Site icon Vistara News

ವಿಸ್ತಾರ Money Guide | ಲಾಭದಾಯಕ ಟಾಪ್- 5 ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳಿವು!

mutual fund

ಶರತ್‌ ಎಂ.ಎಸ್‌. ಎಕ್ಸಿಕ್ಯುಟಿವ್‌ ಎಡಿಟರ್‌, ವಿಸ್ತಾರ ನ್ಯೂಸ್
ಮ್ಯೂಚಯಲ್‌ ಫಂಡ್‌ಗಳ ಬಗ್ಗೆ ಪ್ರಾಥಮಿಕ ಮಾಹಿತಿ ನಮಗೆಲ್ಲ ತಿಳಿದಿದೆ. ಅವುಗಳ ಬಗ್ಗೆ ಮತ್ತಷ್ಟು ವಿಸ್ತಾರವಾದ ಹಾಗೂ ಅತ್ಯಂತ ಉಪಯುಕ್ತವಾದ ವಿವರಗಳನ್ನು ತಿಳಿದುಕೊಳ್ಳೋಣ! ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಹೆಚ್ಚು ಲಾಭ ಕೊಡುವ ಟಾಪ್‌ 5 ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳು ಯಾವುದು? ಅವುಗಳಲ್ಲಿ ಎಷ್ಟು ಆದಾಯ ಪಡೆಯಬಹುದು? (ವಿಸ್ತಾರ Money Guide) ಇಲ್ಲಿದೆ ಸಮಗ್ರ ವಿವರ!

ಮ್ಯೂಚುಯಲ್‌ ಫಂಡ್‌ ಮತ್ತು ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಎಂದರೇನು ಎಂದು ನೀವು ಕೇಳಬಹುದು. ಮ್ಯೂಚುಯಲ್‌ ಎಂದರೆ ಪರಸ್ಪರ ಫಂಡ್‌ ಎಂದರೆ ನಿಧಿ. ಪರಸ್ಪರರು ಸೇರಿ ಒಂದು ನಿಧಿಯನ್ನು ಸ್ಥಾಪಿಸಿ, ಅದರ ನಿರ್ವಹಣೆಗೆ ವೃತ್ತಿಪರ ವ್ಯವಸ್ಥಾಪಕರನ್ನು ನೇಮಿಸುವುದೇ ಮ್ಯೂಚುಯಲ್‌ ಫಂಡ್.‌ ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಸಾಧ್ಯವಾಗದಿದ್ದವರಿಗೆ, ನುರಿತ ವ್ಯವಸ್ಥಾಪಕರ ನಿರ್ವಹಣೆಯಲ್ಲಿ ಪರೋಕ್ಷವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮ್ಯೂಚುಯಲ್‌ ಫಂಡ್‌ ಬೇಕಾಗುತ್ತದೆ. ಇದರಲ್ಲಿ ಪ್ರತಿ ತಿಂಗಳು‌ ಕನಿಷ್ಠ 500 ರೂ. 1000 ರೂ. ಅಥವಾ ಸಾಧ್ಯವಾದಾಗ ಹಣವನ್ನು ಹೂಡಿಕೆ ಮಾಡಲೂ ಅವಕಾಶ ಇದೆ. ಹಣಕಾಸು ತಜ್ಞರು ತಮ್ಮ ವೃತ್ತಿಪರ ನಿರ್ವಹಣೆಯ ಮೂಲಕ ಆದಾಯವನ್ನು ಹೆಚ್ಚಿಸುತ್ತಾರೆ.

ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಎಂದರೇನು?

ಷೇರು ಮಾರುಕಟ್ಟೆಯಲ್ಲಿ 7,500 ಕ್ಕೂ ಹೆಚ್ಚು ಕಂಪನಿಗಳಿವೆ. ಇದರಲ್ಲಿ ಯಾವುದು ಒಳ್ಳೆಯದು, ಯಾವುದು ಒಳ್ಳೆಯ ಕಂಪನಿ ಅಲ್ಲ, ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ತಿಳಿಯುವುದು ಅವಶ್ಯಕ. ಈ ನಿಟ್ಟಿನಲ್ಲಿ ಒಳ್ಳೆಯ ಈಕ್ವಿಟಿ ಮ್ಯೂಚುವಲ್‌ ಫಂಡ್ ‌ಗಳಲ್ಲಿ ಹೂಡಿಕೆ ಮಾಡುವುದು ಮುಖ್ಯ. ನಾವು ಈಗ ಟಾಪ್‌ 5 ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಕಂಪನಿಗಳ ಬಗ್ಗೆ ತಿಳಿದುಕೊಳ್ಳೋಣ.

