ನವದೆಹಲಿ: ಸರ್ಕಾರ ೨೦೨೨-೨೩ರ ಜುಲೈ-ಸೆಪ್ಟೆಂಬರ್ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಿದೆ.
ಹಣಕಾಸು ಸಚಿವಾಲಯ ಈ ಬಗ್ಗೆ ಗುರುವಾರ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಹೂಡಿಕೆದಾರರು ಸಾರ್ವಜನಿಕ ಭವಿಷ್ಯನಿಧಿ, (ಪಿಪಿಎಫ್), ಸುಕನ್ಯಾ ಸಮೃದ್ಧಿ, ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ವಿವರ ಇಂತಿದೆ.
- ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್): 7.10%
- ಹಿರಿಯ ನಾಗರಿಕರ ಉಳಿತಾಯ ಯೋಜನೆ: ೭.೪೦%
- ಅಂಚೆ ಇಲಾಖೆ ಉಳಿತಾಯ ಠೇವಣಿ: ೫.೫-೬.೭%
- ಕಿಸಾನ್ ವಿಕಾಸ ಪತ್ರ: ೬.೯%
- ಸುಕನ್ಯಾ ಸಮೃದ್ಧಿ: ೭.೬%
ಕೆಲವು ಬ್ಯಾಂಕ್‌ಗೂ ಎಫ್‌ಡಿ ಬಡ್ಡಿ ದರವನ್ನು ಇತ್ತೀಚೆಗೆ ತುಸು ಏರಿಸಿದ್ದರೂ, ಅವುಗಳಿಗೆ ಹೋಲಿಸಿದರೆ ಈಗಲೂ ಸಣ್ಣ ಉಳಿತಾಯ ಯೋಜನೆಗಳಿಗೆ ಹೆಚ್ಚಿನ ಬಡ್ಡಿ ದರ ಇದೆ. ಉಳಿತಾಯ ಖಾತೆಗೆ ಎಸ್‌ಬಿಐ ೨.೭೦% ಬಡ್ಡಿ ನೀಡಿದರೆ, ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ೪% ಬಡ್ಡಿ ಆದಾಯ ಸಿಗುತ್ತದೆ.
ಬ್ಯಾಂಕ್‌ಗಳಲ್ಲಿ ಎಫ್‌ಡಿ ದರಗಳು ಇತ್ತೀಚಿಗೆ ತುಸು ಏರಿಕೆ ದಾಖಲಿಸಿವೆ. ಇದೇ ರೀತಿ ಸಣ್ಣ ಉಳಿತಾಯದ ದರಗಳೂ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ. ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ.