್ತು. ಈಗ ಪಾರ್ಸೆಲ್‌ಗೆ ಪ್ರತ್ಯೇಕ ಕೌಂಟರ್‌ ಮಾಡಲಾಗಿದೆ. ಹೀಗಾಗಿ ಕಾಯುವಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಹೋಟೆಲ್‌ನಲ್ಲಿರುವ ಹೊಸ ಆಕರ್ಷಣೆ ಏನೆಂದರೆ, ಹೋಟೆಲ್‌ನ ಪ್ರವೇಶ ದ್ವಾರದ ಪಕ್ಕದ ಗೋಡೆಯಲ್ಲಿ ಬರೆಯಲಾಗಿರುವ ಆಕರ್ಷಕ ಚಿತ್ರಗಳು. ಕಳೆದ ಕೆಲವು ದಿನಗಳಿಂದ ಟೀಮ್‌ ಇನ್‌ಕ್ರೇಜ್‌ ಎಂಬ ತಂಡ ಹೋಟೆಲ್‌ನ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸುತ್ತಿತ್ತು, ಅದೀಗ ಪೂರ್ಣಗೊಂಡಿದೆ.

ಈ ಚಿತ್ರಗಳು ಪೂರ್ಣಗೊಂಡಾಗ ಅಲ್ಲಿ ಇಡೀ ಬಸವನ ಗುಡಿಯೇ ಅರಳಿಕೊಂಡಿದೆ. ಬಸವನ ಗುಡಿಯ ಚಾರಿತ್ರಿಕ ಚೆಲುವು, ಈಗಿನ ಬಣ್ಣ, ಬ್ಯೂಗಲ್‌ ರಾಕ್‌ ಬೆಟ್ಟ.. ಹೀಗೆ ಎಲ್ಲವನ್ನೂ ಒಳಗೊಂಡ ದೃಶ್ಯಗಳು ರೇಖಾಚಿತ್ರಗಳಲ್ಲಿ ಜೀವ ತಳೆದಿದೆ. ಇಲ್ಲಿ ಬುಲ್‌ ಟೆಂಪಲ್‌ನ ದೊಡ್ಡ ಗಣೇಶ ಇದ್ದಾನೆ, ಕೆಂಪೇಗೌಡರಿದ್ದಾರೆ, ಕಡಲೆ ಪರಿಷೆ ಸೇರಿದಂತೆ ಸಾಂಸ್ಕೃತಿಕ ಅಸ್ಮಿತೆಗಳಿವೆ.

ಈ ಹೋಟೆಲ್‌ಗೆ ಬಂದು ಹೋದ ದ.ರಾ. ಬೇಂದ್ರೆ, ನಿಸಾರ್‌ ಅಹಮದ್‌ ಸೇರಿದಂತೆ ಹಲವು ಸಾಹಿತಿಗಳ ಚಿತ್ರಗಳಿವೆ.

ನಿಮ್ಮ ಪ್ರತಿಭೆ ಮತ್ತು ಶ್ರದ್ಧೆಗಳು ಹೋಟೆಲ್‌ಗೆ ಹೊಸ ಲವಲವಿಕೆಯನ್ನು ತಂದುಕೊಟ್ಟಿವೆ. ನಮ್ಮ ಪುಟ್ಟ ಜಾಗವನ್ನು ನೀವು ಸಮೃದ್ಧಗೊಳಿಸಿದ್ದೀರಿ. ಆ ಮೂಲಕ ಎಲ್ಲರನ್ನೂ ಇಲ್ಲಿಗೆ ಬರುವಂತೆ ಪ್ರೇರೇಪಿಸುತ್ತಿದ್ದೀರಿ ಎಂದು ವಿದ್ಯಾರ್ಥಿ ಭವನದ ಫೇಸ್‌ಬುಕ್‌ನಲ್ಲಿ ಬರೆಯಲಾಗಿದೆ.

ಇದನ್ನು ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್‌ ಬಗ್ಗೆ ಆನಂದ್‌ ಮಹೀಂದ್ರ ಟ್ವೀಟ್

ಹಾಗಿದ್ದರೆ ಅಲ್ಲಿಗೆ ಯಾವಾಗ ಹೋಗಬೇಕು?

