Site icon Vistara News

Railway revenue rose | ರೈಲ್ವೆ ಆದಾಯ ಆಗಸ್ಟ್‌ ಅಂತ್ಯಕ್ಕೆ 95,486 ಕೋಟಿ ರೂ.ಗೆ ಏರಿಕೆ, 38% ಹೆಚ್ಚಳ

rail

ನವ ದೆಹಲಿ: ಭಾರತೀಯ ರೈಲ್ವೆಯ ಒಟ್ಟಾರೆ ಆದಾಯ 2022ರ ಆಗಸ್ಟ್‌ ಅಂತ್ಯದ ವೇಳೆಗೆ 95,486 ಕೋಟಿ ರೂ.ಗೆ ಏರಿಕೆಯಾಗಿದೆ. (Railway revenue rose) 38% ಹೆಚ್ಚಳವಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರೈಲ್ವೆ ಆದಾಯದಲ್ಲಿ 26,271 ಕೋಟಿ ರೂ. ಏರಿಕೆಯಗಿದೆ. ಪ್ರಯಾಣಿಕರ ಸಂಚಾರ ವಿಭಾಗದಲ್ಲಿ ರೈಲ್ವೆಗೆ 25,276 ಕೋಟಿ ರೂ. ಆದಾಯ ಲಭಿಸಿದೆ. 13,574 ಕೋಟಿ ರೂ. ಏರಿಕೆಯಾಗಿದೆ.

ರೈಲ್ವೆಯಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಇದು ಕೂಡ ಆದಾಯ ಏರಿಕೆಗೆ ಕಾರಣವಾಗಿದೆ. ಸರಕುಗಳ ಸಾಗಣೆ ವಿಭಾಗದಲ್ಲಿ ಆದಾಯವು 10,780 ಕೋಟಿ ರೂ. ಹೆಚ್ಚಳವಾಗಿದ್ದು, 65,505 ಕೋಟಿ ರೂ.ಗೆ ವೃದ್ಧಿಸಿದೆ. 20% ಏರಿಕೆಯಾಗಿದೆ. ಆಹಾರ ಧಾನ್ಯಗಳು, ರಸಗೊಬ್ಬರ, ಸಿಮೆಂಟ್‌, ತೈಲ, ಕಂಟೇನರ್‌ ಸಾಗಣೆ ಮೂಲಕ ಆದಾಯ ವೃದ್ಧಿಸಿದೆ. ರೈಲ್ವೆಗೆ 2021-22ರಲ್ಲಿ ಒಟ್ಟಾಗಿ 1,91,278 ಕೋಟಿ ರೂ. ಆದಾಯ ಗಳಿಸಿದೆ.

Exit mobile version