ನವದೆಹಲಿ: ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಾದ ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ (Kotak Mahindra Bank) 3.95 ಕೋಟಿ ರೂ. ಮತ್ತು ಐಸಿಐಸಿಐ ಬ್ಯಾಂಕ್‌ಗೆ (ICICI Bank) 12.19 ಕೋಟಿ ರೂಪಾಯಿ ದಂಡವನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಮಂಗಳವಾರ ವಿಧಿಸಿದೆ. ಈ ಎರಡೂ ಬ್ಯಾಂಕುಗಳು ಕೆಲವು ನಿಯಂತ್ರಕ ಮಾನದಂಡಗಳನ್ನು ಪಾಲನೆ ಮಾಡದ ಕಾರಣ ಆರ್‌ಬಿಐ ಈ ದಂಡವನ್ನು ವಿಧಿಸಿದೆ(RBI Slaps Fine).
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿನ ಕೆಲವು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಸೇವಾ ಪೂರೈಕೆದಾರರ ವಾರ್ಷಿಕ ಪರಿಶೀಲನೆ ನಡೆಸಲು ವಿಫಲ, ಗ್ರಾಹಕರೊಂದಿಗೆ ಸಂಪರ್ಕದ ಸಮಯವನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ.
ಅಲ್ಲದೇ, ನಿಯಮಗಳಿಗೆ ವಿರುದ್ಧವಾದ, ನಿಜವಾದ ವಿತರಣಾ ದಿನಾಂಕಕ್ಕಿಂತ ಹೆಚ್ಚಾಗಿ ವಿತರಣಾ ದಿನಾಂಕದಿಂದ ಬಡ್ಡಿಯನ್ನು ವಿಧಿಸುವ ಟೀಕೆಗಳನ್ನೂ ಈ ಬ್ಯಾಂಕು ಎದುರಿಸುತ್ತಿತ್ತು. ಈ ಎಲ್ಲ ಕಾರಣಗಳಿಂದಾಗಿ ಆರ್‌ಬಿಐ ದಂಡ ವಿಧಿಸಿದೆ. ಮರುಪಾವತಿ ಅಥವಾ ಬ್ಯಾಂಕ್ ಪ್ರಾರಂಭಿಸಿದ ಸಾಲಗಳ ಮೇಲಿನ ಪೂರ್ವಪಾವತಿ ದಂಡವನ್ನು ಒದಗಿಸುವ ಸಾಲ ಒಪ್ಪಂದದಲ್ಲಿ ಷರತ್ತುಗಳಿಲ್ಲದೆ ಸ್ವತ್ತುಮರುಸ್ವಾಧೀನ ಶುಲ್ಕಗಳನ್ನು ವಿಧಿಸಿದ್ದಕ್ಕಾಗಿ ಕೋಟಾಕ್ ವಿರುದ್ಧ ದಂಡ ವಿಧಿಸಲಾಯಿತು ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: RBI Guidelines: ಆರ್‌ಬಿಐ ಹೊಸ ರೂಲ್ಸು, 30 ದಿನದಲ್ಲಿ ಸಾಲಗಾರರಿಗೆ ಆಸ್ತಿಗಳ ದಾಖಲೆ ನೀಡದಿದ್ರೆ ನಿತ್ಯ 5000 ರೂ. ದಂಡ!
ಇನ್ನು, ಐಸಿಐಸಿಐ ಬ್ಯಾಂಕ್ ತನ್ನ ನಿರ್ದೇಶಕ ಮಂಡಳಿಯಲ್ಲಿರುವ ಇಬ್ಬರಿಗೆ ಕಾನೂನುಬಾಹಿರವಾಗಿ ಸಾಲ ನೀಡಿದ್ದಕ್ಕಾಗಿ ಭಾರೀ ಮೊತ್ತದ ದಂಡವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದೆ. ಇಷ್ಟು ಮಾತ್ರವಲ್ಲದೇ, ಈ ಬ್ಯಾಂಕ್, ಹಣಕಾಸತೇರ ಉತ್ಪನ್ನಗಳ ಮಾರಾಟ ಮತ್ತು ಅವುಗಳ ಮಾರ್ಕೆಟಿಂಗ್‌ನಲ್ಲಿ ತೊಡಗಿತ್ತು ಮತ್ತು ವಂಚನೆಗಳ ಕುರಿತು ನಿರ್ದಿಷ್ಟ ಸಮಯದಲ್ಲಿ ಆರ್‌ಬಿಐಗೆ ವರದಿ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿತ್ತು. ಈ ಎಲ್ಲ ಉಲ್ಲಂಘನೆಗಳು ಬ್ಯಾಂಕ್ ವಿರುದ್ಧ ಭಾರೀ ಮೊತ್ತದ ದಂಡವನ್ನು ವಿಧಿಸುವಲ್ಲಿ ಸಾಕಾಗುತ್ತದೆ ಭಾವಿಸಿ, ಕ್ರಮ ಕೈಗೊಂಡಿದೆ.