Site icon Vistara News

UPI New Features: ಯುಪಿಐ 3 ಬದಲಾವಣೆ; ಇನ್ನು ಇಂಟರ್‌ನೆಟ್‌ ಇಲ್ಲದೆಯೂ ಹಣ ಪಾವತಿಸಿ

Voice Based UPI Payment

NPCI launches new Products users can now make voice enabled UPI payments

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ದ್ವೈಮಾಸಿಕ ಸಭೆಯ ಬಳಿಕ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ರೆಪೋ ದರದ ಮಾಹಿತಿ ನೀಡುವ ಜತೆಗೆ ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ (UPI) ಜಾರಿಗೆ ತರಲಾಗುತ್ತಿರುವ ಮೂರು ಮಹತ್ವದ ಬದಲಾವಣೆಯ (UPI New Features) ಕುರಿತು ಕೂಡ ಮಾಹಿತಿ ನೀಡಿದರು. ಅದರಲ್ಲೂ, ಇಂಟರ್‌ನೆಟ್‌ ಇಲ್ಲದೆಯೂ (Offline Payment) ಹಣ ಪಾವತಿ ಮಾಡುವ ಸೌಲಭ್ಯವು ಜನರಿಗೆ ಅನುಕೂಲವಾಗಲಿದೆ.

ಆಫ್‌ಲೈನ್‌ ಪಾವತಿ ಹೇಗೆ?

ಯುಪಿಐ ಮೂಲಕ ಆಫ್‌ಲೈನ್‌ ಪಾವತಿಯ ಮಿತಿಯನ್ನು ಆರ್‌ಬಿಐ 200 ರೂಪಾಯಿಯಿಂದ 500 ರೂಪಾಯಿಗೆ ಏರಿಕೆ ಮಾಡಿದೆ. ಗ್ರಾಹಕರು ಮೊಬೈಲ್‌ನಲ್ಲಿ ಯುಪಿಐ ಲೈಟ್‌ (UPI Lite) ಆ್ಯಪ್ ಇನ್‌ಸ್ಟಾಲ್‌ ಮಾಡಿಕೊಂಡು, ಇಂಟರ್‌ನೆಟ್‌ ಇಲ್ಲದೆಯೇ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ 500 ರೂಪಾಯಿವರೆಗೆ ಹಣ ಪಾವತಿಸಬಹುದಾಗಿದೆ. ಇಂಟರ್‌ನೆಟ್‌ ಖಾಲಿಯಾದಾಗ, ಇಂಟರ್‌ನೆಟ್‌ ಇಲ್ಲದಿದ್ದಾಗ ಗ್ರಾಹಕರು ಆಫ್‌ಲೈನ್‌ನಲ್ಲಿಯೇ ಸುಲಭವಾಗಿ ಹಣ ಪಾವತಿಸಬಹುದಾಗಿದೆ.

ಆರ್‌ಬಿಐ ಪ್ರಮುಖ ಘೋಷಣೆಗಳು

ಹಣ ಪಾವತಿಗೂ ಕೃತಕ ಬುದ್ಧಿಮತ್ತೆ

ಹಣ ಪಾವತಿಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುವುದು ಆರ್‌ಬಿಐ ಘೋಷಿಸಿದ ಎರಡನೇ ಪ್ರಮುಖ ಫೀಚರ್‌ ಆಗಿದೆ. ಗ್ರಾಹಕರು ಡಿಜಿಟಲ್‌ ಮೂಲಕ “ಸಂಭಾಷಣೆಯುಕ್ತ ಪೇಮೆಂಟ್”‌ (Conversational Payments) ಮಾಡಬಹುದಾಗಿದೆ. ಸುಲಭ ಹಾಗೂ ಸುರಕ್ಷಿತವಾಗಿ ಡಿಜಿಟಲ್‌ ಪಾವತಿಗಾಗಿ ಈ ನೂತನ ತಂತ್ರಜ್ಞಾನದ ಅಳವಡಿಕೆಗೆ ಆರ್‌ಬಿಐ ತೀರ್ಮಾನಿಸಿದೆ. ಕೃತಕ ಬುದ್ಧಿಮತ್ತೆ ಅಳವಡಿಕೆಯ ವ್ಯವಸ್ಥೆ ಜತೆ ಸಂಭಾಷಣೆ ನಡೆಸಿ ಸುಲಭ ಹಾಗೂ ಸುರಕ್ಷಿತವಾಗಿ ಪಾವತಿ ಮಾಡಬಹುದಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಇದನ್ನೂ ಓದಿ: Update KYC : ಬ್ಯಾಂಕ್‌ ಕೆವೈಸಿ ಅಪ್‌ಡೇಟ್‌ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ

ಎನ್‌ಎಫ್‌ಸಿ ಮೂಲಕ ಆಫ್‌ಲೈನ್‌ ಪಾವತಿ

ನಿಯರ್‌-ಫೀಲ್ಡ್‌ ಕಮ್ಯುನಿಕೇಷನ್‌ (Near-Field Communication-NFC) ತಂತ್ರಜ್ಞಾನದ ಮೂಲಕ ಗ್ರಾಹಕರು ಆಫ್‌ಲೈನ್‌ನಲ್ಲಿದ್ದಾಗಲೂ ಹಣ ಪಾವತಿ ಮಾಡಬಹುದಾಗಿದೆ. ಯಾವುದೇ ಮಳಿಗೆ, ಅಂಗಡಿಗಳಲ್ಲಿ ಸ್ಮಾರ್ಟ್‌ಫೋನ್‌ ಟ್ಯಾಪ್‌ ಮಾಡಿ ಪಾಯಿಂಟ್‌-ಆಫ್‌-ಸೇಲ್‌ ಮಷೀನ್‌ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಇದರಿಂದ ಆಫ್‌ಲೈನ್‌ ಜತೆಗೆ ಕ್ಷಿಪ್ರವಾಗಿ ಹಾಗೂ ಸುರಕ್ಷಿತವಾಗಿ ಹಣ ಪಾವತಿ ಸಾಧ್ಯವಾಗಲಿದೆ ಎಂದು ಶಕ್ತಿಕಾಂತ ದಾಸ್‌ ಮಾಹಿತಿ ನೀಡಿದರು.

Exit mobile version