ಇಷ್ಟೆಲ್ಲ ಕೇಳಿದ ಮೇಲೆ ನಿಮಗೆ ಅಲ್ಲಿಗೊಮ್ಮೆ ಹೋಗಿ ಚಿತ್ರಗಳನ್ನು ನೋಡಬೇಕು, ಒಂದು ದೋಸೆ, ಫಿಲ್ಟರ್‌ ಕಾಫಿ ಕುಡಿಯಬೇಕು ಅನಿಸಿದರೆ ಖಂಡಿತವಾಗಿಯೂ ಹೋಗಿ. ಹೋಗುವ ಮುನ್ನ ಸಮಯ ನೋಡಿಕೊಳ್ಳಿ.

ಸೋಮವಾರದಿಂದ ಗುರುವಾರ: ಬೆಳಗ್ಗೆ 6.30 ರಿಂದ 11.30, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ
ಶುಕ್ರವಾರ ವಾರದ ರಜಾ ದಿನ
ಶನಿವಾರ ಮತ್ತು ಭಾನುವಾರ: ಬೆಳಗ್ಗೆ 6.30ರಿಂದ 12, ಮಧ್ಯಾಹ್ನ 1.30ರಿಂದ ರಾತ್ರಿ 8
ಅಂದ ಹಾಗೆ ಮಲ್ಲೇಶ್ವರದಲ್ಲೂ ಹೊಸ ಬ್ರಾಂಚ್‌ ಓಪನ್‌ ಆಗಿದೆ.

Continue Reading

ದೇಶ

GDP Data: ನ.30ಕ್ಕೆ ಜಿಡಿಪಿ ಡೇಟಾ ಬಿಡುಗಡೆ; ಏನಿದೆ ಅಚ್ಚರಿ? ತಜ್ಞರ ವರದಿ ಹೇಳುವುದೇನು?

GDP Data: ರಾಷ್ಟ್ರೀಯ ಅಂಕಿ-ಅಂಶ ಕಚೇರಿಯು ಗುರುವಾರ ಜಿಡಿಪಿ ಬೆಳವಣಿಗೆ ಕುರಿತು ದತ್ತಾಂಶ ಬಿಡುಗಡೆ ಮಾಡಲಿದೆ. ಹಾಗಾಗಿ, ಜಿಡಿಪಿ ಬೆಳವಣಿಗೆ ಕುರಿತು ನಿರೀಕ್ಷೆ ಹೆಚ್ಚಾಗಿದೆ.

VISTARANEWS.COM


on

GDP Data
Koo

ನವದೆಹಲಿ: 2023-24ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ (2nd Quarter) ಒಟ್ಟು ರಾಷ್ಟ್ರೀಯ ಉತ್ಪನ್ನದ ಮಾಹಿತಿಯನ್ನು (GDP Data) ನವೆಂಬರ್‌ 30ರಂದು ಬಿಡುಗಡೆ ಮಾಡಲಾಗುತ್ತದೆ. ಜಿಡಿಪಿ ಬೆಳವಣಿಗೆ ಕುರಿತು ರಾಷ್ಟ್ರೀಯ ಅಂಕಿ-ಅಂಶ ಕಚೇರಿಯು (National Statistical Office) ಡೇಟಾ ಬಿಡುಗಡೆ ಮಾಡಲಿದೆ. ಕೊರೊನಾ ಬಿಕ್ಕಟ್ಟಿನ ನಂತರ ದೇಶದ ಆರ್ಥಿಕ ವ್ಯವಸ್ಥೆ ಸರಿದಾರಿಗೆ ಬರುತ್ತಿರುವ ಕಾರಣ ಎರಡನೇ ತ್ರೈಮಾಸಿಕದ ಮಾಹಿತಿಯು ಹೆಚ್ಚು ಕುತೂಹಲ ಹುಟ್ಟಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಈಗಾಗಲೇ ಎರಡನೇ ತ್ರೈಮಾಸಿಕದ ಮಾಹಿತಿಯು ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ ಎಂದಿದ್ದಾರೆ. ಹಾಗೆಯೇ, ಭಾರತದ ಜಿಡಿಪಿ ಬೆಳವಣಿಗೆಯು ಎರಡನೇ ತ್ರೈಮಾಸಿಕದಲ್ಲಿ ಶೇ.6.5ರಿಂದ ಶೇ.7.1ರಷ್ಟು ಇರಲಿದೆ ಎಂದು ಅಂದಾಜಿಸಿದ್ದಾರೆ. ಹಾಗಾಗಿ, ಈ ಬಾರಿಯ ಡೇಟಾ ಸಕಾರಾತ್ಮಕವಾಗಿರಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

