ನವದೆಹಲಿ: ಭಾರತೀಯ ರೈಲ್ವೆ ಮುಂದಿನ 1 ವರ್ಷದೊಳಗೆ 1,48,463 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಿದೆ ಎಂದು ಇಲಾಖೆ ತಿಳಿಸಿದೆ.
ಕಳೆದ ಎಂಟು ವರ್ಷಗಳಲ್ಲಿ ವಾರ್ಷಿಕ ಸರಾಸರಿ 43,678 ಮಂದಿ ನೇಮಕವಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ. ಮುಂಬರುವ 18 ತಿಂಗಳುಗಳಲ್ಲಿ ನಾನಾ ಇಲಾಖೆಗಳು 10 ಲಕ್ಷ ಜನರಿಗೆ ಉದ್ಯೋಗ ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಬೆನ್ನಲ್ಲೇ ರೈಲ್ವೆ ಇಲಾಖೆ ಈ ವಿಷಯ ತಿಳಿಸಿದೆ.
ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಒಟ್ಟು 31.91 ಲಕ್ಷ ಉದ್ಯೋಗಿಗಳು ಇದ್ದಾರೆ. ಒಟ್ಟು ಮಂಜೂರಾಗಿರುವ ಹುದ್ದೆಗಳು 40.78 ಲಕ್ಷಗಳಾಗಿದೆ. 31.33 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳ ಪೈಕಿ 40.55% ಮಂದಿ ರೈಲ್ವೆಯಲ್ಲಿದ್ದಾರೆ.
ಇದನ್ನೂ ಓದಿ: 18 ತಿಂಗಳಲ್ಲಿ 10 ಲಕ್ಷ ಜಾಬ್: ಸರಕಾರಿ ಖಾಲಿ ಹುದ್ದೆ ಭರ್ತಿಗೆ ಮೋದಿ ಆರ್ಡರ್