Site icon Vistara News

Banking : ಶಾಖೆಗಳನ್ನು ಮಾರ್ಚ್‌ 31 ತನಕ ತೆರೆಯಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

reserve bank of india office

RBI Monetary Policy Meeting Today; decision likely to maintain status quo, feel experts

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) ಬ್ಯಾಂಕ್‌ ಶಾಖೆಗಳಿಗೆ 2023ರ ಮಾರ್ಚ್‌ 31 ತನಕ ತೆರೆಯಲು ಸೂಚನೆ ನೀಡಿದೆ. 2022-23ರ ಆರ್ಥಿಕ ವರ್ಷ ಮಾರ್ಚ್‌ 31ಕ್ಕೆ ಮುಕ್ತಾಯವಾಗುತ್ತಿರುವುದರಿಂದ, ಅಲ್ಲಿಯವರೆಗೆ ಕೆಲಸದ ಅವಧಿಯಲ್ಲಿ ಬ್ಯಾಂಕ್‌ ಶಾಖೆಗಳನ್ನು ತೆರೆಯುವಂತೆ ಸೂಚಿಸಲಾಗಿದೆ.

ಸರ್ಕಾರದ ಎಲ್ಲ ವರ್ಗಾವಣೆಗಳು ಏಜೆನ್ಸಿ ಬ್ಯಾಂಕ್‌ಗಳ ಮೂಲಕ ನಡೆಯಬೇಕಿದ್ದು, 2022-23 ರ ಲೆಕ್ಕಪತ್ರಗಳು ಮಾರ್ಚ್‌ 31ರೊಳಗೆ ಇತ್ಯರ್ಥವಾಗಬೇಕಿರುವುದರಿಂದ ಮಾರ್ಚ್‌ 31 ತನಕ ಬ್ಯಾಂಕ್‌ ಶಾಖೆಗಳನ್ನು ತೆರೆಯುವಣತೆ ಆರ್‌ಬಿಐ ಸೂಚಿಸಿದೆ.

ನ್ಯಾಶನಲ್‌ ಎಲೆಕ್ಟ್ರಾನಿಕ್‌ ಫಂಡ್ಸ್‌ ಟ್ರಾನ್ಸ್‌ಫರ್‌ (National electronic funds transfer -NEFT) ಮತ್ತು ರಿಯಲ್‌ ಟೈಮ್‌ ಗ್ರಾಸ್‌ ಗ್ರಾಸ್‌ ಸೆಟ್ಲ್‌ಮೆಂಟ್‌ (RTGS) 2023ರ ಮಾರ್ಚ್‌ 31 ರ ಮಧ್ಯರಾತ್ರಿ 12ರ ತನಕ ಮುಂದುವರಿಯಲಿದೆ.

ಸರ್ಕಾರಿ ಚೆಕ್‌ಗಳ ಸಂಗ್ರಹ ಮತ್ತು ಕ್ಲಿಯರೆನ್ಸ್‌ ಸಲುವಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಆರ್‌ಬಿಐ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವರ್ಗಾವಣೆಗೆ ಸಂಬಂಧಿಸಿ ರಿಪೋರ್ಟಿಂಗ್‌ ವಿಂಡೋವನ್ನು ಏಪ್ರಿಲ್‌ 1 ತನಕ ತೆರೆದಿಡಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

Exit mobile version