Vistara editorial, India Achieved 4 trillion dollars nominal GDP

ತಜ್ಞರು, ಬ್ಯಾಂಕ್‌ಗಳ ವರದಿ ಏನು?

ರೇಟಿಂಗ್‌ ಏಜನ್ಸಿಯಾದ ಇಕ್ರಾ ಸಂಸ್ಥೆಯ ತಜ್ಞರ ಪ್ರಕಾರ ಭಾರತದ ಜಿಡಿಪಿಯು ಎರಡನೇ ತ್ರೈಮಾಸಿಕದಲ್ಲಿ ಶೇ.7ರಷ್ಟು ಇರಲಿದೆ. ಇನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಶೇ.6.9ರಿಂದ ಶೇ.7.1ರಷ್ಟು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದೆ. ಅದೇ ರೀತಿ, ಬಾರ್‌ಕ್ಲೇಸ್‌ ಇಂಡಿಯಾ ಶೇ.6.5ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಎಲ್ಲ ವರದಿಗಳು ಸಕಾರಾತ್ಮಕ ಬೆಳವಣಿಗೆಯನ್ನು ಬಿಂಬಿಸುತ್ತಿವೆ.

“ದೇಶಾದ್ಯಂತ ಮಳೆ ಕೊರತೆ ಆಗಿದೆ. ಆದರೂ, ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿ ನಡೆದಿವೆ. ಇದರಿಂದಾಗಿ ಜಿಡಿಪಿ ಬೆಳವಣಿಗೆ ದರ ಸಕಾರಾತ್ಮಕವಾಗಿರಲಿದೆ” ಎಂದು ಇಕ್ರಾ ತಿಳಿಸಿದೆ. “ದೇಶೀಯ ಬಳಕೆ ಹೆಚ್ಚಾಗಿದೆ. ಯುಟಿಲಿಟಿ ಸೆಕ್ಟರ್‌ನಲ್ಲಿ ಗಮನಾರ್ಹ ಏಳಿಗೆಯಾಗಿದೆ. ಹಾಗಾಗಿ, ಜಿಡಿಪಿ ಬೆಳವಣಿಗೆ ಕುರಿತು ವಿಶ್ವಾಸವಿದೆ” ಎಂದು ಬಾರ್‌ಕ್ಲೇ ವರದಿ ಹೇಳಿದೆ. ಸಾಗಣೆ, ಸೇವಾ ವಲಯದ ಬೆಳವಣಿಗೆಯು ವಿಶ್ವಾಸ ಹೆಚ್ಚಿಸಲು ಕಾರಣ ಎಂದು ತಿಳಿಸಿದೆ. ಹೀಗೆ ಹಲವು ವರದಿಗಳು ಜಿಡಿಪಿ ಬೆಳವಣಿಗೆಯ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿವೆ. ಹಾಗಾಗಿ, ಈ ಬಾರಿಯ ಜಿಡಿಪಿ ಡೇಟಾ ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: 4 ಟ್ರಿಲಿಯನ್ ಡಾಲರ್ ಜಿಡಿಪಿ; ಭಾರತದ ಅಭಿವೃದ್ಧಿಯ ದ್ಯೋತಕ

Continue Reading

ದೇಶ

ಮೂರ್ತಿಯಂತೆ 70 ಗಂಟೆ, ಬಿಲ್‌ ಗೇಟ್ಸ್‌ರಂತೆ 3 ದಿನ ಅಲ್ಲ; ಕೆಲಸಕ್ಕೆ ಶಶಿ ತರೂರ್‌ ಸೊಲ್ಯೂಷನ್ ಇಲ್ಲಿದೆ!

Shashi Tharoor: ದೇಶದ ಏಳಿಗೆ ದೃಷ್ಟಿಯಿಂದ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿದ್ದರು. ಇದರ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆದಿದ್ದವು.