ಲಾರ್ಜ್‌ ಕ್ಯಾಪ್‌ ಎಂದರೆ ಬೃಹತ್‌ ಕಂಪನಿಗಳು. ಭಾರತದ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿರುವ ಟಾಪ್‌ 100 ಕಂಪನಿಗಳಲ್ಲಿ ಮಾಡುವ ಮ್ಯೂಚುಯಲ್‌ ಫಂಡ್ ಹೂಡಿಕೆಯನ್ನು ಲಾರ್ಜ್‌ ಕ್ಯಾಪ್‌ ಅಥವಾ ಬ್ಲೂ ಚಿಪ್‌ ಕಂಪನಿಗಳಲ್ಲಿನ ಹೂಡಿಕೆ ಎನ್ನುತ್ತೇವೆ.‌ ಇದನ್ನು ಲಾರ್ಜ್‌ ಕ್ಯಾಪ್‌ ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಎಂದು ಕರೆಯುತ್ತಾರೆ. ಈಗ ನಾವು ಲಾರ್ಜ್‌ ಕ್ಯಾಪ್‌ ಕೆಟಗರಿಯಲ್ಲಿ ಟಾಪ್‌ 5 ಯಾವುದು ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ಜನರು ಯಾವ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎಂದು ಕೇಳುತ್ತಾರೆ. ಯಾರದ್ದೋ ಸಲಹೆಗೆ ಯಾವುದೋ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಯಾವುದು ಬೆಸ್ಟ್‌ ಎಂದರೆ ಅದಕ್ಕೆ ಹಲವು ಆಯಾಮಗಳು ಇವೆ. ಇದನ್ನೆಲ್ಲ ಪರಿಗಣಿಸಿ ಇಲ್ಲಿ ಟಾಪ್‌ 5 ಆಯ್ಕೆ ಮಾಡಲಾಗಿದೆ.

ಟಾಪ್-‌ ೫ ಲಾರ್ಜ್‌ ಕ್ಯಾಪ್‌ ಈಕ್ವಿಟಿ ಫಂಡ್‌ಗಳು

1. ಕೆನರಾ ರೊಬೆಕೋ ಬ್ಲೂ ಚಿಪ್‌ ಈಕ್ವಿಟಿ ಫಂಡ್‌

2. ಕೋಟಕ್‌ ಬ್ಲೂ ಚಿಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌

3. ಮಿರಾಯ್‌ ಅಸೆಟ್‌ ಲಾರ್ಜ್‌ ಕ್ಯಾಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌

4. ಐಸಿಐಸಿಐ ಪ್ರೂರೆನ್ಸಿಯಲ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಗ್ರೋಥ್‌

