Site icon Vistara News

Privatisation of banks | ಹಂತಗಳಲ್ಲಿ ಬ್ಯಾಂಕ್‌ಗಳ ಖಾಸಗೀಕರಣ ಸೂಕ್ತ: ಆರ್‌ಬಿಐ ವರದಿ

rbi office

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಬ್ಯಾಂಕ್‌ಗಳ ಖಾಸಗೀಕರಣಕ್ಕೆ (Privatisation of banks) ಸಂಬಂಧಿಸಿದಂತೆ ತನ್ನ ಆಗಸ್ಟ್‌ ೨೦೨೨ರ ಬುಲೆಟಿನ್‌ನಲ್ಲಿ ಪ್ರಕಟವಾಗಿರುವ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡಿದ್ದು, ವರದಿಯು ಆರ್‌ಬಿಐನ ನಿಲುವನ್ನು ಬಿಂಬಿಸುವುದಿಲ್ಲ ಎಂದಿದೆ. ಲೇಖನವು ಲೇಖಕರ ದೃಷ್ಟಿಕೋನವನ್ನು ಒಳಗೊಂಡಿದೆ.

ಆರ್‌ಬಿಐ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಆದರೆ ಬುಲೆಟಿನ್‌ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಲೇಖಕರ ಅಭಿಪ್ರಾಯ ಇದೆಯೇ ಹೊರತು ಆರ್‌ಬಿಐಗೂ ಅದಕ್ಕೂ ಸಂಬಂಧ ಇಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಲೇಖನದಲ್ಲಿ ” ಸರ್ಕಾರವು ಹಂತಗಳಲ್ಲಿ ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣ ಮಾಡುವುದರಿಂದ, ಸರ್ಕಾರದ ಹಣಕಾಸು ಸೇರ್ಪಡೆಯ ಸಾಮಾಜಿಕ ಉದ್ದೇಶಕ್ಕೆ ಭಂಗವಾಗುವುದಿಲ್ಲʼʼ ಎಂದು ವಿವರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐ ಬುಲೆಟಿನ್‌ನಲ್ಲಿ ಆರ್‌ಬಿಐನ ಬ್ಯಾಂಕಿಂಗ್‌ ಸಂಶೋಧನಾ ತಂಡದ ಸ್ನೇಹಲ್‌ ಹರ್ವಾಡ್ಕರ್‌, ಸೊನಾಲಿ ಗೋಯೆಲ್‌, ರಿಷಿಕಾ ಬನ್ಸಾಲ್‌ ಅವರು ಸಾರ್ವಜನಿಕ ಬ್ಯಾಂಕ್‌ಗಳ ಖಾಸಗೀಕರಣದ ಬಗ್ಗೆ ಲೇಖನ ಬರೆದಿದ್ದರು. ( Privatisation of public sector banks: an alternative perspective)

ಇತ್ತೀಚಿನ ಸಾರ್ವಜನಿಕ ಬ್ಯಾಂಕ್‌ಗಳ ವಿಲೀನದಿಂದ ಪ್ರಬಲ ಮತ್ತು ಸ್ಪರ್ಧಾತ್ಮಕ ಬ್ಯಾಂಕ್‌ಗಳು ಉದಯವಾಗಿವೆ ಎಂದು ಲೇಖನದಲ್ಲಿ ವಿವರಿಸಲಾಗಿತ್ತು. ” ಈ ಸಾರ್ವಜನಿಕ ಬ್ಯಾಂಕ್‌ಗಳ ಬಿಗ್‌ ಬ್ಯಾಂಗ್‌ ಖಾಸಗೀಕರಣ ಒಳಿತಿಗಿಂತ ಹೆಚ್ಚು ಕೆಡುಕನ್ನು ಮಾಡಬಹುದು. ಸರ್ಕಾರ ಈಗಾಗಲೇ ಎರಡು ಬ್ಯಾಂಕ್‌ಗಳ ಖಾಸಗೀಕರಣದ ಉದ್ದೇಶವನ್ನು ಹೊಂದಿದೆ. ಇಂಥ ಹಂತಗಳಲ್ಲಿ ಖಾಸಗೀಕರಣ ಪ್ರಕ್ರಿಯೆಯಿಂದ ಹಣಕಾಸು ಸೇರ್ಪಡೆಯ ಸಾಮಾಜಿಕ ಉದ್ದೇಶಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬಹುದುʼʼ ಎಂದು ಲೇಖನ ತಿಳಿಸಿರುವುದಾಗಿ ಆರ್‌ಬಿಐ ಸ್ಪಷ್ಟಪಡಿಸಿದೆ.

Exit mobile version