Site icon Vistara News

Canara Bank | ಕೆನರಾ ಬ್ಯಾಂಕ್‌ ಸಾಲದ ಬಡ್ಡಿ ದರ ಏರಿಕೆ, ಇಎಂಐ ಮತ್ತಷ್ಟು ಹೆಚ್ಚಳ

canara bank

ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌, (Canara Bank) ತನ್ನ ಎಂಸಿಎಲ್‌ಆರ್‌ ಆಧಾರಿತ ಸಾಲಗಳ ಮೇಲಿನ ಬಡ್ಡಿ ದರವನ್ನು ಏರಿಸಿದೆ. ಇದರಿಂದ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್-ಬೇಸ್ಡ್‌ ಲೆಂಡಿಂಗ್‌ ರೇಟ್‌ ಆಧರಿತ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಹಾಗೂ ಕಾರ್ಪೊರೇಟ್‌ ಸಾಲಗಳ ಬಡ್ಡಿ ದರ ಏರಿಕೆಯಾಗಲಿದೆ.

ಡಿಸೆಂಬರ್‌ 7ರಿಂದ ನೂತನ ಬಡ್ಡಿ ದರ ಜಾರಿಯಾಗಲಿದೆ. ಕೆನರಾ ಬ್ಯಾಂಕ್‌ ಒಂದು ತಿಂಗಳಿನ ಅವಧಿಯ ಎಂಸಿಎಲ್‌ಆರ್‌ ದರವನ್ನು ೭.೨೫%ರಿಂದ 7.30%ಕ್ಕೆ ಏರಿಸಿದೆ. 6 ತಿಂಗಳಿನ ಎಂಸಿಎಲ್‌ಆರ್‌ ದರವನ್ನು 8%ರಿಂದ 8.05%ಕ್ಕೆ ವೃದ್ಧಿಸಿದೆ. ಒಂದು ವರ್ಷ ಅವಧಿಗೆ ಬಡ್ಡಿ ದರವನ್ನು 8.10%ರಿಂದ 8.15%ಕ್ಕೆ ಏರಿಸಲಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬುಧವಾರ ತನ್ನ ಬಡ್ಡಿ ದರಗಳ ಪರಾಮರ್ಶೆಯ ಫಲಿತಾಂಶವನ್ನು ಪ್ರಕಟಿಸಲಿದೆ. ಹೀಗಾಗಿ ರೆಪೊ ದರಗಳ ಸ್ಥಿತಿ ಗತಿ ಏನಾಗಲಿದೆ ಎಂದು ನಾಳೆ ಸ್ಪಷ್ಟವಾಗಲಿದೆ.

Exit mobile version