ನವ ದೆಹಲಿ: ಭಾರತವು ಚೀನಾದಿಂದ ಹೂಡಿಕೆದಾರರನ್ನು, ಉದ್ಯಮಿಗಳನ್ನು ಆಕರ್ಷಿಸಲು ಉತ್ಪಾದನೆ ಆಧರಿತ ಇನ್ಸೆಂಟಿವ್ (Production linked incentive- PLI scheme) ಯೋಜನೆಯನ್ನು ಚುರುಕುಗೊಳಿಸಿದೆ.
ಹೂಡಿಕೆದಾರರು ಈ ಯೋಜನೆಯಡಿಯಲ್ಲಿ 2022 ಮಾರ್ಚ್ ವೇಳೆಗೆ 2.34 ಲಕ್ಷ ಕೋಟಿ ರೂ. ಹೂಡಿಕೆಗೆ ಬದ್ಧರಾಗಿದ್ದಾರೆ. ಆಟೊಮೊಬೈಲ್, ಆಟೊ ಬಿಡಿ ಭಾಗಗಳು, ರಾಸಾಯನಿಕ ಸೆಲ್ ಬ್ಯಾಟರಿ, ಸ್ಪೆಷಾಲಿಟಿ ಸ್ಟೀಲ್, ಅಧಿಕ ದಕ್ಷತೆಯ ಸೌರಫಲಕ ಉತ್ಪಾದನೆ ವಲಯದಲ್ಲಿ ಹೂಡಿಕೆ ನಡೆಯುತ್ತಿದೆ.
ಕಳೆದ ವಾರ ವ್ಯಾಪಾರ ಮತ್ತು ವಾಣಿಜ್ಯ ಇಲಾಖೆ, ನೀತಿ ಆಯೋಗ ಮತ್ತು ಹಣಕಾಸು ಸಚಿವಾಲಯವು ಪಿಎಲ್‌ಐ ಯೋಜನೆಗಳ ಪರಾಮರ್ಶೆ ನಡೆಸಿವೆ. ನನೆಗುದಿಯಲ್ಲಿರುವ ಯೋಜನೆಗಳನ್ನು ಚುರುಕುಗೊಳಿಸಲು ನಿರ್ಧರಿಸಿವೆ.
ಏರ್ ಕಂಡೀಶನರ್‌ಗಳ ಉತ್ಪಾದನೆಗೆ ಪಿಎಲ್‌ಐ ಯೋಜನೆ ಸಕ್ಸಸ್ ಆಗಿತ್ತು. ಇದಾದ ಬಳಿಕ ರೆಫ್ರಿಜರೇಟರ್, ವಾಷಿಂಗ್ ಮೆಷೀನ್, ಎಲ್‌ಇಡಿ ಟಿವಿ ಮತ್ತು ಸಣ್ಣ ಅಪ್ಲೈಯನ್ಸ್ ಉತ್ಪಾದನೆಗೆ ಪಿಎಲ್‌ಐ ಅನ್ನು ಅನ್ವಯಿಸಬೇಕು ಎಂದು ಕನ್‌ಸ್ಯೂಮರ್ ಎಲೆಕ್ಟ್ರಾನಿಕ್ಸ್ & ಅಪ್ಲೈಯನ್ಸ್ ಉತ್ಪಾದಕರ ಅಸೋಸಿಯೇಶನ್ ಒತ್ತಾಯಿಸಿದೆ. 2021ರಿಂದ ಏರ್ ಕಂಡೀಶನರ್ ಮತ್ತು ಎಲ್ ಇಡಿ ಲೈಟ್‌ಗಳ ಬಿಡಿಭಾಗಗಳ ಉತ್ಪಾದನೆಗೆ ಪಿಎಲ್‌ಐ ಸ್ಕೀಮ್ ಜಾರಿಗೊಳಿಸಲಾಗಿದೆ.
ಕೇಂದ್ರ ಸರ್ಕಾರ ಕಂಟೈನರ್‌ಗಳ ಉತ್ಪಾದನೆಗೆ ಪಿಎಲ್‌ಐ ಜಾರಿಗೊಳಿಸಲು ಚಿಂತನೆ ನಡೆಸಿದೆ. ಈಗ ಭಾರಿ ಪ್ರಮಾಣದಲ್ಲಿ ಕಂಟೈನರ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.