Site icon Vistara News

PVR Cinemas | ಪಿವಿಆರ್‌ ಸಿನಿಮಾಸ್‌ನಿಂದ 100 ಹೊಸ ಸ್ಕ್ರೀನ್‌, 350 ಕೋಟಿ ರೂ. ಹೂಡಿಕೆ

pvr cinemas

ನವ ದೆಹಲಿ: ಸಿನಿ ಮಂದಿರಗಳ ಸರಣಿ ಪಿವಿಆರ್‌ ಸಿನಿಮಾಸ್‌, ( PVR Cinemas) 2022-23ರಲ್ಲಿ 100 ಹೊಸ ಸ್ಕ್ರೀನ್‌ಗಳನ್ನು ತೆರೆಯಲಿದೆ. ಈ ನಿಟ್ಟಿನಲ್ಲಿ 350 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.

ಇನೋಕ್ಸ್‌ ಲೈಶರ್‌ ( Inox Leisure) ಜತೆ ಪಿವಿಆರ್‌ ಸಿನಿಮಾಸ್‌ನ ವಿಲೀನ ಪ್ರಕ್ರಿಯೆ 2023ರ ಫೆಬ್ರವರಿ ವೇಳೆಗೆ ಪೂರ್ಣವಾಗುವ ನಿರೀಕ್ಷೆ ಇದೆ. ವಿಲೀನದ ಬಳಿಕ ಎರಡೂ ಒಟ್ಟಿಗೆ ಕಾರ್ಯನಿರ್ವಹಿಸಲಿದೆ ಎಂದು ಪಿವಿಆರ್‌ ಮುಖ್ಯಸ್ಥ ಗೌತಮ್‌ ದತ್ತಾ ತಿಳಿಸಿದ್ದಾರೆ.

ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಪಿವಿಆರ್ ಸಿನಿಮಾಸ್‌ ವಹಿವಾಟು ಚೇತರಿಸಿದೆ. ಜನತೆ ಸಿನಿಮಾ ವೀಕ್ಷಣೆಯನ್ನು ಆನಂದಿಸುತ್ತಿದ್ದಾರೆ. ಪಿವಿಆರ್‌ ಸಿನಿಮಾಸ್‌ ಪ್ರತಿ ಸ್ಕ್ರೀನ್‌ಗೆ 3.5 ಕೋಟಿ ರೂ. ಹೂಡಿಕೆ ಮಾಡಲಿದೆ.

Exit mobile version