Site icon Vistara News

Interest rate | ಆರ್‌ಬಿಐ ರೆಪೊ ದರ 0.35% ಏರಿಕೆ, ಸಾಲದ ಇಎಂಐನಲ್ಲಿ 23% ತನಕ ಹೆಚ್ಚಳ ನಿರೀಕ್ಷೆ

rbi governer

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬುಧವಾರ ತನ್ನ ರೆಪೊ ದರವನ್ನು 0.35% ಏರಿಸಿದೆ. ಇದರೊಂದಿಗೆ ರೆಪೊ ದರ 6.25ಕ್ಕೆ ಏರಿಕೆಯಾಗಿದೆ. ಹೀಗಾಗಿ ಸಾಲದ ಇಎಂಐ ಹೆಚ್ಚಳದ ಹೊರೆಗೆ ಸಾಲಗಾರರು ತತ್ತರಿಸುವಂತಾಗಿದೆ.

ರೆಪೊ ದರ ಆಧರಿತ ಸಾಲಗಳ ಇಎಂಐನಲ್ಲಿ 23% ತನಕ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಉದಾಹರಣೆಗೆ ಈ ವರ್ಷ ಮಾರ್ಚ್‌ನಲ್ಲಿ 20 ವರ್ಷಗಳ ಅವಧಿಗೆ 30 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರೆ, ಆಗ ಇದ್ದ 7% ಬಡ್ಡಿ ದರ 2023ರ ಜನವರಿ ವೇಳೆಗೆ 9.25%ಕ್ಕೆ ಏರಿಕೆಯಾಗಲಿವೆ. ಇಎಂಐ (ಸಮಾನ ಮಾಸಿಕ ಕಂತು) 23,258 ರೂ.ಗಳಿಂದ 27,387 ರೂ.ಗೆ ಏರಿಕೆಯಾಗಲಿದೆ. ಹೀಗಿದ್ದರೂ, ಸಾಲದ ಅವಧಿ 30 ವರ್ಷ ಆಗಿದ್ದರೆ ಇಎಂಐ 23% ಹೆಚ್ಚಳ ಆಗಲಿದೆ.

ಮುಂದಿನ 12 ತಿಂಗಳಿನಲ್ಲಿ ಹಣದುಬ್ಬರದ ಪ್ರಮಾಣ 4% ಗಿಂತ ಮೇಲಿರಬಹುದು ಎಂದು ಆರ್‌ಬಿಐ ತಿಳಿಸಿದೆ. ಆದರೆ ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ರೆಪೊ ದರ ಹೆಚ್ಚಿಸಿದ ಪರಿಣಾಮ ಸಾಲಗಾರರ ಎಲ್ಲ ಫಿಕ್ಸೆಡ್‌ ಹಾಗೂ ಫ್ಲೋಟಿಂಗ್‌ ದರದ ಸಾಲಗಳು ದುಬಾರಿಯಾಗಲಿದೆ.

ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು. ಈ ಹಿಂದೆ 0.50 % ಲೆಕ್ಕದಲ್ಲಿ ಬಡ್ಡಿ ದರವನ್ನು ಏರಿಸಿದ್ದ ಆರ್‌ಬಿಐ ಈ ಸಲ 0.25%-0.30% ರ ಮಟ್ಟದಲ್ಲಿ ಏರಿಕೆ ಮಾಡುವ ನಿರೀಕ್ಷೆ ಇತ್ತು.

ವಿಶ್ವಾದ್ಯಂತ ಸೆಂಟ್ರಲ್‌ ಬ್ಯಾಂಕ್‌ಗಳು ಬೆಳವಣಿಗೆ ಮತ್ತು ಹಣದುಬ್ಬರದ ನಡುವೆ ಸಮತೋಲನ ಸಾಧಿಸಬೇಕಾದ ಸವಾಲುಗಳನ್ನು ಎದುರಿಸುತ್ತಿವೆ. ಈಗ ರೆಪೊ ದರ 5.90% ಇದೆ. 0.30 ಹೆಚ್ಚಿಸಿದರೆ 6.20%ಕ್ಕೆ ಏರಿಕೆಯಾಗಲಿದೆ.

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ರಿಸರ್ವ್‌ ಬ್ಯಾಂಕ್‌ ಕಳೆದ ಜೂನ್‌ ಬಳಿಕ ಮೂರು ಸಲ ಬಡ್ಡಿ ದರವನ್ನು ಏರಿಸಿತ್ತು. ರೆಪೊ ದರ ಎಂದರೆ, ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ನೀಡುವ ಬಡ್ಡಿ ದರ. ಈ ಹಣವನ್ನು ಬ್ಯಾಂಕ್‌ಗಳು ಸಾಲದ ವಹಿವಾಟಿಗೆ ಬಳಸುತ್ತವೆ.

ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಡ್ಡಿ ದರ ಏರಿಸುವ ಸಾಧ್ಯತೆ ಇತ್ತು. ಎರಡನೆಯದಾಗಿ ಇದುವರೆಗಿನ ಬಡ್ಡಿ ದರ ಹೆಚ್ಚಳದಿಂದ ಅಭಿವೃದ್ಧಿಗೆ ತೊಡಕಾಗಿಲ್ಲ. ಹೀಗಾಗಿ ಬಡ್ಡಿ ದರ ಏರಿಕೆ ನಿರೀಕ್ಷಿಸಲಾಗಿತ್ತು. ಕಳೆದ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಜಿಡಿಪಿ ಮೌಲ್ಯ 75.02 ಲಕ್ಷ ಕೋಟಿ ರೂ. ಇದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 68.36 ಲಕ್ಷ ಕೋಟಿ ರೂ. ಇತ್ತು.

Exit mobile version