Site icon Vistara News

RBI Monetary Policy : 2,000 ರೂ. ನೋಟುಗಳಲ್ಲಿ ಬ್ಯಾಂಕ್‌ಗಳಿಗೆ ಸಿಕ್ಕಿದ್ದು 50%

2000 rupees note

#image_title

ಮುಂಬಯಿ: ಚಲಾವಣೆಯಲ್ಲಿದ್ದ 2,000 ರೂ. ನೋಟುಗಳಲ್ಲಿ ಸುಮಾರು ಅರ್ಧದಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಇದುವರೆಗೆ ಮರಳಿವೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ. (RBI Monetary Policy) ಹಣಕಾಸು ನೀತಿ ಪರಾಮರ್ಶೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್‌ ಈ ವಿಷಯ ತಿಳಿಸಿದರು.

2023ರ ಮಾರ್ಚ್‌ ಅಂತ್ಯದ ವೇಳೆಗೆ 3.62 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಚಲಾವಣೆಯಲ್ಲಿ ಇತ್ತು. ಇದರಲ್ಲಿ 1.8 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ಮರಳಿ ಬಂದಿವೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ. 85% ನೋಟುಗಳು ಬ್ಯಾಂಕ್‌ಗಳಿಗೆ ಠೇವಣಿಗಳ ರೂಪದಲ್ಲಿ ಮರಳಿವೆ. ಇದು ನಿರೀಕ್ಷಿತವಾಗಿತ್ತು ಎಂದು ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ.

2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವ ಪರಿಣಾಮ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರೂ. ಠೇವಣಿ ಸಿಗಲಿದೆ ಎಂದು ಬ್ಯಾಂಕಿಂಗ್‌ ತಜ್ಞರು ನಿರೀಕ್ಷಿಸಿದ್ದಾರೆ. ಠೇವಣಿ ಸಂಗ್ರಹಕ್ಕೆ ತಗಲುವ ವೆಚ್ಚ ಇಳಿಕೆಯಾಗಲಿದೆ. 2018ರ ಮಾರ್ಚ್‌ನಲ್ಲಿ 6.73 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳಿದ್ದವು.

ಆರ್‌ಬಿಐ ಮೇನಲ್ಲಿ ತನ್ನ ಸ್ವಚ್ಛ ನೋಟು ನೀತಿಯ ಭಾಗವಾಗಿ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿತ್ತು. ಜನರು ಸೆಪ್ಟೆಂಬರ್‌ 30ರ ತನಕ 2000 ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಲು ಅವಕಾಶ ಇದೆ. ಬಳಿಕವೂ ಇದಕ್ಕೆ ಕಾನೂನು ಮಾನ್ಯತೆ ಇರುತ್ತದೆ.

2,000 ರೂ. ನೋಟನ್ನು 2016ರ ನವೆಂಬರ್‌ನಲ್ಲಿ ನೋಟು ಅಮಾನ್ಯತೆಯ (denomination) ವೇಳೆ ಬಿಡುಗಡೆ ಮಾಡಲಾಗಿತ್ತು. ಆಗ 500 ರೂ. ಹಾಗೂ 1,000 ರೂ. ನೋಟನ್ನು ಅಮಾನ್ಯ ಮಾಡಲಾಗಿತ್ತು. 10 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ರಾತ್ರೋರಾತ್ರಿ ಅಮಾನ್ಯವಾಗಿತ್ತು. ಆಗಿನ ಪರಿಸ್ಥಿತಿಗೆ 2,000 ರೂ. ನೋಟನ್ನು ಬಿಡುಗಡೆ ಮಾಡುವ ಅನಿವಾರ್ಯತೆ ಇತ್ತು. ನೋಟುಗಳ ಹಿಂತೆಗೆತದ ಬಳಿಕ ಆ ಹಣದ ಮೌಲ್ಯವನ್ನು ತಕ್ಷಣ ವ್ಯವಸ್ಥೆಗೆ ಸೇರಿಸುವ ಉದ್ದೇಶಕ್ಕಾಗಿ 2,000 ರೂ. ನೋಟನ್ನು ಬಿಡುಗಡೆ ಮಾಡಲಾಯಿತು ಎಂದು ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ತಿಳಿಸಿದ್ದಾರೆ. 2018ರಲ್ಲಿ 2,000 ನೋಟು ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು.

ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು (2000 Notes Withdrawn) ಜನತೆ ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಲು ಅವಸರ ಮಾಡಬೇಕಿಲ್ಲ. ಸಾವಕಾಶವಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು (RBI Governor Shakti‌ Kanta Das) ತಿಳಿಸಿದ್ದಾರೆ.

ಇದನ್ನೂ ಓದಿ: 2000 Notes withdrwan : ಬ್ಯಾಂಕ್‌ ಎಫ್‌ಡಿ ಬಡ್ಡಿ ದರ ಏರಿಕೆ ಶೀಘ್ರ ಅಂತ್ಯ ಸಂಭವ, ಕಾರಣವೇನು?

Exit mobile version