ಲಂಡನ್: ಎಚ್‌ಎಸ್‌ಬಿಸಿ ಬ್ಯಾಂಕ್ ಬ್ರಿಟನ್‌ನಲ್ಲಿ ಅಮೆರಿಕ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಘಟಕವನ್ನು ಖರೀದಿಸಿದೆ. ಬ್ರಿಟನ್ ಸಂಸದ ಜೆರೆಮಿ ಹಂಟ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಸೋಮವಾರ ಬೆಳಗ್ಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಯುಕೆಯನ್ನು ಎಚ್‌ಎಸ್‌ಬಿಸಿಗೆ ಮಾರಾಟ ಮಾಡಲಾಗಿದೆ. (Silicon Valley Bank) ಸರ್ಕಾರ ಈ ಡೀಲ್‌ಗೆ ಅನುಮೋದಿಸಿದೆ ಎಂದು ತಿಳಿಸಿದ್ದಾರೆ.
ಸಿಲಿಕಾನ್ ವ್ಯಾಲಿ ಬ್ಯಾಂಕಿನ ಘಟಕವನ್ನು 1 ಪೌಂಡ್‌ಗೆ (99 ರೂ.) ಖರೀದಿಸಿರುವುದಾಗಿ ಎಚ್‌ಎಸ್‌ಬಿಸಿ ಹೇಳಿದೆ. ಬ್ರಿಟನ್‌ನಲ್ಲಿ ಬ್ಯಾಂಕಿಂಗ್ ಬಿಸಿನೆಸ್‌ಗೆ ಇದು ಸಹಕಾರಿಯಾಗಲಿದೆ ಎಂದು ಎಚ್‌ಎಸ್‌ಬಿಸಿ ಸಿಇಒ ನೋಯೆಲ್ ಕ್ವಿನ್ ತಿಳಿಸಿದ್ದಾರೆ. ಬ್ರಿಟನ್‌ನಲ್ಲಿ ಸ್ಟಾರ್ಟಪ್‌ಗಳಿಗೆ ಸಾಲ ನೀಡುವ ವಹಿವಾಟಿನಲ್ಲಿ ಎಸ್ ವಿಬಿ ಪ್ರಮುಖ ಪಾತ್ರ ವಹಿಸಿದೆ. ಈ ಖರೀದಿಯ ಬಳಿಕ ಬ್ಯಾಂಕ್ ಆಫ್ ಇಂಗ್ಲೆಂಡ್, ಬ್ರಿಟನ್‌ನ ಬ್ಯಾಂಕಿಂಗ್ ಸದೃಢವಾಗಿದೆ ಎಂದು ತಿಳಿಸಿದೆ.
ಅಮೆರಿಕ ಮೂಲದ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಇದರ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಆದರೆ ಭಾರತದ ಬ್ಯಾಂಕ್‌ಗಳಿಗೆ ಇದರಿಂದ ತೊಂದರೆ ಆಗದು ಎಂದು ತಜ್ಞರು ಅಂದಾಜಿಸಿದ್ದಾರೆ.
99 ರೂ.ಗೆ ಹೇಗೆ ಸಾಧ್ಯ? ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಇಂಗ್ಲೆಡ್ ಸಹಕಾರದೊಂದಿಗೆ ಎಚ್‌ಎಸ್‌ಬಿಸಿ ಖರೀದಿಸಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಠೇವಣಿದಾರರ ಹಣ ಸುರಕ್ಷಿತವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ. ಹೀಗಾಗಿ ಸರ್ಕಾರದ ಮಧ್ಯಪ್ರವೇಶದಿಂದ ಈ ಡೀಲ್ ಸಾಧ್ಯವಾಗಿದೆ.