ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ಗಳ (Floating Rate Savings Bonds 2020 Taxable- FRSB ) ಬಡ್ಡಿ ದರವನ್ನು ಈಗಿನ 7.15%ರಿಂದ 7.35%ಕ್ಕೆ ಏರಿಸಿದೆ.
2022ರ ಡಿಸೆಂಬರ್ 30ರಂದು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ಆರ್‌ಬಿಐ ಈ ವಿಷಯ ತಿಳಿಸಿದೆ. ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ (NSC) ಬಡ್ಡಿ ದರಗಳನ್ನು ಏರಿಸಿದ ಬಳಿಕ ಆರ್‌ಬಿಐ ಬಾಂಡ್‌ಗಳ ಬಡ್ಡಿ ದರ ಕೂಡ ಪರಿಷ್ಕರಣೆಯಾಗಿದೆ.
ಈ ಬಾಂಡ್‌ನಲ್ಲಿ ಕನಿಷ್ಠ ಹೂಡಿಕೆ 1000 ರೂ.ಗಳಿಂದ ಆರಂಭವಾಗುತ್ತದೆ. ಗರಿಷ್ಠ ಮಿತಿ ಇರುವುದಿಲ್ಲ. 7 ವರ್ಷಗಳ ಅವಧಿ ಇರುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅವಧಿಗೆ ಮುನ್ನ ಹಿಂತೆಗೆತಕ್ಕೂ ಅವಕಾಶ ಇದೆ. ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1ಕ್ಕೆ ಬಡ್ಡಿ ಜಮೆಯಾಗುತ್ತದೆ.