ನವ ದೆಹಲಿ: ಸಾರ್ವಜನಿಕ ವಲಯದ ಉದ್ದಿಮೆ ಸಂಸ್ಥೆಗಳಿಗೆ ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಖಾಸಗಿ ವಲಯದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ( PSU Investment ) ಹಣಕಾಸು ಸಚಿವಾಲಯ ಅನುಮತಿ ನೀಡಿದೆ.
ಇದುವರೆಗೆ ಎಸ್‌ಬಿಐ, ಯುಟಿಐ, ಎಲ್‌ಐಸಿ ಮತ್ತು ಕೇಂದ್ರ ಸರ್ಕಾರ ಮಾತ್ರ ಪಿಎಸ್‌ಯುಗಳ ಹೆಚ್ಚುವರಿ ಹಣದ ಹೂಡಿಕೆ ಕುರಿತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇತ್ತು. ಇದರ ಪರಿಣಾಮ ಸಾರ್ವಜನಿಕ ವಲಯದ ಕಂಪನಿಗಳಿಗೆ ನಿಗದಿತ ಆದಾಯ ಹೂಡಿಕೆ ಯೋಜನೆಗಳ ಹೊರತಾಗಿ ಹೆಚ್ಚಿನ ಆದಾಯ ಗಳಿಸಲು ಆಯ್ಕೆ ಸಿಕ್ಕಂತಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಖಾಸಗಿ ವಲಯದ ಕನಿಷ್ಠ 35 ಮ್ಯೂಚುವಲ್ ಫಂಡ್‌ಗಳಿಗೆ ಹೂಡಿಕೆಯ ಹರಿವು ಹೆಚ್ಚಳಕ್ಕೂ ಇದು ಸಹಕಾರಿಯಾಗಲಿದೆ.