ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ೧.೦೫ ಕೋಟಿ ರೂ. ದಂಡವನ್ನು ವಿಧಿಸಿದೆ. ಇಂಡಸ್‌ಇಂಡ್ ಬ್ಯಾಂಕ್‌ಗೆ ಕೂಡ ೧ ಕೋಟಿ ರೂ. ದಂಡ ವಿಧಿಸಿದೆ.
ಆರ್‌ಬಿಐನ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬ್ಯಾಂಕ್‌ಗಳಿಗೆ ದಂಡ ವಿಧಿಸಲಾಗಿದೆ. ೨೦೨೨ರ ಜೂನ್ ೨೯ರಂದು ಹೊರಡಿಸಿದ ಆದೇಶದಲ್ಲಿ, ಬ್ಯಾಂಕಿಂಗ್ ನಿಯಮಗಳು ಮತ್ತು ಗ್ರಾಹಕರ ಹಿತರಕ್ಷಣೆಯ ಕ್ರಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿದೆ.
ಆರ್‌ಬಿಐ ೨೦೧೮ರ ಮಾರ್ಚ್ ೩೧ರಿಂದ ೨೦೧೯ರ ಮಾರ್ಚ್ ೩೧ರ ತನಕ ಈ ಬ್ಯಾಂಕ್‌ಗಳ ಕಾರ್ಯವೈಖರಿಯನ್ನು ತಪಾಸಣೆಗೆ ಒಳಪಡಿಸಿತ್ತು.