ನವ ದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಒಟ್ಟು ಲಾಭ 2022-23 ರಲ್ಲಿ 1 ಲಕ್ಷ ಕೋಟಿ ರೂ. ದಾಟಿದೆ. (Public sector banks total profit) ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಒಂದೇ ಇದರಲ್ಲಿ ಅರ್ಧದಷ್ಟು ಲಾಭವನ್ನು ಗಳಿಸಿದೆ. (State Bank of India) ಎಸ್‌ಬಿಐ 2022-23ರಲ್ಲಿ 50,232 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಎಸ್‌ಬಿಐ ಲಾಭದಲ್ಲಿ 59% ಹೆಚ್ಚಳವಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2017-18ರಲ್ಲಿ 85,390 ಕೋಟಿ ರೂ. ನಷ್ಟದಲ್ಲಿದ್ದವು. 2022-23ರಲ್ಲಿ 1,04,649 ಕೋಟಿ ರೂ. ಲಾಭ ಗಳಿಸಿವೆ. ಪುಣೆ ಮೂಲದ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharastra) 2,602 ಕೋಟಿ ರೂ. ಲಾಭ ಗಳಿಸಿದೆ. UCO ಬ್ಯಾಂಕ್ 1862 ಕೋಟಿ ರೂ. ಲಾಭ ಪಡೆದಿದೆ. ಬ್ಯಾಂಕ್ ಆಫ್ ಬರೋಡಾ (Bank of Baroda) 14,110 ಕೋಟಿ ರೂ. ಲಾಭ ಗಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊರತುಪಡಿಸಿ ಉಳಿದೆಲ್ಲ ಸಾರ್ವಜನಿಕ ಬ್ಯಾಂಕ್‌ಗಳು ಲಾಭ ಗಳಿಸಿವೆ. (Panjab National Bank) ಪಿಎನ್‌ಬಿ ಲಾಭ 3,457 ಕೋಟಿ ರೂ.ಗಳಿಂದ 2,507 ಕೋಟಿ ರೂ.ಗೆ ಇಳಿಕೆಯಾಗಿದೆ. ಕೆನರಾ ಬ್ಯಾಂಕ್ 10,604 ಕೋಟಿ ರೂ. ಲಾಭ ಗಳಿಸಿದೆ. ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ 10,000 ಕೋಟಿ ರೂ.ಗಿಂತ ಹೆಚ್ಚು ಲಾಭ ಗಳಿಸಿವೆ.
ಇದನ್ನೂ ಓದಿ: SBI Q4 Results: ನಾಲ್ಕನೇ ತ್ರೈಮಾಸಿಕದಲ್ಲಿ ಎಸ್‌ಬಿಐಗೆ 16,695 ಕೋಟಿ ರೂ. ನಿವ್ವಳ ಲಾಭ
ಸಾರ್ವಜನಿಕ ಬ್ಯಾಂಕ್ ಲಾಭ ಗಳಿಕೆಗೆ ಕಾರಣವೇನು?
ಸಾರ್ವಜನಿಕ ವಲಯದ ಬ್ಯಾಂಕ್‌ಗಳು ದಾಖಲೆಯ ನಷ್ಟದಿಂದ ದಾಖಲೆಯ ಲಾಭದ ಹಳಿಗೆ ಮರಳಿದೆ. ಇದಕ್ಕೆ ಕಾರಣವೂ ಇದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಈ ಯಶಸ್ಸಿನ ರೂವಾರಿಗಳು. ಕೇಂದ್ರ ಸರ್ಕಾರ 4 ಕಾರ್ಯತಂತ್ರಗಳನ್ನು ಅಳವಡಿಸಿತ್ತು.
- ವಸೂಲಾಗದಿರುವ ಸಾಲ ಅಥವಾ ಎನ್‌ಪಿಎ ಅನ್ನು ಪಾರದರ್ಶಕವಾಗಿ ಗುರುತಿಸುವುದು.
- ಎನ್‌ಪಿಎ ಬಗ್ಗೆ ನಿರ್ಣಯ ಮತ್ತು ರಿಕವರಿ
- ಸಾರ್ವಜನಿಕ ಬ್ಯಾಂಕ್‌ಗಳಿಗೆ ಬಂಡವಾಳ ಪೂರೈಕೆ
- ಹಣಕಾಸು ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮಗಳು
ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆಯ ಕ್ರಮವಾಗಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ 3,10,997 ಕೋಟಿ ರೂ.ಗಳ ಬಂಡವಾಳ ನೆರವು ನೀಡಿತ್ತು. ಬ್ಯಾಂಕ್‌ಗಳು ಸಂಭವನೀಯ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಇದರ ಅಗತ್ಯ ಇತ್ತು. ಸಾಲದ ವಿತರಣೆಯಲ್ಲಿ ಶಿಸ್ತು ಉಂಟಾಗಿತ್ತು. ತಂತ್ರಜ್ಞಾನದ ಅಳವಡಿಕೆ, ಬ್ಯಾಂಕ್‌ಗಳ ವಿಲೀನ ಕೂಡ ಸಹಕಾರಿಯಾಗಿ ಪರಿಣಮಿಸಿದೆ.