ನವದೆಹಲಿ: ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಒಡೆತನದ ನೂತನ ಆಕಾಶ ಏರ್‌ಲೈನ್ ಸಂಸ್ಥೆಗೆ ಮೊದಲ ಬೋಯಿಂಗ್ ವಿಮಾನ ತಲುಪಿದ್ದು, ದಿಲ್ಲಿಯಲ್ಲಿ ಬಂದಿಳಿದಿದೆ.
ಏರ್‌ಲೈನ್ ತನ್ನ ಮೊದಲ ೭೩೭ ಮ್ಯಾಕ್ಸ್ ಬೋಯಿಂಗ್ ವಿಮಾನವನ್ನು ಕಳೆದ ವಾರ ಅಮೆರಿಕದ ಸಿಯಾಟಲ್‌ನಲ್ಲಿ ಸ್ವೀಕರಿಸಿತ್ತು. ಒಟ್ಟು ೭೨ ವಿಮಾನಗಳನ್ನು ಆಕಾಶ ಏರ್‌ಲೈನ್ ಖರೀದಿಸಲಿದೆ. ಮೊದಲ ಹಂತದಲ್ಲಿ ೧೮ ವಿಮಾನಗಳು ಸೇರಲಿವೆ. ಬಳಿಕ ೪ ವರ್ಷಗಳಲ್ಲಿ ೫೪ ವಿಮಾನಗಳು ಸೇರ್ಪಡೆಯಾಗಲಿದೆ.
ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ವಿಮಾನವನ್ನು ಬರಮಾಡಿಕೊಳ್ಳಲಾಯಿತು.