ಮುಂಬಯಿ: ಮುಂಬರುವ ಅಕ್ಟೋಬರ್‌ನಿಂದ ಬೆಲೆಗಳು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರ್ಥಿಕ ಶೃಂಗವೊಂದರಲ್ಲಿ ಶನಿವಾರ ಭಾಗವಹಿಸಿದ ಅವರು, ” ನಮ್ಮ ಅಂದಾಜಿನ ಪ್ರಕಾರ ೨೦೨೨-೨೩ರ ದ್ವಿತೀಯಾರ್ಧದಲ್ಲಿ ಹಣದುಬ್ಬರ ಕ್ರಮೇಣ ಇಳಿಕೆಯಾಗಲಿದೆ. ಪೂರೈಕೆಯ ವಿಭಾಗದಲ್ಲಿ ಚೇತರಿಕೆಯಾಗುತ್ತಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯ ಪ್ರಬಲ ಚೇತರಿಕೆಯ ಲಕ್ಷಣಗಳು ಕಾಣಿಸಿದೆ. ಸರಕುಗಳು, ಕಚ್ಚಾ ವಸ್ತುಗಳ ದರಗಳಲ್ಲಿ (Commodity) ಇಳಿಕೆಯಾಗುತ್ತಿದೆ. ಇದು ಹಣದುಬ್ಬರ ಇಳಿಕೆಗೆ ಸಹಕರಿಸಲಿದೆʼʼ ಎಂದರು.
ಕಳೆದ ಮೂರು ವರ್ಷಗಳಲ್ಲಿ ಜಾಗತಿಕ ಬಿಕ್ಕಟ್ಟುಗಳು ಭಾರತದ ಮೇಲೆ ಪ್ರಭಾವ ಬೀರಿದೆ. ಕೋವಿಡ್ ಬಿಕ್ಕಟ್ಟು, ರಷ್ಯಾ-ಉಕ್ರೇನ್ ಸಂಘರ್ಷ ಪ್ರಭಾವ ಬೀರಿದೆ. ಹೀಗಿದ್ದರೂ ಈ ಅವಧಿಯಲ್ಲಿ ಭಾರತ ಎಲ್ಲ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದರು. ಉಕ್ಕು, ಅಲ್ಯುಮಿನಿಯಂ, ತಾಮ್ರ ಇತ್ಯಾದಿ ಲೋಹಗಳ ದರಗಳಲ್ಲಿ ಇತ್ತೀಚೆಗೆ ದರ ಇಳಿಕೆಯಾಗಿದೆ. ಇದು ಹಣದುಬ್ಬರ ಒತ್ತಡವನ್ನು ಇಳಿಸುವ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: Good News | ಹಬ್ಬದ ವೇಳೆಗೆ ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿಗಳ ದರದಲ್ಲಿ ಇಳಿಕೆ ನಿರೀಕ್ಷೆ