ಇಸ್ಲಾಮಾಬಾದ್: ಸ್ನಿಕ್ಕರ್ಸ್ ಬ್ರಾಂಡ್ ಚಾಕೊಲೇಟ್ ಹಾಗೂ ಚ್ಯೂಯಿಂಗ್ ಗಮ್ ಉತ್ಪಾದಕ, ಮಾರ್ಸ್ ರಿಗ್ಲೆ ಕಂಪನಿಯು (Mars Wrigley) ಭಾರತದಲ್ಲಿ ತನ್ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ. ವೇಗವಾಗಿ ಬೆಳೆಯುತ್ತಿರುವ ಡಾರ್ಕ್ ಚಾಕೊಲೇಟ್ ವಲಯವನ್ನು ಪ್ರವೇಶಿಸಿದೆ. ಕಂಪನಿಯು ಗ್ಯಾಲಕ್ಸಿ ಫ್ಯೂಷನ್ಸ್ ಬ್ರಾಂಡ್ ಅಡಿಯಲ್ಲಿ ಸ್ಥಳೀಯ ಉತ್ಪಾದನೆಯನ್ನು ವೃದ್ಧಿಸಲಿದೆ.
ಭಾರತದ ಮಾರುಕಟ್ಟೆಗೆ ವಿಶೇಷವಾದ ಸ್ನಿಕ್ಕರ್ಸ್ ಬೆರ್ರಿ ವಿಪ್ ಅನ್ನು ವ್ಯಾಪಕವಾಗಿ ಮಾರಾಟ ಮಾಡಲು ಮಾರ್ಸ್ ಉದ್ದೇಶಿಸಿದೆ. ಇದು ಸ್ಟ್ರಾಬೆರ್ರಿ ಫ್ಲೇವರ್ ಅನ್ನು ಒಳಗೊಂಡಿದೆ.
ಮಾರ್ಸ್ ಕಂಪನಿಗೆ ಭಾರತ ಬಹು ಮುಖ್ಯವಾದ ಮಾರುಕಟ್ಟೆಯಾಗಿದ್ದು, ವಾರ್ಷಿಕ ಎರಡಂಕಿಯ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. ಈಗಾಗಲೇ ಕಂಪನಿಯು ದೇಶದಲ್ಲಿ 6,000 ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. 10 ರೂ.ಗಳಿಂದ 20 ರೂ. ದರದ ಚಾಕೊಲೇಟ್‌ಗಳು ಹೆಚ್ಚು ಮಾರಾಟವಾಗುತ್ತಿದ್ದು, ಈ ಶ್ರೇಣಿಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆ ಮಾಡಲು ಮುಂದಾಗಿದೆ.