Site icon Vistara News

Railway Line: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಇನ್ನೂ ಬ್ರಿಟಿಷರ ಅಧೀನದಲ್ಲಿದೆ ಈ ರೈಲು ಮಾರ್ಗ!

Railway Line

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಭಾರತದ ಈ ಒಂದು ರೈಲು ಮಾರ್ಗ (Railway Line) ಮಾತ್ರ ಇನ್ನೂ ಬ್ರಿಟಿಷರ (British owned railway line) ನಿಯಂತ್ರಣದಲ್ಲಿದೆ! ಭಾರತೀಯ ರೈಲ್ವೇಸ್ (Indian Railways) ಅದನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಈಗಲೂ ಅದಕ್ಕೆ ಬ್ರಿಟಿಷರಿಗೆ ರಾಯಧನವನ್ನು (royalty) ಪಾವತಿಸುತ್ತಿದೆ!

ಮಹಾರಾಷ್ಟ್ರದ ರೈಲು ಮಾರ್ಗವನ್ನು (maharastra railway line) ಬ್ರಿಟಿಷ್ ಕಂಪನಿಯೊಂದು ನಿರ್ವಹಿಸುತ್ತಿದೆ. ಭಾರತೀಯ ರೈಲ್ವೇ ಈ ರೈಲು ಮಾರ್ಗವನ್ನು ಖರೀದಿಸಲು ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅವು ವಿಫಲವಾಯಿತು. ಹೀಗಾಗಿ ಇನ್ನೂ ಆ ರೈಲು ಮಾರ್ಗವನ್ನು ಬ್ರಿಟಿಷ್ ಕಂಪನಿ, ‘ಕಿಲ್ಲಿಕ್ ನಿಕ್ಸನ್ ಆಂಡ್ ಕೋʼ ಈಗಲೂ ಸೆಂಟ್ರಲ್ ಪ್ರಾವಿನ್ಸ್ ರೈಲ್ವೆ ಕಂಪನಿಯನ್ನು ನಿರ್ವಹಿಸುತ್ತದೆ.

ಇತ್ತೀಚಿನವರೆಗೂ ರಾಯಧನ ಪಾವತಿ

ಈ ಕಂಪನಿಯು ಅಮರಾವತಿಯಿಂದ ಮಹಾರಾಷ್ಟ್ರದ ಮುರ್ತಜಾಪುರಕ್ಕೆ 190 ಕಿ.ಮೀ ರೈಲು ಮಾರ್ಗದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್ ಅನ್ನು ಓಡಿಸುತ್ತಿತ್ತು. ಸ್ವಾತಂತ್ರ್ಯದ ಅನಂತರ ಬ್ರಿಟಿಷರು ಭಾರತವನ್ನು ತೊರೆದರು. ಆದರೆ ಬ್ರಿಟಿಷ್ ಖಾಸಗಿ ಕಂಪನಿಯು ಈ ಮಾರ್ಗದ ಮೇಲೆ ಅಧಿಕಾರವನ್ನು ಮುಂದುವರಿಸಿದೆ. ಭಾರತೀಯ ರೈಲ್ವೇಯು ಆ ಕಂಪನಿಗೆ ಇತ್ತೀಚಿನ ವರ್ಷಗಳವರೆಗೂ ಬರೋಬ್ಬರಿ 1.20 ಕೋಟಿ ರೂ. ರಾಯಧನವನ್ನು ಪಾವತಿಸುತ್ತಿತ್ತು.


ಶಕುಂತಲಾ ರೈಲ್ವೇ ಲೈನ್

ಅಮರಾವತಿಯಿಂದ ಮುರ್ತಜಾಪುರದವರೆಗಿನ 190 ಕಿ.ಮೀ ರೈಲು ಮಾರ್ಗವನ್ನು ಸ್ವಾಧೀನಪಡಿಸಿಕೊಳ್ಳಲು ಭಾರತೀಯ ರೈಲ್ವೇ ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ಅವರು ಯಶಸ್ವಿಯಾಗಲಿಲ್ಲ. ಶಕುಂತಲಾ ಪ್ಯಾಸೆಂಜರ್ ಎಂಬ ಒಂದು ಪ್ಯಾಸೆಂಜರ್ ರೈಲು ಮಾತ್ರ ಈ ರೈಲು ಮಾರ್ಗದಲ್ಲಿ ಓಡುತ್ತಿತ್ತು. ಅಂದಹಾಗೆ, ಶಕುಂತಲಾ ರೈಲ್ವೇ ಲೈನ್ ಈ ಮಾರ್ಗದ ಹೆಸರು. ಶಕುಂತಲಾ ಎಕ್ಸ್‌ಪ್ರೆಸ್ ಅಚಲಪುರ ಮತ್ತು ಯವತ್ಮಾಲ್ ನಡುವಿನ 17 ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಈ ರೈಲು ಸುಮಾರು 70 ವರ್ಷಗಳ ಕಾಲ ಸ್ಟೀಮ್ ಎಂಜಿನ್‌ನಲ್ಲಿ ಓಡಿದೆ.

