Site icon Vistara News

PPF Investment : ಪಿಪಿಎಫ್ ಮೊತ್ತದ ಆಧಾರದಲ್ಲಿ ಸಾಲ ಪಡೆಯುವುದು ಹೇಗೆ?

cash

ಪಿಪಿಎಫ್‌ನ ಪೂರ್ತಿ ಹೆಸರು ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (Public Provident Fund). ಸಣ್ಣ ಉಳಿತಾಯ ಯೋಜನೆಗಳ ಸಾಲಿನಲ್ಲಿ ಇದು ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಇದು ಹಲವಾರು ಹೂಡಿಕೆದಾರ ಸ್ನೇಹಿ ಫೀಚರ್‌ಗಳನ್ನು ಒಳಗೊಂಡಿದೆ. ಹಾಗಾದರೆ ಇದರ ಬಗ್ಗೆ ತಿಳಿದುಕೊಳ್ಳೋಣ.

ಪಿಪಿಎಫ್‌ ಎನ್ನುವುದು ಸರಳವಾಗಿ ಹೇಳುವುದಿದ್ದರೆ ದೀರ್ಘಕಾಲೀನ ಹೂಡಿಕೆಯ ಯೋಜನೆಯಾಗಿದೆ. ಲಾಂಗ್‌ ಟರ್ಮಿಗೆ ಸ್ಥಿರವಾದ ಸಂಪತ್ತು ಸೃಷ್ಟಿಸಿಕೊಳ್ಳಲು, ಒಂದು ದೊಡ್ಡ ಇಡಿಗಂಟನ್ನು ಮಾಡಿಕೊಳ್ಳಲು ಇದು ಉಪಯುಕ್ತ. ಅಸಲು ಮೊತ್ತವನ್ನು ಕಾಪಿಟ್ಟುಕೊಂಡು ಸೇಫ್‌ ಆಗಿ ಹೂಡಿಕೆ ಮಾಡಲು ಸಹಕಾರಿ.

ಕಡಿಮೆ ರಿಸ್ಕ್‌ ಬಯಸುವ ಸಣ್ಣ ಹೂಡಿಕೆದಾರರಿಗೆ ಪಿಪಿಎಫ್‌ ಸೂಕ್ತ. ಸರ್ಕಾರವೇ ಇದನ್ನು ನಿರ್ವಹಿಸುತ್ತದೆ. ಖಾತರಿಯ ಆದಾಯ ನೀಡುತ್ತದೆ. ಇದು ಮಾರುಕಟ್ಟೆಗೆ ಲಿಂಕ್‌ ಆಗಿರುವುದಿಲ್ಲ. ತಮ್ಮ ಹೂಡಿಕೆಯನ್ನು ವೈವಿಧ್ಯಮಯಗೊಳಿಸಲು ಬಯಸುವವರು ಪಿಪಿಎಫ್‌ ಅಕೌಂಟ್‌ ತೆರೆಯಬಹುದು.

ಪಿಪಿಎಫ್‌ ಖಾತೆಯ ಮುಖ್ಯಾಂಶಗಳು:

ಪಿಪಿಎಫ್‌ ಖಾತೆಯಲ್ಲಿನ ಹೂಡಿಕೆಗೆ ಸಿಗುವ ಬಡ್ಡಿ ದರ : 7.1% ವಾರ್ಷಿಕ.

ತೆರಿಗೆ ಬೆನಿಫಿಟ್:‌ ಸೆಕ್ಷನ್‌ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ಟ್ಯಾಕ್ಸ್‌ ಬೆನಿಫಿಟ್‌

ರಿಸ್ಕ್‌ ಪ್ರೊಫೈಲ್:‌ ಖಾತರಿಯ ರಿಸ್ಕ್-ಫ್ರೀ ಆದಾಯ.

ಕನಿಷ್ಠ ಹೂಡಿಕೆಯ ಮೊತ್ತ: 500 ರೂ.

ಗರಿಷ್ಠ ಹೂಡಿಕೆ (ವಾರ್ಷಿಕ): 1.5 ಲಕ್ಷ ರೂ.

ಅವಧಿ: 15 ವರ್ಷಗಳು

ಒಂದು ಪಿಪಿಎಫ್‌ ಅಕೌಂಟ್‌ಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ. ಅದಕ್ಕೂ ಮುನ್ನ ಫಂಡ್‌ ಅನ್ನು ಪೂರ್ಣಪ್ರಮಾಣದಲ್ಲಿ ಹಿಂತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಲಾಕ್‌ ಇನ್‌ ಅವಧಿಯನ್ನು ಮತ್ತೆ 5 ವರ್ಷ ವಿಸ್ತರಿಸಬಹುದು. ವರ್ಷಕ್ಕೆ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಲಂಪ್ಸಮ್‌ ಅಥವಾ ಕಂತುಗಳಲ್ಲಿ ಕಟ್ಟಬಹುದು. ಅಕೌಂಟ್‌ ಸಕ್ರಿಯವಾಗಲು ಪ್ರತಿ ವರ್ಷ ಕಟ್ಟಬೇಕು.

ಪಿಪಿಎಫ್ ಹೂಡಿಕೆಯ ಮೇಲೆ ಸಾಲ: ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್‌ ಮೇಲೆ ಸಾಲ ಪಡೆಯಬಹುದು. ಹೀಗಿದ್ದರೂ ಖಾತೆಯ 3-6ನೇ ವರ್ಷದಲ್ಲಿ ಮಾತ್ರ ಸಾಲ ಪಡೆಯಬಹುದು. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು ಮಾತ್ರ. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೇಮ್‌ ಮಾಡಿಕೊಳ್ಳಬಹುದು.‌

ಇದನ್ನೂ ಓದಿ: Post office savings : ಅಂಚೆ ಇಲಾಖೆಯ ಉಳಿತಾಯ ಖಾತೆಗಳಲ್ಲಿ 3 ಬದಲಾವಣೆ ಯಾವುದು?

ಭಾರತೀಯ ನಾಗರಿಕರು ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. ಹಾಗೂ 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ.

ಬಡ್ಡಿಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈಗ 7.1% ಬಡ್ಡಿ ಇದೆ. ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಮೂಲ ಮೊತ್ತಕ್ಕೆ ಟ್ಯಾಕ್ಸ್‌ ಬೆನಿಫಿಟ್‌ ಪಡೆಯಬಹುದು.

Exit mobile version