Site icon Vistara News

Digital currency: ಭಾರತದ ಡಿಜಿಟಲ್‌ ಕರೆನ್ಸಿ ಹಂತಗಳಲ್ಲಿ ಚಲಾವಣೆ ಸಾಧ್ಯತೆ, ಆರ್‌ಬಿಐ ವಾರ್ಷಿಕ ವರದಿ ಇಂಗಿತ

RBI

ಮುಂಬಯಿ: ಭಾರತದ ಸ್ವಂತ ಡಿಜಿಟಲ್‌ ಕರೆನ್ಸಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧ್ಯಯನ ನಡೆಸುತ್ತಿದ್ದು, ಹಂತಗಳಲ್ಲಿ ಚಲಾವಣೆಗೆ ತರುವ ಸಾಧ್ಯತೆ ಇದೆ.

ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸುವುದಕ್ಕೆ ಮೊದಲು ಅದರ ಸಾಧಕ ಮತ್ತು ಬಾಧಕಗಳ ಬಗ್ಗೆ ಆರ್‌ಬಿಐ ಅಧ್ಯಯನ ನಡೆಸುತ್ತಿದೆ. ಆರ್‌ಬಿಐ ಮೇ 27ರಂದು ಬಿಡುಗಡೆಗೊಳಿಸಿದ ವಾರ್ಷಿಕ ವರದಿಯಲ್ಲಿ, ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸಲು “ಹಂತಗಳ ವಿಧಾನʼ ಅನುಸರಿಸಲಾಗುವುದು ಎಂದು ತಿಳಿಸಿದೆ.

ಆರ್‌ಬಿಐನ ಹಣಕಾಸು ನೀತಿ, ಹಣಕಾಸು ಸ್ಥಿರತೆ, ಕರೆನ್ಸಿ ಮತ್ತು ಪೇಮೆಂಟ್‌ ವ್ಯವಸ್ಥೆಗಳ ಉದ್ದೇಶಗಳಿಗೆ ಪೂರಕವಾಗಿ ಡಿಜಿಟಲ್‌ ಕರೆನ್ಸಿ ಇರಬೇಕಾಗುತ್ತದೆ ಎಂದು ವಾರ್ಷಿಕ ವರದಿ ತಿಳಿಸಿದೆ.

ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯನ್ನು ( CBDC) 2022-23ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು.

ಈ ಬಗ್ಗೆ 2022ರ ಹಣಕಾಸು ವಿಧೇಯಕದಲ್ಲಿ ಕಾಯಿದೆಗೆ ತಿದ್ದುಪಡಿಯನ್ನು ಸೇರಿಸಲಾಗಿತ್ತು. ಸಿಬಿಡಿಸಿಗೆ ಆರ್‌ ಬಿಐನ ಮಾನ್ಯತೆ ಇರಲಿದ್ದು, ಡಿಜಿಟಲರ್‌ ಕರೆನ್ಸಿಯ ಸ್ವರೂಪದಲ್ಲಿ ಇರಲಿದೆ. ಇತರ ನೋಟಿನಂತೆ ಇದಕ್ಕೆ ಮಾನ್ಯತೆ ಸಿಗಲಿದೆ. ಸ್ವರೂಪ ಮಾತ್ರ ಭಿನ್ನ.

ಆರ್‌ಬಿಐ ಇನ್ನೊವೇಶನ್‌ ಹಬ್ (RBIIH) ಅನ್ನು ಸ್ಥಾಪಿಸಿದ್ದು, ಇದು ರಿಸರ್ವ್‌ ಬ್ಯಾಂಕ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಕಚೇರಿ ಬೆಂಗಳೂರಿನಲ್ಲಿದ್ದು, ಹಣಕಾಸು ಉದ್ಯ, ಅಕಾಡೆಮಿ ವಲಯದ ಪ್ರಮುಖರು ಇದರ ಮಂಡಳಿಯಲ್ಲಿ ಇದ್ದಾರೆ. ಹಣಕಾಸು ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

Exit mobile version