ಬೆಂಗಳೂರು: ಸಾಮಾಜಿಕ ಜಾಲತಾಣ ದಿಗ್ಗಜ ಮಾರ್ಕ್ ಜುಕರ್‌ಬರ್ಗ್ ಅವರ ಸೋದರಿ ರ‍್ಯಾಂಡಿ ಜುಕರ್‌ಬರ್ಗ್ ಅವರು ಜಾಗತಿಕ ಹೂಡಿಕೆದಾರರ (Invest Karnataka 2022) ಸಮಾವೇಶದಲ್ಲಿ ಗುರುವಾರ ಭಾಗವಹಿಸಿದರು.
ಇಂಗ್ಲಿಷ್ ಹಾಡೊಂದನ್ನು ಹಾಡಿದ ಜುಕರ್ ಬರ್ಗ್, ಹೂಡಿಕೆದಾರರನ್ನು ಹುರಿದುಂಬಿಸಿದರು. ಫೇಸ್ ಬುಕ್ ಜತೆಗಿನ ಒಡನಾಟವನ್ನು ಬಣ್ಣಿಸಿದರು. ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಇಂಜಿನಿಯರ್‌ಗಳಿದ್ದಾರೆ. ಇದು ಸಂತಸದ ಸಂಗತಿ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಉದ್ಯಮಿಯಾಗಿರುವ ರ‍್ಯಾಂಡಿ ಜುಕರ್‌ಬರ್ಗ್ ಅವರು, ಈ ಹಿಂದೆ ಫೇಸ್‌ಬುಕ್‌ನ ವಕ್ತಾರೆ ಹಾಗೂ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ಆಗಿದ್ದರು.