ಕಾರ್ಪೊರೇಟ್ ವಲಯದ ಕಂಪನಿಗಳು ಬ್ಯಾಲೆನ್ಸ್ ಶೀಟ್ ( Personal balance sheet) ಅನ್ನು ಪ್ರಕಟಿಸುವುದು ಸಾಮಾನ್ಯ. ಅದೇ ರೀತಿ ನೀವು ಕೂಡ ನಿಮ್ಮ ವೈಯಕ್ತಿಕ ಹಣಕಾಸು ಬ್ಯಾಲೆನ್ಸ್ ಶೀಟ್ ಅನ್ನೂ ನಿಮ್ಮ ಮಟ್ಟಿಗೆ ಇಟ್ಟುಕೊಳ್ಳಬೇಕು. ಅದು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕಾದ್ದಲ್ಲವಾದರೂ, ನಿಮ್ಮದೇ ಹಣಕಾಸು (finance) ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆಯನ್ನು ಮೂಡಿಸುತ್ತದೆ. ಇದನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೋಡೋಣ.
ಸ್ಟೆಪ್-1 ಬ್ಯಾಲೆನ್ಸ್ ಶೀಟ್ ತೆರೆಯಲು ಪೂರ್ವಭಾವಿ ಸಿದ್ಧತೆ: ಮೊದಲಿಗೆ ನೀವು ನಿಮ್ಮೆಲ್ಲ ಆಸ್ತಿಗಳ ವಿವರಗಳನ್ನು ನೋಟ್ ಮಾಡಿಟ್ಟುಕೊಳ್ಳಬೇಕು. ಉದಾಹರಣೆಗೆ ಮನೆ, ಕಾರು, ಪೀಠೋಪಕರಣ, ಟೆಲಿವಿಶನ್ ಸೆಟ್, ರೆಫ್ರಿಜರೇಟರ್, ಬ್ಯಾಂಕ್ ಬ್ಯಾಲೆನ್ಸ್, ಷೇರು, ಮ್ಯೂಚುವಲ್ ಫಂಡ್ ಹೂಡಿಕೆ, ಜ್ಯುವೆಲ್ಲರಿ ಇತ್ಯಾದಿಗಳ ವಿವರಗಳನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಅವುಗಳನ್ನು ಖರೀದಿಸಲು ತಗಲಿದೆ ವೆಚ್ಚವನ್ನು ಬರೆದಿಟ್ಟುಕೊಳ್ಳಬೇಕು. ಇದನ್ನು ನಿಮ್ಮ ಬ್ಯಾಲೆನ್ಸ್ ಶೀಟ್‌ನ ಅಸೆಟ್ ಬದಿಯಲ್ಲಿ ಬರೆದಿಡಬೇಕು.
ಒಟ್ಟಾರೆ ಬಾಕಿ ಇರು ಸಾಲಗಳು, ಗೃಹ ಸಾಲ ತೆಗೆದುಕೊಂಡಿದ್ದರೆ ಅದರ ವಿವರಗಳನ್ನು ಲಾಯಬಿಲಿಟೀಸ್ ಬದಿಯಲ್ಲಿ ಬರೆಯಿರಿ. ಅಸೆಟ್ಸ್ ರೂಪದಲ್ಲಿ ನೀವು ಹೊಂದಿರುವ ಸಂಪತ್ತಿನಿಂದ, ನೀವು ಮರುಪಾವತಿಸಬೇಕಿರುವ ಸಾಲದ ವಿವರಗಳನ್ನು ಕಳೆದಾಗ ಸಿಗುವುದೇ ನಿಮ್ಮ ಬಂಡವಾಳ.
ಬ್ಯಾಲೆನ್ಸ್ ಶೀಟ್
ಲಾಯಬಿಲಿಟೀಸ್/ ಸಾಲಗಳು | ಆಸ್ತಿಗಳು |
ಬಂಡವಾಳ, ಆರಂಭಿಕ ಬ್ಯಾಲೆನ್ಸ್ : 72,000 ರೂ. ಸಾಲಗಳು: ಗೃಹ ಸಾಲ: 60,000 | ಮನೆ: 1,00,000 ಪೀಠೋಪಕರಣ: 8,000 ಹೂಡಿಕೆ: 12,000 ಜ್ಯುವೆಲ್ಲರಿ: 7000 ಬ್ಯಾಂಕ್ ಬ್ಯಾಲೆನ್ಸ್: 5,000 |
1,32,000 | 1,32,000 |
ಸ್ಟೆಪ್-2 : ರಿಸಿಪ್ಟ್‌ಗಳ ವಿವರ
ನಿರ್ದಿಷ್ಟ ಅವಧಿಯಲ್ಲಿ (ಉದಾಹರಣೆಗೆ ಒಂದು ವರ್ಷ) ಪಡೆದ ಸಾಲ ಮತ್ತು ಇತರ ರಿಸಿಪ್ಟ್ ವಿವರಗಳನ್ನು ಬರೆಯಿರಿ.
