ನವ ದೆಹಲಿ: ಮಹೀಂದ್ರಾ & ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸ್‌ಗೆ ಹೊರಗಿನ ಏಜೆಂಟರನ್ನು ಸಾಲ ಮರು ವಸೂಲಾತಿಗೆ ನೇಮಿಸದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI ) ನಿರ್ಬಂಧ ವಿಧಿಸಿದೆ. ಮುಂದಿನ ಆದೇಶ ಬರುವ ತನಕ ಈ ಆದೇಶ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ.
ಜಾರ್ಖಂಡ್‌ನಲ್ಲಿ ಸಾಲ ವಸೂಲಾತಿ ಏಜೆಂಟರು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಗರ್ಭಿಣಿಯೊಬ್ಬರು ಮೃತಪಟ್ಟ ಘಟನೆ ನಡೆದ ಬಳಿಕ ಆರ್‌ಬಿಐ ಈ ಸೂಚನೆ ಕೊಟ್ಟಿದೆ. ಮೃತಪಟ್ಟಿರುವ ಮಹಿಳೆಯ ತಂದೆ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿದ್ದರು. ಸಾಲ ಮರು ವಸೂಲಾತಿಗೆ ಬಂದಿದ್ದ ಏಜೆಂಟರು ಟ್ರ್ಯಾಕ್ಟರ್ ಅನ್ನು ಬಲವಂತವಾಗಿ ತೆಗೆದುಕೊಂಡು ಹೋಗಲು ಯತ್ನಿಸಿದಾಗ ಮಹಿಳೆ ತಡೆಯಲು ಯತ್ನಿಸಿದ್ದರು. ಆಗ ಟ್ರ್ಯಾಕ್ಟರ್ ಢಿಕ್ಕಿ ಹೊಡೆದು ಮೃತಪಟ್ಟಿದ್ದರು. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
ಹೀಗಿದ್ದರೂ, ಮಹೀಂದ್ರಾ & ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸ್ ತನ್ನದೇ ಉದ್ಯೋಗಿಗಳನ್ನು ಬಳಸಿಕೊಂಡು ಸಾಲ ಮರು ವಸೂಲಾತಿ ಕೈಗೊಳ್ಳಬಹುದು.