ನವ ದೆಹಲಿ: ಓಯೋ ರೂಮ್ಸ್ ಸ್ಥಾಪಕ ರಿತೇಶ್ ಅಗ್ರವಾಲ್ (Ritesh Agarwal) ಅವರ ತಂದೆ ರಮೇಶ್ ಅಗ್ರವಾಲ್ ಅವರು ಗುರುಗ್ರಾಮದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ 20ನೇ ಮಹಡಿಯಿಂದ ಬಿದ್ದು ( Oyo Rooms) ಸಾವಿಗೀಡಾಗಿದ್ದಾರೆ. ರಮೇಶ್ ಅಗ್ರವಾಲ್ ಅವರು ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ರಿತೇಶ್ ಅಗ್ರವಾಲ್ ಆ ಕಟ್ಟಡದಲ್ಲಿ ವಾಸಿಸುತ್ತಿರಲಿಲ್ಲ. ಗುರುಗ್ರಾಮದಲ್ಲಿರುವ ಡಿಎಲ್ಎಫ್ ದಿ ಕ್ರೆಸ್ಟ್ ಅಪಾರ್ಟ್ಮೆಂಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ರಿತೇಶ್ ಅಗ್ರವಾಲ್ ಅವರು ತಂದೆಯ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದು, ನಮಗೆಲ್ಲರಿಗೂ ನಿತ್ಯಸ್ಪೂರ್ತಿಯಾಗಿದ್ದ ತಂದೆ ರಮೇಶ್ ಅಗ್ರವಾಲ್ ಸಾವಿಗೀಡಾಗಿದ್ದಾರೆ. ಪರಿಪೂರ್ಣ ಬದುಕು ನಡೆಸಿರುವ ತಂದೆ ನಮಗೆಲ್ಲ ಸದಾ ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಹೇಳಿದ್ದಾರೆ. ರಿತೇಶ್ ಅಗ್ರವಾಲ್ ಅವರು ವಿವಾಹವಾದ ಕೆಲ ದಿನಗಳಲ್ಲಿಯೇ ಈ ದುರಂತ ಸಂಭವಿಸಿದೆ.