5. ಎಕ್ಸಿಸ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಪ್ಲಾನ್‌ ಗ್ರೋಥ್

ಕೆನರಾ ರೊಬೆಕೋ ಬ್ಲೂ ಚಿಪ್‌ ಈಕ್ವಿಟಿ ಫಂಡ್‌ -CANARA ROBECO BLUCHIP EQUITY FUND : ಈ ಈಕ್ವಿಟಿ ಫಂಡ್‌ನಲ್ಲಿ ಕಳೆದ 5 ವರ್ಷಗಳಲ್ಲಿ 18.04% ಲಾಭ ಹೂಡಿಕೆದಾರರಿಗೆ ಲಭಿಸಿದೆ. ಇದರಲ್ಲಿ ಎಕ್ಸ್‌ಪೆನ್ಸ್‌ ಅನುಪಾತ ಅಂದರೆ ಕಮೀಶನ್‌ ಕೇವಲ 0.39% ಮಾತ್ರ. ಲಾರ್ಜ್‌ ಕ್ಯಾಪ್‌ ಕೆಟಗರಿಯಲ್ಲಿಯೇ ಇದು ಕಡಿಮೆ. ಕನಿಷ್ಠ 1000 ರೂ. ಹಾಗೂ 5000 ಲಂಪ್ಸಮ್‌ ಹೂಡಿಕೆ ಮಾಡಬಹುದು. ಈ ಫಂಡ್‌ನಲ್ಲಿ ಪ್ರತಿ ತಿಂಗಳು 10,000 ರೂ.ಗಳನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಒಟ್ಟು 6 ಲಕ್ಷ ರೂ. ಹೂಡಿಕೆ ಮಾಡುತ್ತೀರಿ. ನಿಮಗೆ ಸಿಗಬಹುದಾದ ಲಾಭ 3.41 ಲಕ್ಷ ರೂ. ಲಾಭ ಸಿಗುತ್ತದೆ. ಅಂದರೆ 18.04% ಲಾಭವನ್ನು ನಿರೀಕ್ಷಿಸಬಹುದು. ಆದರೆ ಮಾರುಕಟ್ಟೆಯ ರಿಸ್ಕ್‌ ಇದರಲ್ಲಿ ಇರುತ್ತದೆ. ಆದರೆ ಇದು ಬ್ಲೂ ಚಿಪ್‌ ಕಂಪನಿಗಳ ಹೂಡಿಕೆಯಾದ್ದರಿಂದ ಹೂಡಿಕೆ ಮಾಡಬಹುದು.

೨. ಕೋಟಕ್‌ ಬ್ಲೂ ಚಿಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌: KOTAK BLUCHIP FUND GROWTH DIRECT: ಇದು ಹೂಡಿಕೆದಾರರಿಗೆ 5 ವರ್ಷಗಳಲ್ಲಿ 17.52% ಲಾಭ ತಂದುಕೊಟ್ಟಿದೆ. 4,997 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ. ಹಣಕಾಸು, ತಂತ್ರಜ್ಞಾನ, ಇಂಧನ, ಆಟೊಮೊಬೈಲ್‌ ವಲಯದಲ್ಲಿ ಹೂಡಿಕೆ ಮಾಡಲಾಗಿದೆ. ಎಕ್ಸ್‌ಪೆನ್ಸ್‌ ರೇಶಿಯೊ, ಲಾಭಾಂಶದ ಲೆಕ್ಕದಲ್ಲಿ ಕೋಟಕ್‌ ಬ್ಲೂ ಚಿಪ್‌ಗಿಂತ ಕೆನರಾ ರೊಬೋಕೊ ಉತ್ತಮ ಎನ್ನಬಹುದು.

೩. ಮಿರಾಯ್‌ ಅಸೆಟ್‌ ಲಾರ್ಜ್‌ ಕ್ಯಾಪ್‌ ಫಂಡ್‌ ಗ್ರೋಥ್‌ ಡೈರೆಕ್ಟ್‌- MIRAE ASSET LARGE CAP FUND GROWTH DIRECT : ಕಳೆದ 5 ವರ್ಷಗಳಲ್ಲಿ 16.3% ಲಾಭ ಕೊಟ್ಟಿದೆ. ಇದರಲ್ಲಿ 33,748 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಎಚ್‌ಡಿಎಫ್‌ಸಿ, ಐಸಿಐಸಿಐ, ಇನ್ಫೋಸಿಸ್‌, ರಿಲಯನ್ಸ್‌ ಇತ್ಯಾದಿ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಹಣಕಾಸು, ಟೆಕ್ನಾಲಜಿ, ಎನರ್ಜಿ, ಹೆಲ್ತ್‌ಕೇರ್‌ನಲ್ಲಿ ಹೂಡಿಕೆ ಮಾಡಿರುವುದನ್ನು ಗಮನಿಸಬಹುದು.

