Site icon Vistara News

Good News | ಹಬ್ಬದ ವೇಳೆಗೆ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಎಸಿಗಳ ದರದಲ್ಲಿ ಇಳಿಕೆ ನಿರೀಕ್ಷೆ

fridge

ನವ ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಕಚ್ಚಾ ವಸ್ತುಗಳ ದರಗಳು ಇಳಿಯುತ್ತಿವೆ. ಇದರಿಂದಾಗಿ ಫ್ರಿಡ್ಜ್‌, ವಾಷಿಂಗ್‌ಮೆಷಿನ್, ಮೈಕ್ರೊವೇವ್‌, ಏರ್‌ ಕಂಡೀಷನರ್‌ಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ.

ಇತ್ತೀಚೆಗೆ ತಾಮ್ರದ ದರದಲ್ಲಿ ೨೧ % ಹಾಗೂ ಉಕ್ಕಿನ ದರದಲ್ಲಿ ೧೯ % ಇಳಿಕೆಯಾಗಿದೆ. ಅಲ್ಯುಮಿನಿಯಂ ದರದಲ್ಲಿ ೩೫ % ತಗ್ಗಿದೆ. ಹೀಗಾಗಿ ಈ ಹಿಂದೆ ಉತ್ಪಾದನಾ ವೆಚ್ಚ ಏರಿದ್ದರಿಂದ ದರಗಳನ್ನು ಹೆಚ್ಚಿಸಿದ್ದ ಗೃಹೋಪಕರಣಗಳ ಉತ್ಪಾದಕ ಕಂಪನಿಗಳು ಇದೀಗ ದರ ಇಳಿಕೆ ಮಾಡುವ ಸಾಧ್ಯತೆ ಇದೆ.

ರಷ್ಯಾ-ಉಕ್ರೇನ್‌ ಸಂಘರ್ಷದ ಪರಿಣಾಮ ಲೋಹ, ರಾಸಾಯನಿಕ ಸೇರಿದಂತೆ ಕೈಗಾರಿಕಾ ಕಚ್ಚಾ ವಸ್ತುಗಳ ದರಗಳು ಹಠಾತ್‌ ಜಿಗಿದಿತ್ತು. ಐಸಿಐಸಿಐ ಸೆಕ್ಯುರಿಟೀಸ್‌ ವರದಿಯ ಪ್ರಕಾರ ದರಗಳು ಇಳಿಯಲಿವೆ.

ಹಣದುಬ್ಬರ ಪರಿಣಾಮ ಭಾರತದಲ್ಲೂ ಕಳೆದ ಎರಡು ವರ್ಷಗಳಲ್ಲಿ ಗೃಹೋಪಯೋಗಿ ವಸ್ತುಗಳ ದರದಲ್ಲಿ ೨೦% ಹೆಚ್ಚಳವಾಗಿತ್ತು. ಕಚ್ಚಾವಸ್ತುಗಳ ಬೆಲೆ ಇಳಿದಿರುವುದರಿಂದ ಅದರ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಆದ್ದರಿಂದ ಈ ವರ್ಷ ಹಬ್ಬಗಳ ಸೀಸನ್‌ನಲ್ಲಿ ದರ ಕಡಿತ ನಿರೀಕ್ಷಿಸಬಹುದು.

Exit mobile version