1. ಪಡೆದ ವೇತನ | 29,000 |
2. ಗಳಿಸಿದ ಬಡ್ಡಿ ಆದಾಯ | 7,500 |
3. ಪಡೆದ ಡಿವಿಡೆಂಡ್ | 8,500 |
4. ಕಾರು ಸಾಲ | 7,500 |
ಒಟ್ಟು ಮೊತ್ತ | 52,500 |
ಆದಾಯ ಮತ್ತು ಖರ್ಚುಗಳ ಅಕೌಂಟ್
ಖರ್ಚು | ಆದಾಯ |
ವೇತನ : 29,000 | |
ಬಡ್ಡಿ ದರ : 7500 | |
ಡಿವಿಡೆಂಡ್ : 8500 | |
45,000 |
ಮಾದರಿ ಪರ್ಸನಲ್ ಬ್ಯಾಲೆನ್ಸ್ ಶೀಟ್
ಲಾಯಬಿಲಿಟೀಸ್ | ಆಸ್ತಿಗಳು | ||||||
ಆರಂಭಿಕ ಬಂಡವಾಳ | +/- | ಕ್ಲೋಸಿಂಗ್ ಬ್ಯಾಲೆನ್ಸ್ | ಆರಂಭಿಕ ಬ್ಯಾಲೆನ್ಸ್ | +/- | ಕ್ಲೋಸಿಂಗ್ ಬ್ಯಾಲೆನ್ಸ್ | ||
ಬಂಡವಾಳ | 72,000 | ಮನೆ | 1,00,000 | ||||
ಸಾಲಗಳು | ಪೀಠೋಪಕರಣ | 8000 | |||||
ಗೃಹ ಸಾಲ | 60,000 | ಹೂಡಿಕೆ | 12,000 | ||||
ಕಾರು ಸಾಲ | ಜ್ಯುವೆಲ್ಲರಿ ಬ್ಯಾಂಕ್ ಬ್ಯಾಲೆನ್ಸ್ | 7000 5000 | |||||
1,32,000 | 7500 | 7500 | 1,32,000 |
ಸ್ಟೆಪ್ 3 : ಎಲ್ಲ ಖರ್ಚುಗಳನ್ನು ಬರೆಯಿರಿ
- 1. ಮಕ್ಕಳ ಶಾಲಾ ಶಿಕ್ಷಣದ ಶುಲ್ಕ : 2300
- 2. ಮನೆಯ ಖರ್ಚು ವೆಚ್ಚ: 14,000
- 3. ಇಂಧನಕ್ಕಾಗಿನ ವೆಚ್ಚ: 1500
- 4. ತೆರಿಗೆ ಪಾವತಿ: 3000
- 5. ಗೃಹ ಸಾಲದ ಬಡ್ಡಿ ಪಾವತಿ : 6800
- 6. ಹೂಡಿಕೆ: 4000
- 7. ಟಿವಿ ಸೆಟ್ ಖರೀದಿ: 1200
- 8. ಗೃಹಸಾಲದ ಕಂತು ಪಾವತಿ: 6000
- 9. ಹೊಸ ಕಾರು ಖರೀದಿ: 9000
- ಒಟ್ಟು ಖರ್ಚು ವೆಚ್ಚಗಳು: 47,800
ಸಂಪೂರ್ಣ ಬ್ಯಾಲೆನ್ಸ್ ಶೀಟ್
ಲಾಯಬಿಲಿಟೀಸ್/ ಸಾಲ ಇತ್ಯಾದಿ | ಆಸ್ತಿಗಳು | ||||||
ಆರಂಭಿಕ ಬಂಡವಾಳ | +/- | ಕ್ಲೋಸಿಂಗ್ ಬ್ಯಾಲೆನ್ಸ್ | ಆರಂಭಿಕ ಬಂಡವಾಳ | +/- | ಕ್ಲೋಸಿಂಗ್ ಬ್ಯಾಲೆನ್ಸ್ | ||
ಬಂಡವಾಳ | 72,000 | 17,400 | 89,400 | ಮನೆ | 1,00,000 | 1,00,000 | |
ಪೀಠೋಪಕರಣ | 8000 | ||||||
ಹೂಡಿಕೆ | 12000 | 4000 | |||||
ಜ್ಯುವೆಲ್ಲರಿ | 7000 | ||||||
ಗೃಹ ಸಾಲ | 60000 | 6000 | ಬ್ಯಾಂಕ್ ಬ್ಯಾಲೆನ್ಸ್ | 5000 | 4700 | ||
ಕಾರು ಸಾಲ ಕಂತು | 7500 | ಟೆಲಿವಿಶನ್ | 1200 | ||||
ಕಾರು | 9000 | ||||||
132000 | 150900 | 132000 | 150900 |