Site icon Vistara News

Rain News : ದೇಶ ಪೂರ್ತಿ ಆವರಿಸಿದ ಮುಂಗಾರು, ಆದರೂ ವಾಡಿಕೆಗಿಂತ ಕಡಿಮೆ

rain

ನವ ದೆಹಲಿ: ಭಾರತದ ವಾರ್ಷಿಕ ಮುಂಗಾರು ಭಾನುವಾರ ಇಡೀ ದೇಶವನ್ನು ಆವರಿಸಿದೆ. ಸಾಮಾನ್ಯ ಪದ್ಧತಿಗಿಂತ ಆರು ದಿನ ಮೊದಲೇ ಆವರಿಸಿದ್ದರೂ, ವಾಡಿಕೆಗಿಂತ 10% ಕಡಿಮೆಯಾಗಿದೆ ( Rain News) ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ಭಾರತದಲ್ಲಿ ಸಾಮಾನ್ಯವಾಗಿ ಕೇರಳವನ್ನು ಜೂನ್‌ 1ರ ಆಸುಪಾಸಿನಲ್ಲಿ ಪ್ರವೇಶಿಸುವ ಮುಂಗಾರು ಉತ್ತರ ಭಾರತದಲ್ಲಿ ಕ್ರಮೇಣ ಹರಡಿಕೊಂಡು ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.

ಈ ಸಲ ದೇಶದಲ್ಲಿ ಜೂನ್‌ ತಿಂಗಳಿನಲ್ಲಿ ವಾಡಿಕೆಗಿಂತ 10% ಕಡಿಮೆ ಮಳೆಯಾಗಿದೆ. ಈ ವರ್ಷ ದಕ್ಷಿಣ ಕೇರಳಕ್ಕೆ ಜೂನ್‌ 8ಕ್ಕೆ ಮುಂಗಾರು ಮಳೆ ಆಗಮಿಸಿತ್ತು. ವಾಡಿಕೆಗಿಂತ ಒಂದು ವಾರ ಮೊದಲೇ ಮಳೆಯಾಗಿತ್ತು. ಆದರೆ ಬಳಿಕ ಚಂಡಮಾರುತದ ಪರಿಣಾಮ ಮುಂಗಾರು ಚದುರಿತ್ತು. ಹೀಗಿದ್ದರೂ ಈ ವಾರ ಮುಂಗಾರು ಚುರುಕಾಗಿದೆ. ಇಡೀ ದೇಶವನ್ನು ಆವರಿಸಿದೆ.

ಕೆಲ ರಾಜ್ಯಗಳು 60% ಗಿಂತಲೂ ಕಡಿಮೆ ಮಳೆಯನ್ನು ಪಡೆದಿವೆ. ಭಾರತ ಜೂನ್‌ನಲ್ಲಿ ವಾಡಿಕೆಗಿಂತ 10% ಕಡಿಮೆ ಮಳೆಯನ್ನು ಕಂಡಿದೆ. ನೈಋತ್ಯ ಮುಂಗಾರು ರಾಜಸ್ಥಾನ, ಹರಿಯಾಣ, ಪಂಜಾಬನ್ನು ಭಾನುವಾರ ಪ್ರವೇಶಿಸಿದೆ. 12 ರಾಜ್ಯಗಳಲ್ಲಿ ಜೂನ್‌ನಲ್ಲಿ ವಾಡಿಕೆಯ ಮಳೆಯಾಗಿದೆ. 14 ರಾಜ್ಯಗಳಲ್ಲಿ ಮಳೆಯ ಕೊರತೆ ಕಂಡಿದೆ.

ಎಲ್‌ನಿನೊ ಎಫೆಕ್ಟ್‌ ಹೊರತಾಗಿಯೂ ಜುಲೈನಲ್ಲಿ ಭಾರತ ಸರಾಸರಿ ಮಳೆಯನ್ನು ಸ್ವೀಕರಿಸುವ ಸಾಧ್ಯತೆ ಇದೆ ಎಂದು ಐಎಂಡಿ ಶುಕ್ರವಾರ ತಿಳಿಸಿತ್ತು. ಜುಲೈನಲ್ಲಿ ಉತ್ತಮ ಮಳೆಯಾದರೆ ಬೆಳ ಉತ್ಪತ್ತಿಯ ಕುರಿತ ಕಳವಳ ಬಗೆಹರಿಯಲಿದೆ. ಭಾರತದಲ್ಲಿ ಸುಮಾರು ಅರ್ಧದಷ್ಟು ಕೃಷಿ ಭೂಮಿಗೆ ನೀರಾವರಿ ಇಲ್ಲ. ಹೀಗಾಗಿ ಮಳೆ ನಿರ್ಣಾಯಕವಾಗಿದೆ.

ಇದನ್ನೂ ಓದಿ: Rainy Season Tips: ಮಳೆಗಾಲದಲ್ಲಿ ಬೆಚ್ಚಗೆ ಮಲಗಿದವರಿಗೆ ಮುಂಜಾನೆ ಏಳುವುದು ಕಷ್ಟವೇ?

ಮುಂಬರುವ ಕೆಲವು ದಿನಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ, ಕರಾವಳಿಯಲ್ಲಿ, ತಮಿಳುನಾಡು, ಪುದುಚೇರು, ಕೇರಳ, ಮಾಹೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

Exit mobile version