Site icon Vistara News

ವಿಸ್ತಾರ Money Guide | ಅಕ್ಟೋಬರ್‌ನಲ್ಲಿ ಪಿಪಿಎಫ್‌, ಸುಕನ್ಯಾ ಸಮೃದ್ಧಿ ಬಡ್ಡಿ ದರ ಏರಿಕೆ ನಿರೀಕ್ಷೆ

small savings

ಸರ್ಕಾರದ ಬಾಂಡ್‌ಗಳ (ಸಾಲಪತ್ರ) ಉತ್ಪತ್ತಿಯಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)‌, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಮೊದಲಾದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಅಕ್ಟೋಬರ್‌ನಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ. (ವಿಸ್ತಾರ Money Guide) ಈ ತಿಂಗಳಿನ ಅಂತ್ಯಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪರಿಷ್ಕರಣೆಯಾಗಲಿದೆ.

ಪಿಪಿಎಫ್‌, ಸುಕನ್ಯಾ ಸಮೃದ್ಧಿ ಬಡ್ಡಿ ದರ ಏಕೆ ಏರಿಕೆಯಾಗಲಿದೆ?

ಸರಕಾರಿ ಬಾಂಡ್‌ಗಳ (G-sec- ಸಾಲಪತ್ರ) 10 ವರ್ಷ ಅವಧಿಯ ಆದಾಯ 7% ಇದೆ. 2022ರ ಜೂನ್-‌ ಆಗಸ್ಟ್‌ ಅವಧಿಯಲ್ಲಿ 7.31% ಇತ್ತು. ಹಣಕಾಸು ಸಚಿವಾಲಯದ ಸೂತ್ರಗಳ ಪ್ರಕಾರ ಪಿಪಿಎಫ್‌ ಬಡ್ಡಿ ದರ ಮುಂಬರುವ ತ್ರೈಮಾಸಿಕಲ್ಲಿ, (ಅಕ್ಟೋಬರ್-ಡಿಸೆಂಬರ್) 7.56%ಕ್ಕೆ ಏರಿಕೆಯಾಗಬೇಕು.‌ ಪ್ರಸ್ತುತ ಪಿಪಿಎಫ್‌ 7.1% ಬಡ್ಡಿ ದರವನ್ನು ಹೊಂದಿದೆ. ಇದೇ ರೀತಿ ಸುಕನ್ಯಾ ಸಮೃದ್ಧಿ ಯೋಜನೆ ಈಗಿನ 7.6%ರಿಂದ 8.3%ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಸಾಮಾನ್ಯವಾಗಿ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸೂತ್ರದ ಅನ್ವಯ ತಕ್ಷಣ ಬದಲಿಸುವುದಿಲ್ಲ. ಶ್ಯಾಮಲಾ ಗೋಪಿನಾಥ್‌ ಸಮಿತಿಯು ಈ ಕುರಿತ ಸೂತ್ರವನ್ನು ರೂಪಿಸಿದೆ.

ಸೆಪ್ಟೆಂಬರ್‌ 30ಕ್ಕೆ ಬಡ್ಡಿ ದರ ಪ್ರಕಟ ನಿರೀಕ್ಷೆ: 2020ರ ಏಪ್ರಿಲ್-ಜೂನ್‌ ಬಳಿಕ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಯಥಾಸ್ಥಿತಿಯಲ್ಲಿ ಇವೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಸಣ್ಣ ಉಳಿತಾಯ ಬಡ್ಡಿಗಳನ್ನು ಪರಿಷ್ಕರಿಸುತ್ತದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಪರಿಷ್ಕರಣೆ ಸೆಪ್ಟೆಂಬರ್‌ 30ಕ್ಕೆ ನಡೆಯಬೇಕಾಗಿದೆ. ಅಕ್ಟೋಬರ್-ಡಿಸೆಂಬರ್‌ ಅವಧಿಗೆ ಪರಿಷ್ಕೃತ ದರಗಳು ಅನ್ವಯಿಸಲಿದೆ.

ಪ್ರಸ್ತುತ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಇಂತಿದೆ:

ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಬ್ಯಾಂಕ್‌ ಠೇವಣಿಗಳ ಬಡ್ಡಿ ದರ ಇಳಿಕೆಯಾಗಿದ್ದರೂ, ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪರಿಷ್ಕರಣೆ ಮಾಡಿರಲಿಲ್ಲ.

Exit mobile version