ಡೀಸೆಲ್ ಎಂಜಿನ್

1994ರಲ್ಲಿ ಶಕುಂತಲಾ ಪ್ಯಾಸೆಂಜರ್ ರೈಲಿಗೆ ಡೀಸೆಲ್ ಎಂಜಿನ್ ಅಳವಡಿಸಲಾಗಿತ್ತು. ಅನಂತರ ಅನಿರೀಕ್ಷಿತ ಕಾರಣಗಳಿಂದ ರೈಲನ್ನು ನಿಲ್ಲಿಸಲಾಗಿತ್ತು. ಇದನ್ನು ಪುನರಾರಂಭಿಸಬೇಕು ಎಂಬುದು ಸ್ಥಳೀಯರ ಆಗ್ರಹ. 5 ಬೋಗಿಗಳಿರುವ ಈ ರೈಲು ಪ್ರತಿದಿನ 800 ರಿಂದ 1,000 ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಸಾಗಿಸುತ್ತಿತ್ತು. ಭಾರತೀಯ ರೈಲ್ವೆಯನ್ನು 1951ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈ ರೈಲು ಮಾರ್ಗವು ಭಾರತ ಸರ್ಕಾರದ ವ್ಯಾಪ್ತಿಗೆ ಬರಲಿಲ್ಲ.

1.20 ಕೋಟಿ ರೂ. ರಾಯಧನ

ಅಮರಾವತಿ- ಮುರ್ತಜಾಪುರ ರೈಲು ಮಾರ್ಗವನ್ನು ಬಳಸುವುದಕ್ಕಾಗಿ ಭಾರತೀಯ ರೈಲ್ವೇಯು ಇಂಗ್ಲೆಂಡ್ ಕಂಪನಿಗೆ 1.20 ಕೋಟಿ ರೂ.ಗಳ ರಾಯಧನವನ್ನು ಪಾವತಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹಲವಾರು ವರದಿಗಳು ಹೇಳುತ್ತವೆ. ಈಗ ರಾಯಲ್ಟಿ ನೀಡಲಾಗುತ್ತಿಲ್ಲ ಎನ್ನಲಾಗಿದೆ.

Railway Line


ಹತ್ತಿ ಸಾಗಿಸಲು ನಿರ್ಮಾಣ

ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ತಿಯನ್ನು ಬೆಳೆಯಲಾಗುತ್ತದೆ. ಅಮರಾವತಿಯಿಂದ ಮಂಬಯಿ ಬಂದರಿಗೆ ಹತ್ತಿಯನ್ನು ಸಾಗಿಸಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಿಸಿದರು. ಈ ರೈಲು ಮಾರ್ಗವನ್ನು ನಿರ್ಮಿಸಲು ಸೆಂಟ್ರಲ್ ಪ್ರಾವಿನ್ಸ್ ರೈಲ್ವೇ ಕಂಪೆನಿ (CPRC) ಬ್ರಿಟನ್‌ನ ಕಿಲಿಕ್ ನಿಕ್ಸನ್ ಆಂಡ್ ಕಂ ಅನ್ನು ಸ್ಥಾಪಿಸಿತು.

ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ

ನಿರ್ಮಾಣ ಕಾರ್ಯ

ಈ ರೈಲು ಮಾರ್ಗದ ನಿರ್ಮಾಣವು 1903ರಲ್ಲಿ ಪ್ರಾರಂಭವಾಯಿತು ಮತ್ತು 1916ರಲ್ಲಿ ಪೂರ್ಣಗೊಂಡಿತು. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದಾಗ, ಭಾರತೀಯ ರೈಲ್ವೇ ಈ ಕಂಪನಿಯೊಂದಿಗೆ ಸುದೀರ್ಘ ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಹಾಗಾಗಿ ಈ ಮಾರ್ಗವನ್ನು ಬಳಸುವುದಕ್ಕಾಗಿ ಪ್ರತಿ ವರ್ಷ ಬ್ರಿಟಿಷ್‌ ಕಂಪನಿಗೆ ರಾಯಲ್ಟಿ ಪಾವತಿಸಬೇಕಾಗಿತ್ತು.

Exit mobile version