VISTARANEWS.COM


on

Shashi Tharoor
Koo

ತಿರುವನಂತಪುರಂ: ದೇಶದ ಏಳಿಗೆಗಾಗಿ ಈಗಿನ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ಅವರು ಹೇಳಿದ್ದು ದೇಶಾದ್ಯಂತ ಚರ್ಚೆಯಾಗಿತ್ತು. ಪರ-ವಿರೋಧ ಚರ್ಚೆಗಳು ನಡೆದಿದ್ದವು. ಇದಾದ ಕೆಲವೇ ದಿನಗಳ ಬಳಿಕ, “ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಸಾಕು” ಎಂದು ಉದ್ಯಮಿ ಬಿಲ್‌ ಗೇಟ್ಸ್‌ (Bill Gates) ಹೇಳಿದ್ದರು. ಇದು ಕೂಡ ಚರ್ಚೆಗೆ ಅನುವು ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ, ವಾರದಲ್ಲಿ ಎಷ್ಟು ದಿನ ಕೆಲಸ ಮಾಡಬೇಕು ಎಂಬ ಪ್ರಶ್ನೆಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ (Shashi Tharoor) ಉತ್ತರ ಹುಡುಕಿದ್ದಾರೆ.

“ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಸಾಕು ಎಂದು ಈಗ ಬಿಲ್‌ ಗೇಟ್ಸ್‌ ಹೇಳಿದ್ದಾರೆ. ಇದರ ಬದಲಾಗಿ, ಬಿಲ್‌ ಗೇಟ್ಸ್‌ ಹಾಗೂ ನಾರಾಯಣಮೂರ್ತಿ ಅವರು ಕುಳಿತುಕೊಂಡು ಒಂದು ಒಪ್ಪಂದಕ್ಕೆ ಬರಬೇಕು. ಈಗ ನಾವೇನು ವಾರದಲ್ಲಿ ಐದು ದಿನ ಕೆಲಸ ಮಾಡುತ್ತಿದ್ದೇವೋ, ಅದೇ ಒಪ್ಪಂದಕ್ಕೆ ಇಬ್ಬರೂ ಬರಬೇಕು” ಎಂದು ಶಶಿ ತರೂರ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಮೂಲಕ ವಾರಕ್ಕೆ 70 ಗಂಟೆ ದುಡಿಯುವ ತಾಪತ್ರಯವೂ ಇಲ್ಲದ, ವಾರದಲ್ಲಿ ಮೂರೇ ದಿನ ಕೆಲಸ ಮಾಡುವ ಕಡಿಮೆ ಕೆಲಸವೂ ಅಲ್ಲದ, ಮಧ್ಯಮ ಮಾರ್ಗದ ಪರಿಹಾರವನ್ನು ಶಶಿ ತರೂರ್‌ ನೀಡಿದ್ದಾರೆ.

ನಾರಾಯಣ ಮೂರ್ತಿ ಹೇಳಿದ್ದೇನು?

ಇನ್ಫೋಸಿಸ್‌ನ ಮಾಜಿ ಸಿಎಫ್ಒ ಮೋಹನ್‌ದಾಸ್ ಪೈ ಅವರೊಂದಿಗಿನ ಮಾತುಕತೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು, “ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಯುವಕರು ಇದೇ ರೀತಿ ಮಾಡಿದ್ದರು” ಎಂದು ಹೇಳಿದ್ದರು.

“ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದ ಹೊರತು, ನಾವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡದ ಹೊರತು ನಾವು ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಇನ್ಫೋಸಿಸ್ ನಾರಾಯಣಮೂರ್ತಿ ತಿಳಿಸಿದ್ದರು.