೪. ಐಸಿಐಸಿಐ ಪ್ರೂರೆನ್ಸಿಯಲ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಗ್ರೋಥ್‌-ICICI PRUDENTIAL BLUCHIP FUND DIRECT GROWTH : ಈ ಫಂಡ್‌ನಲ್ಲಿ ಕಳೆದ ಐದು ವರ್ಷಗಳ ಲಾಭಾಂಶ 16.3% ಆಗಿದೆ. ಇದರಲ್ಲಿ 33,739 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಇತರ ಫಂಡ್‌ ಗೆ ಹೋಲಿಸಿದರೆ ಲಾಭಾಂಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಈ ಫಂಡ್‌ನಲ್ಲಿ ಎಕ್ಸ್‌ಪೆನ್ಸ್‌ ರೇಶಿಯೊ 1.0% ಇದೆ. ಅಂದರೆ ಕೆನರಾ ರೊಬೋಕೊಗಿಂತ ಹೆಚ್ಚು. ಸಿಪ್‌ ದೃಷ್ಟಿಯಿಂದ 100 ರೂ.ಗಳ ಅತ್ಯಂತ ಕಡಿಮೆ ಮೊತ್ತದಲ್ಲೂ ಹೂಡಿಕೆ ಮಾಡಬಹುದು. ಲಂಪ್ಸಮ್‌ನಲ್ಲೂ ಕನಿಷ್ಠ 100 ರೂ. ಹೂಡಿಕೆ ಮಾಡಬಹುದು.

5. ಎಕ್ಸಿಸ್‌ ಬ್ಲೂಚಿಪ್‌ ಫಂಡ್‌ ಡೈರೆಕ್ಟ್‌ ಪ್ಲಾನ್‌ ಗ್ರೋಥ್-AXIS BLUE CHIP FUND DIRECT PLAN GROWTH : ಇದು ಕಳೆದ ಐದು ವರ್ಷಗಳಲ್ಲಿ 15.31% ಲಾಭಾಂಶ ನೀಡುತ್ತದೆ. 36,980 ಕೋಟಿ ರೂ.ಗಳನ್ನು ಇದರಲ್ಲಿ ಹೂಡಲಾಗಿರುವುದು ವಿಶೇಷ. ಸಿಪ್‌ ಆಗಿ 500 ರೂ.ಗಳಿಂದಲೂ ಹೂಡಿಕೆ ಮಾಡಬಹುದು. ಇಲ್ಲಿ ಬಜಾಜ್‌ ಫೈನಾನ್ಸ್‌, ಡಿಮಾರ್ಟ್‌ ಕಂಪನಿಯಲ್ಲೂ (ಅವೆನ್ಯೂ ಮಾರ್ಕೆಟ್ಸ್) ಹೂಡಿಕೆ ಮಾಡಲಾಗಿದೆ.‌ ಸೇವಾ ವಲಯದಲ್ಲೂ ಹೂಡಿಕೆ ಮಾಡಿರುವುದನ್ನು ಗಮನಿಸಬಹುದು.

ಉಪಯುಕ್ತ ಟಿಪ್ಸ್:‌ 1. ಎಕ್ಸ್‌ಪೆನ್ಸ್‌ ರೇಶಿಯೊ (ಕಮಿಶನ್)‌ ಎಷ್ಟಿದೆ ಎಂದು ನೋಡಬೇಕು. ಎಕ್ಸ್‌ಪೆನ್ಸ್‌ ರೇಶಿಯೊ ಕಡಿಮೆಯಾಗಿ ಇರಬೇಕು. 2. ದೀರ್ಘಾವಧಿ ಹೂಡಿಕೆಯಲ್ಲಿ ಎಕ್ಸ್‌ಪೆನ್ಸ್‌ ರೇಶಿಯೊ ಜಾಸ್ತಿ ಇದ್ದರೆ ಲಕ್ಷಗಟ್ಟಲೆ ರೂ. ಕಮೀಶನ್‌ ಆಗುತ್ತದೆ. 3. ಮೊದಲ ಮೂರು ಫಂಡ್‌ಗಳ ಆಯ್ಕೆಯನ್ನು ಪರಿಶೀಲಿಸಬಹುದು.

DISCLAIMER: Stock Market and Mutual Funds investments are subject to market risks. There is no assurance and gurantee of returns neither the principal nor appreciation on the investments. Kindly seek advice from your financial planner before investing. User discretion advised. Information presented in this video is for educational purpose only. It has not been prepared with regard to the individual needs, objectives or financial situation of any particular person.

Exit mobile version