Site icon Vistara News

ಭಾರತದ ತಲಾ ಆದಾಯ 2021-22ರಲ್ಲಿ 91,481 ರೂ.ಗೆ ಏರಿಕೆ, ಕೋವಿಡ್‌ ಪೂರ್ವ ಮಟ್ಟಕ್ಕೆ ಹೋಲಿಸಿದರೆ ಕಡಿಮೆ

cash


ನವದೆಹಲಿ: ಭಾರತದ ತಲಾ ಆದಾಯ 2021-22ರಲ್ಲಿ 91,481 ರೂ.ಗೆ ಚೇತರಿಸಿದೆ. ಶೇ.7.5ರ ಹೆಚ್ಚಳ ದಾಖಲಿಸಿದ್ದರೂ, ಕೋವಿಡ್‌ ಪೂರ್ವ ಮಟ್ಟಕ್ಕೆ ಹೋಲಿಸಿದರೆ ಈಗಲೂ ಕಡಿಮೆಯಾಗಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಅಂಕಿ ಅಂಶಗಳು ತಿಳಿಸಿವೆ.

ತಲಾ ಆದಾಯ 2019-20ರಲ್ಲಿ 94,270 ರೂ. ಇತ್ತು. ಇದು ಕೋವಿಡ್‌ ಬಿಕ್ಕಟ್ಟಿನ ಬಳಿಕ 2020-21ರಲ್ಲಿ 85,110 ರೂ.ಗೆ ಕುಸಿದಿತ್ತು. ತೀರಾ ಇತ್ತೀಚಿನ ದರಗಳ ಆಧಾರದಲ್ಲಿ 2021-22ರ ಸಾಲಿನಲ್ಲಿ ತಲಾ ಆದಾಯ ಶೇ. 18 ಏರಿಕೆಯಾಗಿದ್ದು 1.5 ಲಕ್ಷ ರೂ.ಗಳಾಗಿದೆ. ಈಗಿನ ದರಗಳ ಲೆಕ್ಕದಲ್ಲಿ ತಲಾ ಆದಾಯ 2019-20ರಲ್ಲಿ 1.32 ಲಕ್ಷ ರೂ. ಹಾಗೂ 2020-21ರಲ್ಲಿ 1.27 ಲಕ್ಷ ರೂ. ಇತ್ತು.

ತಲಾ ಆದಾಯ ಚೇತರಿಕೆ ಹೀಗೆ

2019-2094,270 ರೂ.
2020-2185,110 ರೂ.
2021-2291,481

ವಿತ್ತೀಯ ಕೊರತೆ 2021-22ರಲ್ಲಿ ಜಿಡಿಪಿಯ ಶೇ.6.71 ಆಗಿದ್ದು, ಬಜೆಟ್‌ನ ಪರಿಷ್ಕೃತ ಅಂದಾಜಿನ ಶೇ.6.71 ಆಗಿದೆ. ಪರಿಷ್ಕೃತ ಅಂದಾಜಿಗಿಂತ (ಶೇ.6.9) ಕಡಿಮೆಯಾಗಿದೆ. ವಿತ್ತೀಯ ಕೊರತೆಯ ಮೌಲ್ಯ 15,86,537 ಕೋಟಿ ರೂ.ಗಳಾಗಿದೆ. 2021-22ರ ಕಂದಾಯ ಕೊರತೆ ಶೇ.4.37 ಆಗಿದೆ.

ತಲಾ ಆದಾಯ ಎಂದರೆ ದೇಶದ ಜಿಡಿಪಿ ಮೌಲ್ಯವನ್ನು ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಮೊತ್ತ. ಆರ್ಥಿಕ ಬೆಳವಣಿಗೆಯನ್ನು ಅಳೆಯಲು ಇದೂ ಒಂದು ಮಾನದಂಡ.

ಇದನ್ನೂ ಓದಿ:ಭಾರತದ ಜಿಡಿಪಿ 2021-22 ರಲ್ಲಿ 8.7%ಕ್ಕೆ ಏರಿಕೆ

Exit mobile version