ಇದನ್ನೂ ಓದಿ: 70 Hours Work Debate: 5 ದಿನಗಳ ವೀಕ್‌ ಸತ್ತಿದೆ: ನಾರಾಯಣ ಮೂರ್ತಿ ಪರ ಹರ್ಷ ಗೋಯೆಂಕಾ ಬ್ಯಾಟಿಂಗ್‌

ಬಿಲ್‌ ಗೇಟ್ಸ್‌ ಅಭಿಪ್ರಾಯ ಇದು

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಮನುಷ್ಯನ ಜಾಗವನ್ನು ಆಕ್ರಮಿಸಿಕೊಳ್ಳುವುದಿಲ್ಲ. ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ ಇದು ಕೆಲಸಗಾರರ ಹೊರೆ ಕಡಿಮೆ ಮಾಡುತ್ತದೆ. ಅಷ್ಟಕ್ಕೂ ಜೀವನದ ಉದ್ದೇಶ ಎಂದರೆ, ಬರೀ ಕೆಲಸ ಮಾಡುವುದಲ್ಲ. ಯಾವುದೇ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಸಾಕು” ಎಂದು ಬಿಲ್‌ ಗೇಟ್ಸ್‌ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
PM Narendra Modi phone call to workers, who rescued from collapsed tunnel
ದೇಶ1 hour ago

ಸುರಂಗದಿಂದ ರಕ್ಷಿಸಲಾದ ಕಾರ್ಮಿಕರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ!

mantralaya mutt
ಕರ್ನಾಟಕ2 hours ago

ಮಂತ್ರಾಲಯ ಮಠಕ್ಕೆ ಭಕ್ತರೊಬ್ಬರಿಂದ ಹೆಲಿಕಾಪ್ಟರ್‌ ಕೊಡುಗೆ

Uttarakhand CM announces rs 1 lakh rupees to trapped labourers Who rescued after 17 days
ದೇಶ2 hours ago

ಬದುಕುಳಿದು ಬಂದ ಕಾರ್ಮಿಕರಿಗೆ 1 ಲಕ್ಷ ಪರಿಹಾರ ಎಂದ ಉತ್ತರಾಖಂಡ ಸಿಎಂ ಧಾಮಿ

Maxwell
ಕ್ರಿಕೆಟ್3 hours ago

Ind vs Aus : ಮ್ಯಾಕ್ಸ್​ವೆಲ್​ ಸ್ಫೋಟಕ ಶತಕ; 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು

Siddaramaiah
ಕರ್ನಾಟಕ3 hours ago

ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಸಿದ್ದರಾಮಯ್ಯ ಧನ್ಯವಾದ

Uttarkashi Tunnel Rescue and Makeshift hospital
ದೇಶ3 hours ago

ಸುರಂಗದಿಂದ 41 ಕಾರ್ಮಿಕರ ರಕ್ಷಣೆ; ಮುಂದೇನಾಗುತ್ತದೆ ಎಂಬುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ

Top 10 news
ಕರ್ನಾಟಕ3 hours ago

VISTARA TOP 10 NEWS: ಸುರಂಗದಲ್ಲಿ ಸಿಲುಕಿದ್ದ ಎಲ್ಲ ಕಾರ್ಮಿಕರ ರಕ್ಷಣೆ, ಮಕ್ಕಳ ಮಾರಾಟ ಬೃಹತ್​ ಜಾಲ ಪತ್ತೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Uttarakhand Tunnel Collapse
EXPLAINER4 hours ago

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

Uttarkashi Tunnel rescue success makes us emotional says PM Narendra Modi
ದೇಶ4 hours ago

ಕಾರ್ಮಿಕರ ರಕ್ಷಣೆಯ ಯಶಸ್ಸು ನಮ್ಮನ್ನೆಲ್ಲ ಭಾವುಕರನ್ನಾಗಿಸಿದೆ ಎಂದ ಪ್ರಧಾನಿ ಮೋದಿ

Ruturaj Gaikwad
ಕ್ರಿಕೆಟ್4 hours ago

Ruturaj Gaikwad : ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ವಿಶೇಷ ಸಾಧನೆ ಮಾಡಿದ ಋತುರಾಜ್​

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ21 hours ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ1 day ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ1 day ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ1 day ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ1 day ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ2 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ2 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

BY Vijayendra and HD Kumarswamy
ಕರ್ನಾಟಕ2 days ago

BJP JDS Alliance: ಎಚ್‌ಡಿಕೆ-ವಿಜಯೇಂದ್ರ ಭೇಟಿ; 28ಕ್ಕೆ 28 ಸ್ಥಾನ ಗೆಲ್ಲುವ ಪಣ!

ಟ್ರೆಂಡಿಂಗ್‌